ಭಾಷಣದ ವೇಳೆ ಕಣ್ಣೀರು ಒರೆಸಲು ಮೆಸ್ಸಿ ಬಳಸಿದ ಟಿಶ್ಯೂ ಪೇಪರ್ ಮಾರಾಟವಾಗಿದ್ದು $ 1 ಮಿಲಿಯನ್‌ಗೆ!

New York : ಲಿಯೋನೆಲ್ ಮೆಸ್ಸಿ ಅವರು ಎಫ್‌ಸಿ ಬಾರ್ಸಿಲೋನಾ(Messi Used Tissue Sold) ಫುಟ್ಬಾಲ್ ಕ್ಲಬ್ಗೆ ಭಾವನಾತ್ಮಕ ವಿದಾಯ ಹೇಳಿ ಭಾಷಣ ಮಾಡುವ ಸಂದರ್ಭದಲ್ಲಿ ತಮ್ಮ ಕಣ್ಣೀರನ್ನು ಒರೆಸಲು ಬಳಸಿದ ಟಿಶ್ಯೂ ಪೇಪರ್ ಈಗ $ 1 ಮಿಲಿಯನ್‌ ನಷ್ಟು ದೊಡ್ಡ ಮೊತ್ತಕ್ಕೆ ಮಾರಾಟಕ್ಕಿದೆ ಎಂದು ವರದಿಯಾಗಿದೆ.

ಬಾರ್ಸಿಲೋನಾ ತಂಡದಿಂದ ಲಿಯೊನೆಲ್ ಮೆಸ್ಸಿ(Messi Used Tissue Sold) ನಿರ್ಗಮನವು ಒಂದು ಭಾವನಾತ್ಮಕ ಸಂಗತಿಯಾಗಿದ್ದು, ಅರ್ಜೆಂಟೀನಾ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ವಿದಾಯ ಭಾಷಣ ಮಾಡುವ ಸಮಯದಲ್ಲಿ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು.

ಮೆಸ್ಸಿ ವೇದಿಕೆಯ ಬಳಿ ನಿಂತಿದ್ದಾಗ, ಬಾರ್ಸಿಲೋನಾ ಆಟಗಾರರು ಮತ್ತು ಮಾಧ್ಯಮ ಮಿತ್ರರು ಸುಮಾರು ಒಂದೂವರೆ ನಿಮಿಷಕ್ಕೂ ಹೆಚ್ಚು ಕಾಲ ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.

ಇವರ ಪ್ರೀತಿಯನ್ನು ಕಂಡ ಮೆಸ್ಸಿ ಗಳಗಳನೆ ಅತ್ತರು. ಇತ್ತೀಚಿಗೆ, 34 ವರ್ಷದ ಮೆಸ್ಸಿ ಅವರು ತಮ್ಮ ವೃತ್ತಿಜೀವನದ 21 ವರ್ಷಗಳ ಸುದೀರ್ಘ ಸಂಬಂಧಕ್ಕೆ ವಿದಾಯ ಹೇಳಿದರು.

https://fb.watch/gIuubi8-0i/ ದಕ್ಷಿಣ ಕನ್ನಡ : ಅಂಗನವಾಡಿ ಮಕ್ಕಳ ಆಹಾರಕ್ಕೂ ಕಲ್ಲು!

ಈಗ ಅವರು ಹೊಸ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಲಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ಮೆಸ್ಸಿಯವರು ತಂಡ ತೊರೆದ ವಿಚಾರವಲ್ಲ.

ಬದಲಿಗೆ, ತಮ್ಮ ವಿದಾಯದ ಭಾಷಣದ ವೇಳೆ ಕಣ್ಣೀರನ್ನು ಒರೆಸಿಕೊಳ್ಳಲು ಬಳಸಿದ್ದ ಟಿಶ್ಯೂ ಪೇಪರ್(Tissue Paper) ಹರಾಜಿಗಿರುವುದು.

ಹೌದು, ಒಂದು ವರದಿಯ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬರು ಮೆಸ್ಸಿ ಬಳಸಿದ ಪೇಪರ್ ಅನ್ನು ಪಡೆದುಕೊಂಡು, ಈಗ ಅದನ್ನು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದಾರೆ.

