ತುಂಬೆಯನ್ನು ಬಳಸಿದರೆ ನಮ್ಮ ದೇಹದಲ್ಲಿ ತುಂಬಿ ತುಳುಕುವುದು ಆರೋಗ್ಯ

Health Tips

ಹಿಂದೆಲ್ಲಾ ಅನಾರೋಗ್ಯ ಎದುರಾದರೆ ನಮ್ಮ ಹಿರಿಯರು ಮನೆಮದ್ದುಗಳ(Medicinal Facts of dhanvantary) ಮೂಲಕವೇ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತಿದ್ದರು. ಆದರೆ ಈಗ, ಅರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾವು ಡಾಕ್ಟರ್ ಬಳಿ ಓಡುತ್ತೇವೆ.

ಆದರೆ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನಮ್ಮ ಸುತ್ತಮುತ್ತಲೇ ಇರುತ್ತದೆ ಎನ್ನುವುದು ನಮಗೆ ತಿಳಿಯುವುದೇ ಇಲ್ಲ. ಹೌದು, ನಮ್ಮ ಸುತ್ತಮುತ್ತಲಿರುವ ಅನೇಕ ಗಿಡಗಳು ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಮನೆಮದ್ದಾಗಿರುತ್ತದೆ.

ಮನೆಯ ಹಿತ್ತಲಿನಲ್ಲಿ ತನ್ನ ಪಾಡಿಗೆ ಹೂಬಿಟ್ಟು, ಬೀಜವಾಗಿ, ಉದುರಿ ಮತ್ತೆ ಹೂಬಿಡುವ ಗಿಡ ತುಂಬೆ. ಹಲವರು ಈ ತುಂಬೆ ಗಿಡದ ಹೆಸರನ್ನು ಕೇಳಿರಬಹುದು. ಶಿವನಿಗೆ ಪ್ರಿಯವಾದ ಹಾಗೂ ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಈ ತುಂಬೆ ಗಿಡ ಔಷದೀಯ ಗುಣಗಳ ಆಗರವಾಗಿದೆ.

ಈ ತುಂಬೆ ಗಿಡ, ಹೆಚ್ಚು ನೀರು ಬಯಸದೇ ಯಾವುದೇ ಜಾಗದಲ್ಲಾದರೂ ಬೆಳೆಯುತ್ತದೆ. ಸುಂದರವಾದ ಪುಟ್ಟ ಪುಟ್ಟ ಹೂವುಗಳಿಂದ ಕಂಗೊಳಿಸುವ ತುಂಬೆ ಗಿಡ, ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಹೊರತುಪಡಿಸಿ ಕಾಮನಬಿಲ್ಲಿನ ಎಲ್ಲಾ ಬಣ್ಣಗಳಲ್ಲೂ ಹೂವು ಬಿಡುತ್ತೆ.

ಕೆಲವು ಗಿಡಗಳಲ್ಲಿ ಹೂವುಗಳು ಎರಡೆರಡು ಬಣ್ಣಗಳಲ್ಲೂ ಇರುತ್ತದೆ. ಬಿಳಿ ಬಣ್ಣದ ತುಂಬೆ ಅತ್ಯಂತ ಶ್ರೇಷ್ಠವೆನಿಸಿದ್ದು ತನ್ನ ಔಷದೀಯ ಗುಣಗಳಿಂದಾಗಿ ಹೆಚ್ಚು ಬಳಕೆಯಲ್ಲಿದೆ. ತಲೆನೋವಿನ ಸಂದರ್ಭದಲ್ಲಿ ತುಂಬೆ ಗಿಡದ ಕಾಂಡ ಮತ್ತು ಹೂವಿನ ಸಮೇತ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನ ಹಬೆಯನ್ನು ತೆಗೆದುಕೊಳ್ಳೋದು ಉತ್ತಮವಾದ ಮನೆಮದ್ದಾಗಿದೆ.
 ತುಂಬೆ ಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ. ಸ್ವಲ್ಪ ಉಪ್ಪು ಮಿಶ್ರಣ ಮಾಡಿದ ಈ ಕಷಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಉದರದ ಸಮಸ್ಯೆಯ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.


ತುಂಬೆ ಗಿಡದ ಎಲೆಯ ರಸವನ್ನು ಹಾವು ಕಡಿದ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಇದರಿಂದ ವಿಷ ರಕ್ತದಲ್ಲಿ ಪಸರಿಸದೇ ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಅಂತ ಹೇಳಲಾಗುತ್ತದೆ. ಸೊಳ್ಳೆಯ ಸಮಸ್ಯೆ ಹಾಗೂ ಅದರಿಂದ ಹರಡುವ ರೋಗಗಳು ಮಹಾನಗರಿಗಳಲ್ಲಿ ಸರ್ವೇಸಾಮಾನ್ಯ.

https://vijayatimes.com/killers-linked-to-isis/

ಆದರೆ ಮನೆಯಲ್ಲಿ ಒಂದು ತುಂಬೆಗಿಡ ನೆಟ್ಟು ನೋಡಿ. ಸೊಳ್ಳೆ ನಿಮ್ಮ ಮನೆಯಿಂದ ಕಾಲ್ಕೀಳುತ್ತದೆ. ಸೊಳ್ಳೆಗಳು ಮಾತ್ರವಲ್ಲ, ಇತರೆ ಕೀಟಗಳ ಕಾಟ ಕೂಡ ನಿಮ್ಮ ಮನೆಯಲ್ಲಿ ಇರುವುದಿಲ್ಲ. ನಿಮ್ಮ ಕಣ್ಣಿನ ಸುತ್ತಲೂ ಕಪ್ಪು ವರ್ತುಲದ ಸಮಸ್ಯೆ, ಆಗಾಗ ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳೋದು,

ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದಲ್ಲಿ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದರಿಂದ ಮುಖ ತೊಳೆಯಿರಿ. ಕಣ್ಣಿಗೆ ತಂಪೆನಿಸುತ್ತದೆ ಮತ್ತು ಆರಾಮದಾಯಕವೆನಿಸುತ್ತದೆ.
Exit mobile version