ಕೆಲವರು ಕೆಲಸ ಮಾಡದೇ ನೇರವಾಗಿ ದೊಡ್ಡ ಸ್ಥಾನಕ್ಕೆ ಬರಬೇಕೆಂದುಕೊಳ್ಳುತ್ತಾರೆ : ಮಲ್ಲಿಕಾರ್ಜುನ್ ಖರ್ಗೆ

Bengaluru : ನಾನು ಒಂದೊಂದೇ ಹಂತಗಳನ್ನು ಏರುತ್ತಾ ಈ ಸ್ಥಾನಕ್ಕೆ ಬಂದಿದ್ದೇನೆ. ಕೆಲವರು ಸಂಘಟನೆಯ ಯಾವ ಹಂತದಲ್ಲೂ(Mallikarjun Kharge Strike) ಕೆಲಸ ಮಾಡದೇ ನೇರವಾಗಿ ದೊಡ್ಡ ಸ್ಥಾನಕ್ಕೆ ಬರಬೇಕೆಂದುಕೊಳ್ಳುತ್ತಾರೆ.

ಹಾಗಾಗಬಾರದು, ನಾವು ಸೇವೆ ಮಾಡಬೇಕು, ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದರೆ ನಿಶ್ಚಿತವಾಗಿ ನಾವು ನಮ್ಮ ಗುರಿ ತಲುಪುತ್ತೇವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge Strike) ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ  ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಇಂದು ನೀವು ಗೌರವಿಸಿ, ಅಭಿನಂದಿಸಲು ಈ ಕಾರ್ಯಕ್ರಮ ಮಾಡಿದ್ದೀರಿ. ಆದರೆ ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಅಸ್ತಿತ್ವಕ್ಕೆ ಬಂದಾಗ ಮಾತ್ರ.

ನಾವೆಲ್ಲರೂ ಒಟ್ಟಾಗಿ ಈ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು.

ಇದನ್ನೂ ಓದಿ : https://vijayatimes.com/review-of-banaras/

ವರ್ಷಕ್ಕೆ 2 ಕೋಟಿ ಕೊಡುವುದಾಗಿ ಹೇಳಿದ್ದರು. ಹೊಸ ಉದ್ಯೋಗ ಸೃಷ್ಟಿಸುವುದಿರಲಿ ಖಾಲಿ ಇರುವ ಖಾಲಿ ಹುದ್ದೆಗಳನ್ನೂ ತುಂಬುತ್ತಿಲ್ಲ.

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನ, ಕಾಂಗ್ರೆಸ್ ಅವಧಿಯಲ್ಲಿ ತರಲಾದ ಎಸ್ಸಿಪಿ ಟಿಎಸ್ಪಿ ಯೋಜನೆ ಅನುದಾನ ನೀಡದೆ ಅವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆಗಳನ್ನು ತುಂಬುತ್ತೆವೆ. ನಾವು ಅವಧಿಯಲ್ಲಿ ಶಿಕ್ಷಣ ಇಲಾಖೆಯ 18,000 ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದ್ದೆವು.

ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ? ಯುವ ಜನತೆಗೆ ಯಾಕೆ ಉದ್ಯೋಗ ನೀಡುತ್ತಿಲ್ಲ?

ರಾಹುಲ್ ಗಾಂಧಿ(Rahul Gandhi) ಅವರ ಭಾರತ ಐಕ್ಯತಾ ಯಾತ್ರೆಯ ಜನಪ್ರಿಯತೆ, ಅವರ ಬಗೆಗಿನ ಜನರ ಪ್ರೀತಿ ಬಿಜೆಪಿಗೆ ನಡುಕ ಹುಟ್ಟಿಸಿದೆ.

ನೀವು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಯೋಚಿಸಬೇಡಿ, ನಾವು ಒಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದರು.

https://youtu.be/AOZCDXADxBQ ಒಂದೇ ಕುಟುಂಬದಿಂದ 7 ಯುವ ಕೃಷಿಕರು.

70 ವರ್ಷದಲ್ಲಿ ಏನು ಮಾಡಿದಿರಿ ಎಂದು ಕೆಲವರು ನಮ್ಮನ್ನ ಕೇಳುತ್ತಾರೆ. ನಾವು ಜನತೆಗೆ ತಿಳಿಸಬೇಕು, 70 ವರ್ಷ ಏನೂ ಮಾಡದಿದ್ದಿದ್ದರೆ ಈ ದೇಶ ಇಷ್ಟು ಸದೃಢವಾಗಿ, ಒಂದಾಗಿ ಇರಲು ಸಾಧ್ಯವಿರಲಿಲ್ಲ.

ನೆಹರು ಅವರು ಹಾಕಿದ ಪ್ರಜಾಪ್ರಭುತ್ವದ ಭದ್ರ ಬುನಾದಿ ಅಳವಾಗಿ ಈ ದೇಶದಲ್ಲಿ ಬೇರು ಬಿಟ್ಟಿದ್ದು ಕಾಂಗ್ರೆಸ್ನಿಂದ.

ಯಾವುದೇ ಪಕ್ಷದಲ್ಲಿ ಕೇವಲ ಸ್ಥಾನಮಾನಕ್ಕಾಗಿ ಸೇರುವುದಲ್ಲ, ಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷದ ತತ್ವ – ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕಾಗುತ್ತದೆ.

ನೆಹರೂ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳನ್ನು ತಿಳಿದುಕೊಳ್ಳದಿದ್ದರೆ ಮಾಡಬೇಕಾದ ಕೆಲಸದ ಬಗ್ಗೆ ನಮಗೆ ಸ್ಪಷ್ಟತೆ ಇರುವುದಿಲ್ಲ ಎಂದು ಹೇಳಿದರು.

Exit mobile version