ಗೂಂಡಾಗಿರಿ ಅಂತ್ಯವಾಗಬೇಕಾದರೆ, ಬಿಜೆಪಿ ಕಛೇರಿಯನ್ನು ಮೊದಲು ಕೆಡವಬೇಕು : ಮನೀಶ್ ಸಿಸೋಡಿಯಾ !

MANISH SISODIA

ದೆಹಲಿಯ ಜಹಾಂಗೀರ್‍ಪುರಿಯಲ್ಲಿ ಜೆಸಿಬಿ ಬಳಸಿ ಬಡವರ ಮನೆ, ಶೆಡ್‍ಗಳನ್ನು ನೆಲಸಮಗೊಳಿಸಲಾಯಿತು. ಮನೆಗಳನ್ನು ನೆಲಸಮಗೊಳಿಸಿದ್ದೇಕೆ? ಕೆಡವಲಾದ ಅತಿಕ್ರಮಣ ಕಟ್ಟಡಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಆರೋಪಿಸಿದೆ! ಬಿಜೆಪಿ ಸರ್ಕಾರ ಅವರನ್ನೆಲ್ಲಾ ಗುರಿಯಾಗಿಸಿಕೊಂಡು ಬುಲ್ಡೋಜರ್ ಬಳಸಿ ಕಟ್ಟಡಗಳ ಉರುಳಿಸುವ ಯೋಜನೆ ರೂಪಿಸಿದೆ. 15 ವರ್ಷಗಳಿಂದ ಲಂಚ ಸ್ವೀಕರಿಸಿ ಈ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಿದ ನಾಯಕರ ಮನೆಗಳನ್ನು ಬಿಜೆಪಿ ಬುಲ್ಡೋಜರ್‍ಗಳು ಯಾವಾಗ ನೆಲಸಮ ಮಾಡಲಿದೆ ಎಂದು ಪ್ರಶ್ನಿಸಿದ್ದಾರೆ.

ಈ ಕಾರ್ಯಕ್ಕೆ ಮುಂದಾದವರ ಮನೆಗಳನ್ನು ಕೆಡವುದು ಯಾವಾಗ? ಈ ಉತ್ತರವನ್ನು ಬಿಜೆಪಿಯೇ ಹೇಳಬೇಕು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಬಿಜೆಪಿ ಆಡಳಿತದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎನ್‍ಡಿಎಂಸಿ) ಜಹಾಂಗೀರ್‍ಪುರಿಯಲ್ಲಿ ಬೆಳಗ್ಗೆ 10 ಗಂಟೆ ಸಮಯಕ್ಕೆ 9 ಬುಲ್ಡೋಜರ್ ಬಳಸಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಅನುಮಾನಸ್ಪದ ಆರೋಪಿಗಳ ಮನೆ, ಶೆಡ್ ಕೆಡವಲು ಮುಂದಾದರು, ಈ ಬಗ್ಗೆ ಭಾರತದ ಮೂಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಸುಪ್ರಿಂ ಕೋರ್ಟ್ ಪೀಠ, ಮುಂದಿನ ವಿಚಾರಣೆ ಹೊರಬರುವವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಎಂದು ಆದೇಶ ಹೊರಡಿಸಿತು.

ಸುಪ್ರೀಂ ಮೂಲಕ ಬಂದ ಮೊದಲ ಆದೇಶಕ್ಕೆ ಬಗ್ಗದೆ, ಕಾರ್ಯಾಚರಣೆಯನ್ನು ನಿಲ್ಲಿಸದೇ ಮುಂದುವರೆಸಲಾಯಿತು. ಮೊದಲ ಆದೇಶವನ್ನು ಮೀರಿದ ಕೂಡಲೇ ಸುಪ್ರೀಂ ದ್ವಿತೀಯ ಬಾರಿಗೆ ಆದೇಶವನ್ನು ಹೊರಡಿಸಿತು. ಇದಾದ ಬಳಿಕ ಕೆಲ ಜೆಸಿಬಿ ನಿಲ್ಲಿಸಿದರೇ, ಎಂಸಿಡಿ ಅಧಿಕಾರಿಗಳು ಅದೇಶದ ಪ್ರತಿಯನ್ನು ಲೆಕ್ಕಿಸದೇ ಕೇವಲ ಅಂಗಡಿಗಳನ್ನು ಮಾತ್ರವಲ್ಲದೇ ಮಸೀದಿಯ ಕಾಂಪೌಂಡ್ ಮತ್ತು ಗೇಟ್‍ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಈ ಮಟ್ಟಕ್ಕೆ ದ್ವೇಷ, ಅಶಾಂತಿ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಬಿಜೆಪಿಯೇ ನೇರ ಕಾರಣ, ಗೂಂಡಾಗಿರಿ ಕೊನೆಗೊಳಿಸಲು ನಾವು ಬಿಜೆಪಿ ಕೇಂದ್ರ ಕಚೇರಿಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡವೇಕಿದೆ ಎಂದು ಮನೀಶ್ ಸಿಸೋಡಿಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version