3ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಕುಸಿದ ವಿಶ್ವದ ಶ್ರೀಮಂತ ವ್ಯಕ್ತಿ ಮಾರ್ಕ್ ಜ಼ುಕರ್ ಬರ್ಗ್!

mark zuckerberg

ಮಾರ್ಕ್ ಜುಕರ್ಬರ್ಗ್(Mark Zukerberg) ಕೇವಲ 9 ತಿಂಗಳಲ್ಲಿ ಅರ್ಧಕ್ಕರ್ಧ ಸಂಪತ್ತು ಕಳೆದುಕೊಂಡಿದ್ದು ಹೇಗೆ? ಫೇಸ್‌ ಬುಕ್‌(Facebook) ಮಾಲೀಕ ಅನುಭವಿಸುತ್ತಿದ್ದಾರೆ ಬಿಗ್ ಲಾಸ್‌.

ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಭಾರೀ ನಷ್ಟದಲ್ಲಿದ್ದು,
ಮೂರರಿಂದ 18 ನೇ ಸ್ಥಾನಕ್ಕೆ ಕುಸಿತವನ್ನು ಕಂಡಿದ್ದಾರೆ.

ಇಡೀ ಪ್ರಪಂಚವನ್ನೇ ತನ್ನ ಬೆರಳ ತುದಿಯಲ್ಲಿ ಆಡಿಸಿ ಕೋಟಿ ಕೋಟಿ ಸಂಪಾದಿಸಿದ್ದ ಮಾರ್ಕ್‌ ಜುಕರ್‌ ಬರ್ಗ್‌ ಭಾರೀ ಸಂಕಷ್ಟದಲ್ಲಿದ್ದಾರೆ. ಪ್ರಪಂಚದ ಮೂರನೇ ಅತೀ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದ ಜುಕರ್‌ ಬರ್ಗ್‌ ಒಂಬತ್ತೇ ತಿಂಗಳಲ್ಲಿ ತನ್ನ ಅರ್ಧಕ್ಕರ್ಧ ಸಂಪತ್ತನ್ನ ಕಳೆದುಕೊಂಡಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಕುಸಿದಿದ್ದಾರೆ! ಇಂಥ ಮಹಾಪತನಕ್ಕೆ ಇರುವ ಅಸಲಿ ಕಾರಣವಾದ್ರೂ ಏನು? ಫೇಸ್ ಬುಕ್ನ ಷೇರ್ ಈ ಪರಿ ಕುಸಿಯಲು ಕಾರಣ ಏನು? ಜುಕರ್‌ ಬರ್ಗ್‌ ಗೆಲುವಿನ ಓಟಕ್ಕೆ ಬಿತ್ತಾ ಬ್ರೇಕ್‌?

ಫೇಸ್‌ಬುಕ್ ಪತನ 3ನೇ ಅತೀ ವ್ಯಕ್ತಿಯಾಗಿದ್ದರು
$142 ಬಿಲಿಯನ್ ಮೌಲ್ಯದ ಆಸ್ತಿ ಇತ್ತು. ಷೇರ್‌ ಬೆಲೆಯೇ $350 ಆಸುಪಾಸಲಿತ್ತು $950 ಶತಕೋಟಿ ಬಂಡವಾಳ ಹೊಂದಿದ್ದರು. ಹೌದು , ಮಾರ್ಕ್ ಜುಕರ್ ಬರ್ಗ್ ಅವರು ಕಟ್ಟಿದ ಮಹಾಸಾಮ್ರಾಜ್ಯ ಕುಸಿತದ ಅಪಾಯದಲ್ಲಿದೆ. ಕಳೆದ ವರ್ಷ ಜುಲೈನಲ್ಲಿ ಜುಕರ್ ಬರ್ಗ್ ಅವರು ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆಗ ಅವರ ಬಳಿ $142 ಬಿಲಿಯನ್ ಮೌಲ್ಯದ ಆಸ್ತಿ ಇತ್ತು. ಫೇಸ್ ಬುಕ್ ಷೇರ್‌ ಬೆಲೆಯೇ $350 ಆಸುಪಾಸಲಿತ್ತು. ಇವರು ಸುಮಾರು $950 ಶತಕೋಟಿ ಮೌಲ್ಯದ ಮಾರುಕಟ್ಟೆ ಬಂಡವಾಳ ಹೊಂದಿದ್ದರು.

