ಪುರುಷರು ಕಾಂತಿಯುತ, ಕಲೆರಹಿತ ತ್ವಚೆಗಾಗಿ ಈ ದಿನಚರಿ ಪಾಲಿಸಿ

ಸೌಂದರ್ಯ ಮಹಿಳೆಯರಿಗಷ್ಟೇ ಸೀಮಿತವಲ್ಲ. ಕಲೆಮುಕ್ತ, ಕಾಂತಿಯುತ ತ್ವಚೆ ಪಡೆಯಬೇಕೆಂಬುದು ಪ್ರತಿ ಪುರುಷನ ಆಸೆ ಕೂಡ. ಶೇವ್ ಮಾಡಿದ ನಂತರ ಚರ್ಮದ ಕಿರಿಕಿರಿ, ರೇಜರ್ ಕಲೆಗಳು, ಕಪ್ಪು ಕಲೆ ಮತ್ತು ಮೊಡವೆಗಳು ಪುರುಷರು ಅನುಭವಿಸುವ ಸಾಮಾನ್ಯ ಸಮಸ್ಯೆಗಳಾಗಿವೆ. ಆದ್ದರಿಂದ, ಪುರುಷರು ತಮ್ಮ ಚರ್ಮದ ಪ್ರಕಾರ ಡ್ರೈ, ಎಣ್ಣೆಯುಕ್ತ ಅಥವಾ ಕಾಂಬಿನೇಷನ್ ಎಂಬುದು ತಿಳಿದುಕೊಂಡು ಅದಕ್ಕೆ ಮತ್ತು ಸೂಕ್ತವಾದ ಉತ್ಪನ್ನಗಳನ್ನು ಬಳಸುವುದು ಮುಖ್ಯ.

ಈ ಕೆಳಗೆ, ಪುರುಷರು ಕ್ಲೀಯರ್ ಸ್ಕಿನ್ ಪಡೆಯಲು ಪುರುಷರಿಗೆ ಅನುಸರಿಸಬೇಕಾದ ಕ್ರಮಗಳನ್ನು ಹೇಳಿದ್ದೇವೆ:

ಎರಡು ಬಾರಿ ಕ್ಲೆನ್ಸಿಂಗ್ :
ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ಕ್ಲೆನ್ಸ್ ಮಾಡಿ. ಕ್ಲೆನ್ಸಿಂಗ್ ತ್ವಚೆಯಲ್ಲಿರುವ ಹೆಚ್ಚಿನ ಎಣ್ಣೆ, ಎಲ್ಲಾ ಕಲ್ಮಶ, ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಇವೆ ಚರ್ಮ ಸಮಸ್ಯೆಗಳಿಗೆ ಕಾರಣವಾಗುವುದು. ಕ್ಲೆನ್ಸಿಂಗ್ ಚರ್ಮವನ್ನು ತಾಜಾ ಮತ್ತು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ.

ಎಕ್ಸ್‌ಫೋಲಿಯೇಟಿಂಗ್ ಮುಖ್ಯ:
ಪುರುಷರು ವಾರಕ್ಕೆ ಕನಿಷ್ಠ ಎರಡು ಮೂರು ಬಾರಿ ಎಕ್ಸ್‌ಫೋಲಿಯೇಟಿಂಗ್ ಮಾಡಬೇಕು. ಚರ್ಮವನ್ನು ಮೃದುವಾಗಿಸಲು ಮತ್ತು ಕ್ಲಿಯರ್ ಆಗಿ ಕಾಣಲು ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಅನವಶ್ಯಕ ಕೂದಲನ್ನು ತೆಗೆಯಲು ಸಹ ಸಹಾಯ ಮಾಡುತ್ತದೆ. ಆದರೆ ಪ್ರತಿದಿನ ನಿಮ್ಮ ತ್ವಚೆಯನ್ನು ಕಠಿಣವಾದ ಸ್ಕ್ರಬ್ ಗಳಿಂದ ಎಕ್ಸ್‌ಫೋಲಿಯೇಟಿಂಗ್ ಮಾಡಬೇಡಿ. ಏಕೆಂದರೆ ಇದು ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ಸನ್ ಸ್ಕ್ರೀನ್ ನಿಮಗೂ ಅತ್ಯಗತ್ಯ:
ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದು ಚರ್ಮಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿನಿಂದ ರಕ್ಷಿಸುವುದು ಅವಶ್ಯಕ. ಯಾವುದೇ ರೀತಿಯ ಚರ್ಮದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡಲು ಎಸ್‌ಪಿಎಫ್‌ನ 30 ಕ್ಕಿಂತ ಹೆಚ್ಚಿರುವ ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಬಳಸಿ . ಇದು ಕಪ್ಪು ಕಲೆಗಳಂತೆ ಚರ್ಮದ ವಯಸ್ಸಾಗುವಿಕೆಯ ಅಕಾಲಿಕ ಚಿಹ್ನೆಗಳನ್ನು ಸಹ ಕಡಿಮೆ ಮಾಡುತ್ತದೆ.

