ಮಂಗನ ದಾಳಿಯಿಂದ ವ್ಯಕ್ತಿಯ ಸಾವು : ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ

Davanagere: ಮಂಗವೊಂದು ಪಿಎಲ್​ಡಿ ಬ್ಯಾಂಕ್ (PLD Bank) ಉಪಾಧ್ಯಕ್ಷನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆ ದಾವಣಗೆರೆ (Man death – Monkey Attack) ಜಿಲ್ಲೆಯ ಹೊನ್ನಾಳಿ

ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿತ್ತು. ಈಗ ಆ ಮಂಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅರಕೆರೆ ಗ್ರಾಮ ನಿವಾಸಿ ಗುತ್ಯಪ್ಪ (Gutyappa) (60) ಅವರು ಕೋತಿ ದಾಳಿಗೆ ನಿನ್ನೆ ಬಲಿಯಾಗಿದ್ದರು. ಮುಂಜಾನೆ ವೇಳೆ ಮನೆಯಿಂದ ಹೊರಗೆ ಬಂದಾಗ ಮಂಗ ದಾಳಿ ನಡೆಸಿತ್ತು. ಗಂಭೀರವಾಗಿ

ಗಾಯಗೊಂಡಿದ್ದ ಗುತ್ಯಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.

ಇನ್ನು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (M P Renukacharya) ಅವರು ಸ್ಥಳಕ್ಕೆ ಆಗಮಿಸಿ ಮೃತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದರು. ಇದೇ ವೇಳೆ ಗ್ರಾಮಸ್ಥರೊಂದಿಗೆ

ಮಾತನಾಡಿದ ರೇಣುಕಾಚಾರ್ಯ ಅವರಿಗೆ ಮಂಗನ ಹಾವಳಿಯ ಬಗ್ಗೆ (Man death – Monkey Attack) ಮಾಹಿತಿ ನೀಡಿದ್ದರು.

ಮಂಗನ (Monkey) ದಾಳಿ ಬಗ್ಗೆ ಮಾಹಿತಿ ತಿಳಿದು ಗ್ರಾಮಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕೋತಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು. ಅದರಂತೆ, ಕಳೆದ ಎರಡುಗಳ

ದಿನಗಳಿಂದ ಕಾರ್ಯಾಚರಣೆ ಆರಂಭಿಸಿದ್ದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರ ಸಹಾಯದೊಂದಿಗೆ ಇಂದು ಕೋತಿಯನ್ನು ಸೆರೆ ಹಿಡಿದಿದ್ದಾರೆ.

ಕಾಡಿನ ಪಕ್ಕ ಗ್ರಾಮ ಇರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಗ್ರಾಮಕ್ಕೆ ರಕ್ಷಣೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕೋತಿಯನ್ನು ಹಿಡಿದು ಬೋನ್​ನಲ್ಲಿ (Bone) ಇಡಲಾಗಿದೆ.

ಇನ್ನು ಇದೇ ವೇಳೆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಗಾಜಾ ಪಟ್ಟಿಯಲ್ಲಿ ಹಮಾಸ್ 16 ವರ್ಷಗಳ ಆಳ್ವಿಕೆ ಕೊನೆ, ಗಾಜಾ ಇಸ್ರೇಲ್ ವಶ: ಇಸ್ರೇಲ್​​ ರಕ್ಷಣಾ ಸಚಿವ

Exit mobile version