ಮಂಗಳೂರು : ಮಂಗಳೂರಿನಲ್ಲಿ (Mangaluru Auto Blast) ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಪೊಲೀಸರು ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಪೋಟ ಎಂದು ಭಾವಿಸಿದ್ದರು, ಆದರೆ ತನಿಖೆ ಮುಂದುವರೆದಂತೆ ತನಿಖಾಧಿಕಾರಿಗಳು ಪ್ರಕರಣದಲ್ಲಿ ಭಯೋತ್ಪಾದಕ (Terrorism) ನಂಟಿರುವುದನ್ನು ಪತ್ತೆ ಮಾಡಿದ್ದಾರೆ.

ಮಂಗಳೂರು ಸ್ಫೋಟದಲ್ಲಿ ಆಟೋ ರಿಕ್ಷಾ ಚಾಲಕ ಹಾಗೂ ಓರ್ವ ಪ್ರಯಾಣಿಕನಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಆಟೋ ರಿಕ್ಷಾ ಚಾಲಕನನ್ನು ವಿಚಾರಿಸಿದಾಗ, ಪ್ರಯಾಣಿಕರು ಬ್ಯಾಗ್ನಲ್ಲಿ ಏನನ್ನೋ ಹೊತ್ತೊಯ್ದಿದ್ದು, ಬೆಂಕಿ ಹೊತ್ತಿಕೊಂಡು ವಾಹನಕ್ಕೆ ವ್ಯಾಪಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹೆಚ್ಚಿನ ತನಿಖೆಯು ಪೊಲೀಸರಿಗೆ ಭಯೋತ್ಪಾದನೆಯ ಸಂಚನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ತನಿಖಾಧಿಕಾರಿಗಳು ಪ್ರಮುಖ ಶಂಕಿತನ ಮನೆಯಿಂದ ಸ್ಫೋಟಕ ವಸ್ತುಗಳನ್ನು ಮತ್ತು ಹಲವಾರು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಭಯೋತ್ಪಾದನೆಯ ಸಂಚು ಬಯಲಿಗೆ ಬಂದಿದ್ದು ಹೇಗೆ?
ನಕಲಿ ಗುರುತಿನ ಚೀಟಿ ಹೊಂದಿದ್ದ ಶಂಕಿತ ಪ್ರಯಾಣಿಕರು ಮಂಗಳೂರು ರೈಲ್ವೆ ಜಂಕ್ಷನ್ನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು(Auto Rickshaw) ನಾಗೂರಿನಲ್ಲಿ ಹತ್ತಿದರು.
ಆಟೋ ಚಲಿಸುತ್ತಿರುವಾಗ ಪ್ರಯಾಣಿಕರ ಬಳಿ ಇದ್ದ ಕುಕ್ಕರ್ ಸ್ಪೋಟಗೊಂಡಿದೆ. ಸ್ಫೋಟ ಸಂಭವಿಸಿದ ನಂತರ ಡಿಟೋನೇಟರ್, ವೈರ್ಗಳು ಮತ್ತು ಬ್ಯಾಟರಿಗಳು ಸ್ಥಳದಲ್ಲಿ ಪತ್ತೆಯಾಗಿದೆ. ಹೀಗಾಗಿ ಇದೊಂದು ಭಯೋತ್ಪಾದಕ ಕೃತ್ಯ ಎಂದು ಸಾಭೀತಾಗಿದೆ.

ಇನ್ನು ಮಂಗಳೂರಿನಲ್ಲಿ ಸ್ಫೋಟ ನಡೆದ ಒಂದು ದಿನದ ನಂತರ, (Mangaluru Auto Blast) ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು, “ ಈ ಸ್ಫೋಟ ಭಯೋತ್ಪಾದಕ ಕೃತ್ಯವಾಗಿದ್ದು,
ಘಟನೆಯ ಕುರಿತು ಆಳವಾದ ತನಿಖೆ ನಡೆಯುತ್ತಿದೆ. ಸ್ಫೋಟವು ಆಕಸ್ಮಿಕವಲ್ಲ, ಇದು ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯವಾಗಿದೆ.
https://vijayatimes.com/bengaluru-students-detained/
ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರೀಯ ಏಜೆನ್ಸಿಗಳೊಂದಿಗೆ ಜೊತೆಗೂಡಿ ಆಳವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಟೋ ರಿಕ್ಷಾ ಪ್ರಯಾಣಿಕ. ಆತನನ್ನು ಮೊಹಮ್ಮದ್ ಶಾರಿಕ್ ಎಂದು ಗುರುತಿಸಲಾಗಿದೆ.
https://youtu.be/nz64LK6IYf4 ಕೆರೆ ನಾಪತ್ತೆ! ಸುಪ್ರೀಂ ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದ ಬಿಬಿಎಂಪಿ.
ಆರೋಪಿ ವಿರುದ್ಧ ಈ ಹಿಂದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಯೋತ್ಪಾದನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
- ಮಹೇಶ್.ಪಿ.ಎಚ್