ಸರಿಯಾದ ಆಹಾರವನ್ನು ತೆಗೆದುಕೊಳ್ಳಿ:
ದೇಹದಲ್ಲಿ ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುವ ಆಹಾರವನ್ನು ಸೇವಿಸಿ. ಹೆಚ್ಚಿನ ಪ್ರಮಾಣದ ಸಕ್ಕರೆ ದೇಹದಿಂದ ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡಲು ಪ್ರಚೋದಿಸುತ್ತದೆ, ಅದು ತೈಲ ಗ್ರಂಥಿಗಳು ಹೆಚ್ಚು ತೈಲವನ್ನು ಬಿಡುಗಡೆ ಮಾಡಲು ಮತ್ತು ಮೊಡವೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಿ.

ಮಾಯಿಶ್ಚರೈಸಿಂಗ್ ಮಾಡಿ:
ಪುರುಷರ ದಿನಚರಿಯಲ್ಲಿ ಮಾಯಿಶ್ಚರೈಸಿಂಗ್ ಬಹಳ ಮುಖ್ಯವಾದ ಹಂತವಾಗಿದೆ. ಕ್ಲೆನ್ಸಿಂಗ್ ಮತ್ತ ಶೇವಿಂಗ್ ಮಾಡುವುದು ಚರ್ಮ ಒಣಗಲು ಕಾರಣವಾಗಬಹುದು, ಆದ್ದರಿಂದ ಆರೋಗ್ಯಕರ ಮತ್ತು ಉತ್ತಮ ಚರ್ಮವನ್ನು ಕಾಪಾಡಿಕೊಳ್ಳಲು ತೇವಾಂಶವನ್ನು ಪುನಃ ತುಂಬಿಸುವುದು ಬಹಳ ಮುಖ್ಯ. ಆದ್ದರಿಂದ ನಿಮ್ಮ ತ್ವಚೆಗೆ ಸರಿಹೊಂದುವಂತಹ ಮಾಯಿಶ್ಚರೈಸರ್ ಆಯ್ಕೆ ಮಾಡಿ.

ಪ್ರತಿದಿನ ಸ್ಕ್ರಬ್:
ಪ್ರತಿ ದಿನವೂ ನಿಮ್ಮ ಚರ್ಮವನ್ನು ಸ್ಕ್ರಬ್ ಮಾಡಿ. ಇದು ರಂಧ್ರಗಳನ್ನು ಬಿಚ್ಚಲು ಸಹಾಯ ಮಾಡುತ್ತದೆ, ತ್ವಚೆಯಿಂದ ಯಾವುದೇ ರೀತಿಯ ಕಲ್ಮಶ ಕಣಗಳನ್ನು ತೆಗೆದುಹಾಕುತ್ತದೆ. ಇದು ಕಪ್ಪು ಮತ್ತು ವೈಟ್‌ಹೆಡ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ:
ಯಾವುದೇ ತ್ವಚೆ ಸಮಸ್ಯೆಗೆ ಅಂತಿಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುವುದು. ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಚರ್ಮವು ಹೊಳೆಯುವಂತೆ ಮಾಡಿ ಮತ್ತು ಆರೋಗ್ಯಕರವಾಗಿಸುತ್ತದೆ.

Exit mobile version