ಪ್ರಚೋದನಕಾರಿ ಭಾಷಣ ಹಿನ್ನಲೆ, ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲು

ಒಂದು ಸಮುದಾಯದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲಾಗಿದೆ.

“ಮುಸ್ಲಿಮರು ಲವ್ ಜಿಹಾದ್ ನಿಲ್ಲಿಸಬೇಕು.ಇಲ್ಲವಾದಲ್ಲಿ ಶೇ 70ರಷ್ಟು ಇರುವ ಹಿಂದೂಗಳು, ಮುಸ್ಲಿಂ ಹೆಣ್ಣು ಮಕ್ಕಳನ್ನು ಮತಾಂತರ ಮಾಡೋಕೆ ಎರಡು ದಿನ ಸಾಕು. ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಹೆಣ್ಣು ಮಕ್ಕಳನ್ನು ಲವ್ ಮಾಡೋಕೆ ಹೊರಟರೆ, ಮುಸ್ಲಿಮರ ಮನೆಯಲ್ಲಿ ಬುರ್ಖಾ ಕಾಣೋದಿಲ್ಲ. ಪ್ರತೀ ಮನೆಯ ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ” ಅಂತಾ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಜೊತೆಗೆ ಚೈತ್ರಾ ಕುಂದಾಪುರ ಮತ್ತು ಕಾರ್ಯಕ್ರಮ ಹಮ್ಮಿಕೊಂಡ ಬಜರಂಗದಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತುಳುನಾಡಿನ ವೀರಪುರುಷರಾದ ಕೋಟಿ, ಚೆನ್ನಯರ ಸುರ್ಯವನ್ನು ಬಜರಂಗದಳ ಕಾರ್ಯಕರ್ತರ ತಲ್ವಾರಿಗೆ ಹೋಲಿಸಿದ್ದು ಅಕ್ಷಮ್ಯ ಇದು ತುಳುವರ ಧಾರ್ಮಿಕ ನಂಬಿಕೆಗೆ ಘಾಸಿ ಉಂಟು ಮಾಡುವ ಪ್ರಯತ್ನ ಈಕೆಯ ಭಾಷಣದಿಂದ ಎರಡು ಧರ್ಮಗಳ ನಡುವೆ ದ್ವೇಷ ಹರಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ. ಒಂದು ಕೋಮಿನ ಜನರನ್ನು ಅವಮಾನಿಸಿದ್ದಲ್ಲದೆ, ಇನ್ನೊಂದು ಕೋಮಿನ ವಿರುದ್ಧ ಎತ್ತಿಕಟ್ಟುವ ರೀತಿ ಭಾಷಣ ಮಾಡಿರುವ ಚೈತ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ಆಗ್ರಹಿಸಿದ್ದಾರೆ.

ಇದಲ್ಲದೆ, ಕಾಂಗ್ರೆಸ್ ಪಕ್ಷದ ಬಂಟ ಸಮುದಾಯಕ್ಕೆ ಸೇರಿದ ಮಾಜಿ ಸಚಿವರೊಬ್ಬರ ಮಗಳು ಮುಸ್ಲಿಂ ಯುವಕನ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಆತನನ್ನು ಮದುವೆಯಾಗಲು ಹಠ ಹಿಡಿದಿದ್ದಾಳೆಂದು ಭಾಷಣದಲ್ಲಿ ಉಲ್ಲೇಖಿಸಿ, ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬಗ್ಗೆ ಸುಳ್ಳು ಮಾಹಿತಿಯನ್ನು ಸಾರ್ವಜನಿಕವಾಗಿ ಹೇಳಿ, ಅವಮಾನಿಸಿದ್ದು ಅತ್ಯಂತ ಕೆಟ್ಟ ನಡವಳಿಕೆಯಾಗಿದೆ. ಇದರಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು. ಪೊಲೀಸರ ಸಮ್ಮುಖದಲ್ಲಿಯೇ ಈ ರೀತಿಯ ಹೇಳಿಕೆ ನೀಡಿರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಿತ್ತರಂಜನ್ ತಿಳಿಸಿದ್ದಾರೆ.

ಇನ್ನೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನದ ಬಗ್ಗೆಯೂ ಭಾಷಣದಲ್ಲಿ ಮಾತನಾಡಿದ ಚೈತ್ರಾ ಕುಂದಾಪುರ, ಕಾರ್ಯಕರ್ತರಿಗೆ ತಲ್ವಾರ್ ಹಿಡಿಯೋಕೆ ಪ್ರೇರೇಪಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

Exit mobile version