ಫೇಸ್‌ಬುಕ್ ಪತನ ಸಂಪತ್ತು $65 ಮಿಲಿಯನ್‌ಗೆ ಕುಸಿದಿದೆ. ಷೇರು ಬೆಲೆ ಶೇ. 50% ರಷ್ಟು ಕುಸಿದಿದೆ. ಅದ್ರೆ ಈಗ ಮಾರ್ಕ್ ಜುಕರ್ ಬರ್ಗ್ ಅವರ ಸಂಪತ್ತು $65 ಮಿಲಿಯನ್‌ಗೆ ಕುಸಿದಿದೆ. ಅಲ್ಲದೆ ಇದೇ ಅವಧಿಯಲ್ಲಿ ಫೇಸ್ ಬುಕ್ ನ ಷೇರು ಬೆಲೆ ಕೂಡ ಶೇಕಡಾ 50% ರಷ್ಟು ಕುಸಿತ ಕಂಡಿದೆ. ಫೇಸ್ ಬುಕ್ ಷೇರು ಕುಸಿಯಲು ಕಾರಣ ಏನು? ಫೇಸ್ ಬುಕ್ ಗೆ ಆಗಿರುವ ನಷ್ಟದ ಹಿಂದೆ ಹಲವಾರು ಕಾರಣಗಳಿವೆ. ಫೇಸ್‌ಬುಕ್‌ ಯಾವಾಗ ಮೆಟಾ ಕಂಪನಿ ಪ್ರಾರಂಭಿಸಿತೋ ಆಗ ಲಾಭ ಪ್ರಮಾಣ ಕುಸಿಯಲಾರಂಭಿಸಿತು. 
ಅಷ್ಟೇ ಅಲ್ಲ ಟಿಕ್ ಟಾಕ್ ಮತ್ತು ಆಪಲ್ ನ ಹೊಸ ಪ್ರೈವೆಸಿ ಬದಲಾವಣೆ ಕೂಡ ಫೇಸ್ ಬುಕ್ ಮತ್ತು mark zuckerberg ಅವರ ಆದಾಯ ಕುಸಿಯಲು ಮುಖ್ಯ ಕಾರಣವಾಗಿದೆ. ಟಿಕ್ ಟಾಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಲೂ ಫೇಸ್ ಬುಕ್ ನ ಷೇರುಗಳು ಕುಸಿಯುತ್ತಿವೆ. ಅಲ್ಲದೆ ಯುವಸಮುದಾಯ ಇತ್ತೀಚೆಗೆ ತಮ್ಮ ಹೆಚ್ಚಿನ ಸಮಯವನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿರುವುದೇ ಫೇಸ್‌ಬುಕ್‌ ಜನಪ್ರಿಯತೆ ಕುಸಿಯಲು ಕಾರಣವಾಗಿದೆ.

ನೋಡಿದ್ರಲ್ಲಾ, ಒಂದು ಸಣ್ಣ ಬದಲಾವಣೆ ಹೇಗೆ ಒಂದು ದೊಡ್ಡ ಸಾಮ್ರಾಜ್ಯವನ್ನು ಮುಳುಗಿಸುತ್ತೆ ಅನ್ನೋದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಬ್ಯುಸಿನೆಸ್‌ನಲ್ಲಿ ಒಂದು ಸಣ್ಣ ನಿರ್ಧಾರ ದೊಡ್ಡ ನಷ್ಟಕ್ಕೆ ನಾಂದಿ ಹಾಡುತ್ತೆ. ಮೆಟಾ ಚಿಹ್ನೆ ಎಷ್ಟೊಂದು ಕುಸಿತಕ್ಕೆ ಕಾರಣವಾಯ್ತು ನೋಡಿ. ಆದ್ರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾರ್ಕ್‌ ಜುಕರ್‌ ಬರ್ಗ್‌ ಈ ಕುಸಿತ ಹೆಚ್ಚು ದಿನ ಉಳಿಯಲ್ಲ. ಈ ಕುಸಿತ ನಮ್ಮ ಆತ್ಮ ವಿಶ್ವಾಸವನ್ನು ಕುಗ್ಗಿಸಿಲ್ಲ. ನಾವು ಮತ್ತೆ ಆ ವೈಭವದ ದಿನಗಳಿಗೆ ಮರಳುತ್ತೇವೆ ಅನ್ನೋ ಆತ್ಮವಿಶ್ವಾಸದ ನುಡಿಗಳನ್ನು ನುಡಿದಿದ್ದಾರೆ.

ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದ ಜುಕರ್ ಬರ್ಗ್‌ ಮತ್ತೆ ಯಶಸ್ಸು ಕಾಣಲಿ. ಫೇಸ್‌ಬುಕ್‌ನ ಯಶಸ್ಸಿನ ನಾಗಲೋಟ ಮುಂದುವರಿಯಲಿ ಅನ್ನೋದು ಎಲ್ಲಾ ಫೇಸ್‌ಬುಕ್ ಫಾಲೋವರ್ಸ್‌ ಆಶಯವಾಗಿದೆ.
Exit mobile version