ಮೆಕ್ಸಿಕೊ: ತೈಲ ಘಟಕದಲ್ಲಿ ಬೆಂಕಿ ಅವಗಢ, ಐವರು ಸಾವು, ಇಬ್ಬರು ನಾಪತ್ತೆ

ಮೆಕ್ಸಿಕೊ, ಆ. 24: ಮೆಕ್ಸಿಕೊ ಖಾರಿಯ ತೈಲ ಘಟಕವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಮೆಕ್ಸಿಕೊ ಮಾಲೀಕತ್ವದ ಪೆಟ್ರೋಲಿಯೋಸ್ ಮೆಕ್ಸಿಕಾನೋಸ್ ಸಂಸ್ಥೆಯು ಹೇಳಿದೆ.

ಕು-ಮಲೂಬ್-ಜಾಪ್‌ನ ತೈಲ ಸಂಸ್ಕರಣಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡದಿಂದ 125 ತೈಲ ಬಾವಿಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಮೆಕ್ಸಿಕೊದ ದೈನಂದಿನ ತೈಲ ಉತ್ಪಾದನೆಯು 4,21,000 ಬ್ಯಾರೆಲ್‌ಗೆ ಇಳಿದಿದೆ. ಸಂಸ್ಥೆಯ ದೈನಂದಿನ ಆದಾಯದಲ್ಲಿ 25 ದಶಲಕ್ಷ ಡಾಲರ್‌ ನಷ್ಟವಾಗಿದೆ.

ಈ ಬೆಂಕಿ ಅವಘಡದಲ್ಲಿ ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರಿಗಾಗಿ ಶೋಧ ನಡೆಸಲಾಗುತ್ತಿದೆ. ತೈಲ ಘಟಕವು ಸಂಪೂರ್ಣ ಹಾನಿಗೊಳಗಾಗಿದೆ. ಇದರಲ್ಲಿ ಮೃತಪಟ್ಟ ಕೆಲ ಕಾರ್ಮಿಕರು ಗ್ಯಾಸ್‌ ಲೈನ್‌ ಸ್ವಚ್ಛತೆ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದರು ಎಂದು ಸಂಸ್ಥೆಯ ನಿರ್ದೇಶಕ ಆಕ್ಟೇವಿಯೊ ರೊಮೆರೊ ತಿಳಿಸಿದರು.

Exit mobile version