ಗಾಯಕಿ ಈಗ ನಾಯಕಿ ; ಇವರ ನಿರ್ದೇಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಮಂಗ್ಲಿ ಪಾದಾರ್ಪಣೆ!

Bengaluru : ದಕ್ಷಿಣ ಚಿತ್ರರಂಗದ ಬಹು ಬೇಡಿಕೆಯ ಹಾಡುಗಾರ್ತಿ ಮಂಗ್ಲಿ ಇದೀಗ ನಟನೆಯತ್ತ (mangli enter in cinema) ಮುಖ ಮಾಡಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ತೆಲುಗಿನಲ್ಲಿ ಬಿಡುಗೆಡೆಯಾದ ನಟ ದರ್ಶನ್ (Darshan) ಅವರ ರಾಬರ್ಟ್ (Roberrt) ಚಿತ್ರದ ʼಕಣ್ಣೇ ಅಧಿರಿಂದಿʼ ಹಾಡನ್ನು ಸಿನಿಮಾ ಪ್ರಚಾರದ ವೇಳೆ ಒಂದಿಷ್ಟು ಸಾಲನ್ನು ಹಾಡಿ ,

ಅಂದೇ ಪ್ರೇಕ್ಷಕರ ಮನ ಗೆದ್ದಿದ್ದ ಗಾಯಕಿ ಮಂಗ್ಲಿ, ಹಾಡು ಬಿಡುಗಡೆಗೊಂಡ ಬಳಿಕ ಮತ್ತಷ್ಟು ಯಶಸ್ವಿಯಾಗಿ,

ಅನೇಕರಿಗೆ ಚಿರಪರಿಚಿತಗೊಂಡರು. ಗಾಯಕಿ ಮಂಗ್ಲಿ (Mangli) ಅವರ ಧ್ವನಿಯಲ್ಲಿ ನಮ್ಮ ಚಿತ್ರಕ್ಕೊಂದು ಹಾಡು ಹಾಡಿಸಬೇಕು ಎಂದು ಯೋಚಿಸುತ್ತಿರುವ ಅನೇಕ ಚಿತ್ರ ನಿರ್ದೇಶಕರು,

ನಿರ್ಮಾಪಕರ ನಡುವೆ ಮಂಗ್ಲಿ ಅವರನ್ನು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಪರಿಚಯಿಸಬೇಕು ಎಂದು ಇಲ್ಲೊಬ್ಬರು ನಿರ್ದೇಶಕರು ಈಗಾಗಲೇ ತಯಾರಿ ನಡೆಸಿದ್ದಾರೆ!ಹೌದು,

ಕನ್ನಡ ಚಿತ್ರಗಳಾದ ದಿಲ್ ಪಸಂದ್ (Dil Pasand) , ತ್ರಿಬಲ್ ರೈಡಿಂಗ್ (Tribble Riding) ಮತ್ತು ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ತೆಲುಗು ಗಾಯಕಿ ಮಂಗ್ಲಿ,

ಇದೀಗ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ : https://vijayatimes.com/soaked-almond-benefits/

ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ನಟಿಯಾಗಿ ಎಂಟ್ರಿ ಕೊಡುತ್ತಿರುವ ಗಾಯಕಿ ಮಂಗ್ಲಿ ʼಪಾದರಾಯʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದ್ದು, ಪಾದರಾಯ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ನಿರ್ದೇಶಿಸಲಿದ್ದಾರೆ.

ಈ ಚಿತ್ರಕ್ಕೆ ನಾಗಶೇಖರ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಕೆಲ ತೆಲುಗು ಸಿನಿಮಾಗಳಲ್ಲಿ ಮಂಗ್ಲಿ ನಟಿಸಿದ್ದರು. ಆದ್ರೆ,ಯಾವ ಚಿತ್ರದಲ್ಲೂ ಪೂರ್ಣಪ್ರಮಾಣದ ನಾಯಕಿಯಾಗಿ (mangli enter in cinema) ಕಾಣಿಸಿಕೊಂಡಿರಲಿಲ್ಲ!

ಇದೀಗ ಪಾದರಾಯ ಚಿತ್ರದ ಮುಖೇನ ಪೂರ್ಣಪ್ರಮಾಣದ ನಟಿಯಾಗಿ ಹೊರಹೊಮ್ಮಲಿದ್ದಾರೆ. ಪಾದರಾಯ ಚಿತ್ರಕ್ಕೆ ಕಥೆ, ಚಿತ್ರಕಥೆ,

ಸಂಭಾಷಣೆ ಬರೆದಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸದ್ಯ ಚಿತ್ರೀಕರಣದ ಪೂರ್ವ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಈ ಚಿತ್ರ ಒಂದು ನೈಜ ಘಟನೆಯನ್ನು ಒಳಗೊಂಡಿದ್ದು, 2014-2023 ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ, ಆರು ರಾಜ್ಯಗಳಿಗೆ ಸಂಬಂಧಿಸಿದ ಘಟನೆಯನ್ನು ಪಾದರಾಯ ಚಿತ್ರದ ಮೂಲಕ ಪ್ರದರ್ಶಿಸಲಾಗುತ್ತದೆ.

ಈ ಘಟನೆಯೇ ಚಿತ್ರದ ಜೀವಾಳವಾಗಿದೆ. ಪಾದರಾಯ ಚಿತ್ರಕ್ಕೆ ಕನ್ನಡ ಚಿತ್ರರಂಗದ ಬೆಸ್ಟ್ ಮ್ಯೂಸಿಕ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅಜನೀಶ್ ಲೋಕನಾಥ್ (B. Ajaneesh Loknath)

ಅವರು ಸಂಗೀತ ಸಂಯೋಜಿಸಲಿದ್ದಾರೆ. ಆಂಟೋನಿ ಅವರ ಸಂಕಲನದ ಜಾದೂ ಇರಲಿದೆ ಎಂದು ಹೇಳಲಾಗಿದೆ.

Exit mobile version