ಎಂ ಎಸ್ ಧೋನಿ ಸೇರಿದಂತೆ ಐವರು ಭಾರತೀಯರಿಗೆ ಎಂಸಿಸಿ ಅಜೀವ ಸದಸ್ಯತ್ವ

London : ಇದು ನಿಜವಾಗ್ಲೂ ಭಾರತೀಯ ಕ್ರಿಕೆಟ್‌ ತಾರೆಯರಿಗೆ ಸಂದ ಗೌರವ. ಲಂಡನ್‌ನ ಪ್ರತಿಷ್ಠಿತ ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ (Merrill Bone Cricket Club) ಭಾರತೀಯ ಕ್ರಿಕೆಟ್ ದಿಗ್ಗಜರಾದ ಎಂಎಸ್ ಧೋನಿ (MS Dhoni), ಯುವರಾಜ್ ಸಿಂಗ್, ಸುರೇಶ್ ರೈನ, ಮಿತಾಲಿ ರಾಜ್ ಹಾಗೂ ಜುಲಾನ್ ಗೋಸ್ವಾಮಿ ಅವರಿಗೆ ತನ್ನ (MCC lifeMembership for five Indians) ಅಜೀವ ಸದಸ್ಯತ್ವವನ್ನು ನೀಡಿ ಗೌರವಿಸಿದೆ.

ಎಂಸಿಸಿ (MCC) ಕಳೆದ ಹಲವು ವರ್ಷಗಳಿಂದ ವಿಶ್ವದ ಶ್ರೇಷ್ಠ ಕ್ರಿಕೆಟರಿಗೆ ತನ್ನ ಆಜೀವ ಸದಸ್ಯತ್ವವನ್ನು ನೀಡಿ ಆದರಿಸುತ್ತಿದೆ.


ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಡಿದ ದೊಡ್ಡ ಸಾಧನೆಯನ್ನು ಪರಿಗಣಿಸಿ ಎಂಸಿಸಿ , ಎಂ ಎಸ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನ ಸೇರಿದಂತೆ

ಇನ್ನು ಉಳಿದ ಐವರು ಭಾರತೀಯ ದಿಗ್ಗಜರುಗಳಿಗೆ ಗೌರವಾರ್ಪಣೆ ಮಾಡಿದೆ.

ಇವರಲ್ಲದೆ 8 ರಾಷ್ಟ್ರಗಳ ಒಟ್ಟು 19 ಆಟಗಾರರಿಗೂ ತನ್ನ ಅಜೀವ ಸದಸ್ಯತ್ವವನ್ನು ಎಂಸಿಸಿ ನೀಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ (International cricket)

ಅತಿ ಹೆಚ್ಚು ವಿಕೆಟ್ ಗಳನ್ನು ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ವೇಗಿ ಜೂಲಾನ್ ಗೋಸ್ವಾಮಿ (Pacer Jhulan Goswami)

ಹಾಗೂ ಮಹಿಳಾ ಏಕದಿನ ಪಂದ್ಯದ 211 ಇನ್ನಿಂಗ್ಸ್‌ನಲ್ಲಿ 7805 ರನ್‌ಗಳನ್ನು ಗಳಿಸಿರುವ ಬ್ಯಾಟಿಂಗ್ ತಾರೆ ಮಿತಾಲಿ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದು ನಿಜವಾಗ್ಲೂ ಎಲ್ಲರಿಗೂ ಸಂತಸ ತಂದಿದೆ.

ಇದನ್ನೂ ಓದಿ : https://vijayatimes.com/cattle-transportation-in-rajasthan/


ಇನ್ನು ಭಾರತೀಯ ಕ್ರಿಕೆಟ್‌ ತಂಡ ಕಂಡ ಶ್ರೇಷ್ಠ ಹಾಗೂ ಯಶಸ್ವಿ ನಾಯಕ, 2007 ಮತ್ತು 2011ರ ಐಸಿಸಿ ವಿಶ್ವಕಪ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧೋನಿ ಹಾಗೂ ಯುವರಾಜ್ ಸಿಂಗ್ (Yuvraj Singh)

ಅವರಿಗೆ ಎಂಸಿಸಿ ಅಜೀವ ಸದಸ್ಯತ್ವವನ್ನು ನೀಡಿದೆ. ಇನ್ನು ಭಾರತ ತಂಡದ ಮಾಜಿ ಆಲ್-ರೌಂಡರ್ ಆಗಿರುವ ಸುರೇಶ್ ರೈನಾರವರು ಏಕದಿನ ಕ್ರಿಕೆಟ್ ನಲ್ಲಿ 5500 ರನ್ಗಳನ್ನು ಗಳಿಸಿದ್ದಾರೆ.


ಎಂಸಿಸಿ ಯ ಗೌರವಾನ್ವಿತ ಅಜೀವ ಸದಸ್ಯರನ್ನು ಈ ಸಂದರ್ಭದಲ್ಲಿ ಘೋಷಿಸಲು ರೋಮಾಂಚನವಾಗುತ್ತಿದೆ.

ಇಂದು (ಬುಧವಾರ) ಘೋಷಿಸಿದ ಹೆಸರುಗಳು ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಅಂತರಾಷ್ಟ್ರೀಯ ಆಟಗಾರರಾಗಿದ್ದು ಅವರನ್ನು ನಮ್ಮ ಕ್ಲಬ್ ನ ಮೌಲ್ಯಯುತ ಸದಸ್ಯರನ್ನಾಗಿ ಪರಿಗಣಿಸಲು ಖುಷಿಯಾಗುತ್ತಿದೆ

ಎಂದು ಎಂಸಿಸಿಯ ಮುಖ್ಯ ಕಾರ್ಯನಿರ್ವಾಹಕರಾದ (Chief Executive of MCC) ಮತ್ತು ಕಾರ್ಯದರ್ಶಿಯಾಗಿರುವ ಗೈಲವೆಂಡರ್ ಹೇಳಿದ್ದಾರೆ.

Exit mobile version