ಸಕ್ಕರೆ ನಾಡಲ್ಲಿ ಕಾವೇರಿದ ಕಾವೇರಿ ಹೋರಾಟ: ಮಂಡ್ಯ, ಮದ್ದೂರು ಬಂದ್‌ಗೆ ಭಾರೀ ಬೆಂಬಲ

Mandya: ಮಂಡ್ಯದಲ್ಲಿ ಕಾವೇರಿದ ಕಾವೇರಿ ಹೋರಾಟ. ತಮಿಳುನಾಡಿಗೆ (Mandya Maddur bandh) ನೀರು ಬಿಡುತ್ತಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಿದ್ದು, ಭಾರೀ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಮಂಡ್ಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಮದ್ದೂರಿನಲ್ಲಿಯೂ ಕೂಡ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಕೂಡ ಬಂದ್‌ ಮಾಡಿ ಪ್ರತಿಭಟನೆ ನಡೆಸಿರುವ ಕಾರಣ

ಎರಡು ನಗರಗಳ ನಡುವಿನ ಸಂಚಾರ (Mandya Maddur bandh) ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.


ಕೇವಲ ಮಂಡ್ಯ ಮಾತ್ರವಲ್ಲದೇ ಮದ್ದೂರು (Maddur) ನಗರವನ್ನು ಕೂಡ ಬಂದ್‌ ಮಾಡಲಾಗಿದ್ದು, ಎರಡು ನಗರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವಾಹನ ಸಂಚಾರ ಕೂಡ ಸ್ಥಗಿತವಾಗಿದೆ.

ಖಾಸಗಿ ಶಾಲಾ – ಕಾಲೇಜುಗಳು ಬಹುತೇಕ ಬಂದ್ ಆಗಿದ್ದು, ಬಂದ್‌ಗೆ ವರ್ತಕರು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.


ಬೆಳಗ್ಗೆ 8 ಗಂಟೆಯಿಂದಲೇ ಮಂಡ್ಯದಲ್ಲಿ ಹೋರಾಟ ಆರಂಭವಾಗಿದ್ದು, ನಗರದ ಜಯಚಾಮರಾಜೇಂದ್ರ ಒಡೆಯರ್ (Jayachamarajendra Odeya) ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಉರುಳು

ಸೇವೆ ನಡೆಯಿತು. ಬೈಕ್ ರ್ಯಾಲಿಯನ್ನು(Rally) ನಗರದ ಮುಖ್ಯ ರಸ್ತೆಗಳಲ್ಲಿ ಕೂಡ ನಡೆಸಲಾಯಿತು. ಕಾವೇರಿ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಕೂಡ ಸಾಥ್‌ ನೀಡಿದ್ದು, ಬಂದ್‌ ಹಿನ್ನೆಲೆಯಲ್ಲಿ

ಪೊಲೀಸರು ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.


ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಭಾಗವಹಿಸಿದ್ದು, ಮಂಡ್ಯದ ಸಂಜಯ್‌ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅವರ ಜೊತೆಗೆ ಮಂಡ್ಯದ ಜೆಡಿಎಸ್ (JDS) ಮಾಜಿ ಶಾಸಕರು,

ಕಾಂಗ್ರೆಸ್‌ನ ಕೆಲನಾಯಕರು ಹೋರಾಟದಲ್ಲಿ ಪಾಲ್ಗೊಂಡಿದ್ದು, ಇನ್ನು ಮಧ್ಯಾಹ್ನ 12 ಗಂಟೆಗೆ ದಿಲ್ಲಿಯಿಂದ ನೇರವಾಗಿ ಆಗಮಿಸುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (H.D.Kumarswamy)

ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.


ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮಂಡ್ಯ ರಕ್ಷಣಾ ವೇದಿಕೆಯಿಂದ ವಿನೂತನ ಪ್ರತಿಭಟನೆ ನಡೆಯಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಟ್ಟು ರಸ್ತೆಯಲ್ಲಿ ಟೀ

ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು – ಮೈಸೂರು (Bengaluru-Mysore) ಹಳೇ ಹೆದ್ದಾರಿ ತಡೆದು ಪ್ರತಿಭಟನೆಯನ್ನು ನಡೆಸಿದ ಪ್ರತಿಭಟನಾಕಾರರು ರಸ್ತೆಯಲ್ಲೇ ಮಲಗಿ

ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.


ಪ್ರಾಧಿಕಾರ ಸುಪ್ರೀಂ ಕೋರ್ಟ್ (Supreme Court) ವಿರುದ್ಧ ರೈತರಿಗೆ ಮೋಸ ಮಾಡಿ ನೀರು ಬಿಟ್ಟಿದ್ದಾರೆಂದು ಬಾಯಿ ಬಾಯಿ ಬಡಿದುಕೊಂಡು ಅಸಮಾಧಾನ ಹೊರ ಹಾಕಿದ ರೈತರು ಧಿಕ್ಕಾರ ಕೂಗಿದರು.

ಕಾಲೇಜು ವಿದ್ಯಾರ್ಥಿಗಳು ಕಾವೇರಿ ಹೋರಾಟಕ್ಕೆ ಧುಮುಕಿದ್ದು, ಮಂಡ್ಯದ ಸಂಜಯ್ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮದ್ದೂರು ಪಟ್ಟಣದ ಹೆಚ್ ಕೆ ವೀರಣ್ಣಗೌಡ ಕಾಲೇಜು ವಿದ್ಯಾರ್ಥಿಗಳು

ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಎರಡು ನಗರಗಳಲ್ಲಿ ಖಾಕಿ ಅಲರ್ಟ್!
ಬಂದ್‌ ಹಿನ್ನೆಲೆ ಎರಡು ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಅಹಿತಕರ ಘಟನೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಕ್ಕೆ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಎಸ್ಪಿ, ಎಎಸ್ಪಿ,

ಮೂವರು ಡಿವೈಎಸ್ಪಿ (DYSP), ಇನ್ಸ್ ಪೆಕ್ಟರ್(Inspector), ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಜೊತೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿ

ನಿಯೋಜಿಸಲಾಗಿದೆ.

ಇದನ್ನು ಓದಿ: ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

Exit mobile version