• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೈರಲ್ ಸುದ್ದಿ

ಮೊಸಳೆಯ ಬಾಯಿಗೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ಮದುವೆಯಾದ ಮೆಕ್ಸಿಕೋ ಮೇಯರ್!

Mohan Shetty by Mohan Shetty
in ವೈರಲ್ ಸುದ್ದಿ
Praveen Nettar
0
SHARES
0
VIEWS
Share on FacebookShare on Twitter

ಮದುವೆಯ(Marriage) ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕನಸುಗಳಿರುತ್ತವೆ. ಕೆಲವು ವಿಚಿತ್ರ ಜನರು ಸಾಕು ನಾಯಿಯನ್ನೇ ಮದುವೆಯಾಗಿರುವುದನ್ನು ನೋಡಿದ್ದೇವೆ.

ಅದೇ ರೀತಿ ವಿಮಾನ, ಗೊಂಬೆ ಹೀಗೆ ವಸ್ತುಗಳನ್ನು ಮದುವೆಯಾಗೋದು ಒಂದೆಡೆಯಾದ್ರೆ, ಇಲ್ಲಿ ವ್ಯಕ್ತಿಯೊಬ್ಬರು ಮೊಸಳೆಯನ್ನೇ ಮದುವೆಯಾಗಿದ್ದಾರೆ! ಹೌದು, ಮೆಕ್ಸಿಕೋದಲ್ಲಿ ಮೇಯರ್‌(Mexico Mayor) ಒಬ್ಬರು ಮೊಸಳೆಯನ್ನು ವಿವಾಹವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

Mexico mayor married alligator - Marriage

ವಿಚಿತ್ರ ಎನಿಸಿದರೂ ಇದು ಸತ್ಯ. ಇತ್ತೀಚಿಗಷ್ಟೇ ವಿಕ್ಟರ್ ಅಗ್ಯುಲರ್ ನ ಟೌನ್ ಹಾಲ್ ನಲ್ಲಿ ದೊಡ್ಡ ಔಪಚಾರಿಕ ಮದುವೆ ನಡೆದಿದ್ದು, ಇಡೀ ಊರನ್ನೇ ಆಹ್ವಾನಿಸಲಾಗಿತ್ತು. ಈ ಸಮಾರಂಭದ ಅಧ್ಯಕ್ಷತೆಯನ್ನು ಪಾದ್ರಿಯೊಬ್ಬರು ವಹಿಸಿದ್ದರು.

ಈ ವಿಚಿತ್ರ ಮದುವೆಗೆ ಕಾರಣವೂ ಇದೆ, ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ಈ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಕೆಲ ಭಾಗಗಳಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗದಿದ್ದರೆ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ.

ಇದನ್ನೂ ಓದಿ : https://vijayatimes.com/mp-renukacharya-says-he-resigns/u003c/strongu003eu003cbru003e
ನಂಬಿಕೆಯೋ, ಮೂಢನಂಬಿಕೆಯೋ, ಒಟ್ಟಾರೆ ಜನರಂತೂ ಇಂತಹ ವಿಚಾರಗಳನ್ನು ಹಲವಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಲೇ ಇದ್ದಾರೆ. ಹಾಗೆಯೇ, ಮೆಕ್ಸಿಕೋದಲ್ಲಿಯೂ ಒಂದು ನಂಬಿಕೆಯಿದೆ. 
ಅಲ್ಲಿನ ಸಂಪ್ರದಾಯದ ಪ್ರಕಾರ, ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆದರೆ ಜನ ಜೀವನ ಸಮೃದ್ಧವಾಗಿರುತ್ತದೆ. ಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದಾಗ ಇಲ್ಲಿನ ಮೇಯರ್ ಮೊಸಳೆಯನ್ನು ಮದುವೆಯಾಗಬೇಕಾಗುತ್ತದೆ. 
Mexico mayor married alligator - Mexico
ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ತಿಳಿದುಬಂದಿದೆ. 

ಈ ವಿವಾಹ ಕಾರ್ಯಕ್ರಮದಲ್ಲಿ ಸ್ಯಾನ್‌ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ “ವಿಕ್ಟರ್ ಹ್ಯೂಗೊ ಸೊಸಾ” ತಮ್ಮ ವಧುವಾದ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಸಾಂಕೇತಿಕವಾಗಿ ವಿವಾಹವಾದರು. ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದ್ದು,

ಇದನ್ನೂ ಓದಿ : https://vijayatimes.com/bull-snake-swallowed-golf-ball/u003c/strongu003eu003cbru003e
ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವು ಮಾನವ-ದೈವಿಕ ಬಾಂಧವ್ಯದ ಸಂಕೇತ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ನಂಬಿಕೆ ಏನೇ ಇರಲಿ, ಮೇಯರ್ ಮತ್ತು ಮೊಸಳೆಯ ಮದುವೆಯಂತೂ ಅದ್ಧೂರಿಯಾಗಿ ನೆರವೇರಿದೆ.
 ವಾದ್ಯ, ಓಲಗಗಳೊಂದಿಗೆ ಜನರು ವಧುವಾದ ಮೊಸಳೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಬಳಿಕ ಸಂಪ್ರದಾಯಬದ್ಧವಾಗಿ ಮೆಕ್ಸಿಕೋ ಮೇಯರ್ ಜೊತೆ ಮದುವೆ ಮಾಡಲಾಯಿತು. ಬಳಿಕ ಜನರು ಮೆರವಣಿಗೆ ನಡೆಸಿ ಸಂಭ್ರಮಿಸಿದರು. 
Mexico mayor married alligator
“ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ” ಎಂದು ವಿವಾಹವನ್ನು ಆಯೋಜಿಸಿದ್ದ, ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.
  • ಪವಿತ್ರ
Tags: AlligatormarriageMexicoweird

Related News

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ
ಮನರಂಜನೆ

ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ

March 11, 2023
“ನೀನು ಮುನಿಯೂ ಅಲ್ಲ ಸಾಮಿಯೂ ಅಲ್ಲ..” ಸಂಸದ ಮುನಿಸ್ವಾಮಿ ವಿರುದ್ದ ಲೇಖಕಿ ಪ್ರತಿಭಾ ನಂದಕುಮಾರ್‌ ಆಕ್ರೋಶ
ರಾಜ್ಯ

“ನೀನು ಮುನಿಯೂ ಅಲ್ಲ ಸಾಮಿಯೂ ಅಲ್ಲ..” ಸಂಸದ ಮುನಿಸ್ವಾಮಿ ವಿರುದ್ದ ಲೇಖಕಿ ಪ್ರತಿಭಾ ನಂದಕುಮಾರ್‌ ಆಕ್ರೋಶ

March 11, 2023
ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!
Vijaya Time

ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!

March 8, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.