ಜೊತೆಗೆ ಆನ್‌ಲೈನ್‌ನಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದಕ್ಕೆ $ 1 ಮಿಲಿಯನ್ ದರವನ್ನು ನಿಗದಿ ಮಾಡಿದ್ದಾರೆ.


ಪಿಎಸ್‌ಜಿಗೆ ಮೆಸ್ಸಿ ವರ್ಗಾವಣೆಯು ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳಿಗೆ(Football Fans) ದೊಡ್ಡ ಆಘಾತವನ್ನು ನೀಡಿತು.

ಅವರ ವಿದಾಯ ಭಾಷಣದ ಸಮಯದಲ್ಲಿ, ಮೆಸ್ಸಿ ತನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ, ಅವರ ಪತ್ನಿ ಆಂಟೊನೆಲ್ಲಾ ಕಣ್ಣೀರನ್ನು ಒರೆಸಲು ಟಿಶ್ಯೂ ಪೇಪರ್ ನೀಡಿದರು.

ಎಫ್‌ಸಿ ಬಾರ್ಸಿಲೋನಾಕ್ಕೆ ಭಾವನಾತ್ಮಕ ವಿದಾಯ ಭಾಷಣದ ಸಮಯದಲ್ಲಿ ಲಿಯೋನೆಲ್ ಮೆಸ್ಸಿ ತನ್ನ ಕಣ್ಣೀರನ್ನು ಒರೆಸಲು ಬಳಸಿದ ಟಿಶ್ಯೂ ಪೇಪರ್ ಈಗ $ 1 ಮಿಲಿಯನ್‌ಗೆ ಮಾರಾಟಕ್ಕಿದೆ ಎಂದು ವರದಿಯಾಗಿದೆ. ಮೆಸ್ಸಿ ಮತ್ತು ಬಾರ್ಸಿಲೋನಾ ಸಂಬಂಧ ಸುಮಾರು 21 ವರ್ಷ ಹಳೆಯದು.

ಇದನ್ನೂ ಓದಿ : https://vijayatimes.com/mamata-banerjee-slams-bjp/

ಈ ಸ್ಮರಣೀಯ ಪ್ರಯಾಣವು 2000 ರಲ್ಲಿ ಆರಂಭವಾಯಿತು. ಮೆಸ್ಸಿ ಕ್ಲಬ್‌ನ ಪ್ರಸಿದ್ಧ ಮೆಸ್ಸಿಯಾ ಅಕಾಡೆಮಿಗೆ 13 ನೇ ವಯಸ್ಸಿನಲ್ಲಿ ಸೇರಿದರು. ಇದರ ನಂತರ, 2004 ರಲ್ಲಿ, ಅವರು ಬಾರ್ಸಿಲೋನಾದ ಹಿರಿಯ ತಂಡದಲ್ಲಿ ಪಾದಾರ್ಪಣೆ ಮಾಡಿದರು.

ಬಾರ್ಸಿಲೋನಾ ಮುಂಚೂಣಿಯಲ್ಲಿರುವಾಗ, ಮೆಸ್ಸಿ ಪ್ರತಿಷ್ಠಿತ ‘ಬ್ಯಾಲನ್ ಡಿ’ಆರ್’ ಟ್ರೋಫಿಯನ್ನು ಗೆದ್ದುಕೊಂಡರು.

ವರ್ಷದ ಅತ್ಯುತ್ತಮ ಫುಟ್ಬಾಲ್ ಆಟಗಾರನ ಪ್ರಶಸ್ತಿಯನ್ನು 6 ಬಾರಿ ಗೆದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಮೆಸ್ಸಿ ಬಾರ್ಸಿಲೋನಾದೊಂದಿಗೆ 34 ಟ್ರೋಫಿಗಳನ್ನು ಗೆದ್ದರು, ಅದರಲ್ಲಿ ಅವರ ಕೊಡುಗೆ ಅಪಾರ.

ಇವುಗಳಲ್ಲಿ, ಅವರು 10 ಲಾ ಲಿಗಾ ಪ್ರಶಸ್ತಿಗಳನ್ನು, 7 ಕೋಪಾ ಡೆಲ್ ರೇ ಮತ್ತು 4 UEFA ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಕೂಡ ಯಶಸ್ವಿಯಾದರು.

Exit mobile version