ಮತ್ತೆ ಸಂಚರಿಸಲಿದೆ ಮುಂಬೈ-ಮಂಗಳೂರು ರೈಲು

ಮಂಗಳೂರು, ಡಿ. 11: ಕರಾವಳಿ ಭಾಗದ ಜನರ ಹಲವು ದಿನಗಳ ಬೇಡಿಕೆಗೆ ಕೊನೆಗೂ ಕೊಂಕಣ ರೈಲ್ವೇ ಒಪ್ಪಿಗೆ ನೀಡಿದೆ. ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಡಿಸೆಂಬರ್ 17ರಿಂದ ರೈಲು ಸಂಚಾರ ನಡೆಸಲಿದೆ ಎಂದು ಕೊಂಕಣ ರೈಲ್ವೆ ಇಲಾಖೆ ತಿಳಿಸಿದೆ.

ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ವಿಶೇಷ ರೈಲು ಡಿಸೆಂಬರ್ 17 ರಿಂದ 31ರ ತನಕ ಸಂಚಾರ ನಡೆಸಲಿದೆ. ಲಾಕ್ ಡೌನ್ ಘೋಷಣೆ ಬಳಿಕ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

ಪ್ರತಿ ದಿನ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ವಿಶೇಷ ರೈಲನ್ನು ಪ್ರಯಾಣ ಶುರುಮಾಡುವುದಾಗಿ ಸೂಚನೆ ನೀಡಲಾಗಿದೆ . ರೈಲು ನಂಬರ್ 02620/02619 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿಗೆ ಬರಲು ಹೊಸ 12 ರೈಲುಗಳು: ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರಿನ ರೈಲ್ವೆ ಇಲಾಖೆಯಿಂದ ತಿಳಿಸಿರುವ ಹಾಗೇ ನೈಋತ್ಯ ರೈಲ್ವೆ 48 ವಿಶೇಷ ರೈಲುಗಳನ್ನು ಓಡಿಸಲಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ 12 ಪ್ಯಾಸೆಂಜರ್ ರೈಲುಗಳು ಸಹ ಸೇರಿವೆ. ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ.ಸುಮಾರು  4 ಕಡೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸಲು ಕಡಿಮೆ ಪ್ರಯಾಣ ಅವಧಿಯ ರೈಲು ಸೇವೆಗಳನ್ನು ಆರಂಭಿಸಲಾಗುತ್ತಿದೆ. ಡಿಸೆಂಬರ್ 7 ರಿಂದ ಈ ರೈಲುಗಳು ಸಂಚಾರ ನಡೆಸಲಿವೆ.

ಯಶವಂತಪುರ-ತುಮಕೂರು-ಯಶವಂತಪುರ ಡಿಸೆಂಬರ್ 7 ರಿಂದ ರೈಲು ನಂಬರ್ 06553/06554 ಯಶವಂತಪುರ-ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನ ರೈಲು ಓಡಲಿದೆ. ಸಮಯ 6.35ಕ್ಕೆ ಹೊರಡಲಿದ್ದು,ಸುಮಾರು  8 ಗಂಟೆಗೆ ತುಮಕೂರು ತಲುಪಲಿದೆ. ರೈಲು ನಂಬರ್ 06554 7.30ಕ್ಕೆ ತುಮಕೂರಿನಿಂದ ಹೊರಡಲಿದ್ದು, ರಾತ್ರಿ 9 ಗಂಟೆಗೆ ಯಶವಂತಪುರ ತಲುಪಲಿದೆ.
 
ರೈಲುಗಳ ವೇಳಾಪಟ್ಟಿ: 02620 ಮಂಗಳೂರು-ಮುಂಬೈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 2.25ಕ್ಕೆ ಹೊರಡಲಿದೆ.ಮೂಲ್ಕಿ, ಉಡುಪಿ (3.48), ಕುಂದಾಪುರ (4.18), ಬೈಂದೂರು, ಮರುಡೇಶ್ವರ, ಹೊನ್ನಾವರ, ಗೋಕರ್ಣ ರೋಡ್, ಅಂಕೋಲಾ, ಕಾರವಾರ,  ಕುಡಾಲ್, ರತ್ನಗಿರಿ, ಮನಗಾಂವ್, ಪನ್ವೇಲ್, ಮೂಲಕ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.

Exit mobile version