ಚಿನ್ನದ ಸರದ ಬೆಲೆಗೆ ಸಮ ಈ `ಮನೋಹರಿ ಗೋಲ್ಡ್ ವೆರೈಟಿ’ ಟೀ ಬೆಲೆ ; ಕೇಳಿದ್ರೆ ನೀವು ಶಾಕ್ ಆಗ್ತೀರಾ!

Manohari

ಬೆಳಗ್ಗಿನ ಎನರ್ಜಿ ಡ್ರಿಂಕ್ ಎಂದೇ ಪ್ರಸಿದ್ಧವಾಗಿರುವ ಚಹಾವನ್ನು(Tea) ಕಂಡುಹಿಡಿದದ್ದು ಚೀನಾ(China), ಆದರೆ ಬಹುಶಃ ಇದು ಭಾರತದಲ್ಲಿ ಜನಪ್ರಿಯವಾದಷ್ಟು ಬೇರೆ ಯಾವ ದೇಶದಲ್ಲಿಯೂ ಆಗಿಲ್ಲ.

ಪ್ರತಿ ಮನೆಯಿಂದ ಹಿಡಿದು, ಪ್ರತಿ ಬೀದಿಯವರೆಗೆ, ಚಹಾ ಮಾರುವ ಗಾಡಿಯಲ್ಲಿ 5-10 ಜನರ ಗುಂಪನ್ನು ನೀವು ನೋಡಿಯೇ ಇರುತ್ತೀರಿ. ಅನೇಕ ರೀತಿಯ ಚಹಾಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಈ ಚಹಾದ ಬಗ್ಗೆ ತಿಳಿದರೆ ನೀವು ದಿಗ್ಭ್ರಮೆಗೊಳ್ಳುವುದು ಖಂಡಿತ. ಮನೋಹರಿ ಗೋಲ್ಡ್ ವೆರೈಟಿ(Manohari Gold Variety) ಚಹಾ ಅಸ್ಸಾಂನ(Assam) ದಿಬ್ರುಘರ್(Dibrughar) ಜಿಲ್ಲೆಯಲ್ಲಿನ ಚಹಾ ಎಲೆಯಲ್ಲಿ ತಯಾರಿಸಿದ ಚಹಾವಾಗಿದೆ.

ಈ ಚಹಾ ಒಂದು ಚಿನ್ನದ ಸರದ ಬೆಲೆಯಷ್ಟು ದುಬಾರಿಯಾಗಿದೆ. ಹೌದು, ಅಸ್ಸಾಂನ ದಿಬ್ರುಘರ್ ಜಿಲ್ಲೆಯಲ್ಲಿ ಈ ವಿಶೇಷ ಚಹಾವನ್ನು ಪ್ರತಿ ಕೆ.ಜಿ.ಗೆ 99,999ರೂ.ಗಳಿಗೆ ಹರಾಜು ಮಾಡಲಾಗಿದೆ! ಅಷ್ಟೊಂದು ದುಬಾರಿ ಚಹಾ ಎಲೆ ಇದಾಗಿದ್ದು, ಇದರ ವೈಶಿಷ್ಟ್ಯಗಳು ಏನು ಎನ್ನುವುದನ್ನು ನೋಡೋಣ. ಮನೋಹರಿ ಟೀ ಗಾರ್ಡನ್ ತನ್ನ ‘ಮನೋಹರಿ ಗೋಲ್ಡ್’ ವೆರೈಟಿ ಚಹಾವನ್ನು ಸೌರಭ್ ಟೀ ಟ್ರೇಡರ್ಸ್ ಗೆ 99,999 ರೂ.ಗಳಿಗೆ ಮಾರಾಟ ಮಾಡಿದೆ. ಇದನ್ನು ಗೋಲ್ಡನ್ ಬಟರ್ ಫ್ಲೈ ಟೀ ಎಂದೂ ಕರೆಯುತ್ತಾರೆ. ಇದು ಯಾಕೆ ಅಷ್ಟೊಂದು ದುಬಾರಿಯಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.


ಈ ಚಹಾವನ್ನು ಎಚ್ಚರಿಕೆಯಿಂದ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಚಿನ್ನದ ಬಣ್ಣದ ಅಥವಾ ಹಳದಿ ಚಹಾ ಎಲೆ ತನ್ನ ವಿಶಿಷ್ಟ ಬಣ್ಣ ಮತ್ತು ಸುವಾಸನೆಗೆ ಪ್ರಸಿದ್ಧವಾಗಿದೆ. ಇದನ್ನು ಚಹಾ ಎಲೆಯ ಮರಗಳ ಸಣ್ಣ ಮೊಗ್ಗುಗಳಿಂದ ತಯಾರಿಸಲಾಗಿದೆ. ಇದರ ಉತ್ಪಾದನೆಯಲ್ಲಿ ತುಂಬಾ ಕಡಿಮೆ, ಅದಕ್ಕಾಗಿಯೇ ಜನರು ಇಷ್ಟು ಹೆಚ್ಚಿನ ಬೆಲೆಯನ್ನು ಪಾವತಿಸಿ ಖರೀದಿಸುತ್ತಾರೆ.

Exit mobile version