Mumbai : Karnatakaಫೆಮಿನಾ ಮಿಸ್ ಇಂಡಿಯಾ 2022 ರ(Miss India 2022 winner sini shetty) ವಿಜೇತರನ್ನು ಜುಲೈ 3 ರಂದು ಘೋಷಿಸಲಾಯಿತು ಮತ್ತು ಈ ಬಾರಿ ಮಿಸ್ ಇಂಡಿಯಾ ಪಟ್ಟವನ್ನು ನಮ್ಮ ಕರ್ನಾಟಕದ 21 ವರ್ಷದ ಸಿನಿ ಶೆಟ್ಟಿಯವರು ಧರಿಸಿದ್ದಾರೆ.
2020ರ ಮಿಸ್ ಇಂಡಿಯಾ ಆಗಿದ್ದ ತೆಲಂಗಾಣದ ಮಾನಸಾ ವಾರಣಾಸಿ ಅವರು ವಿಜೇತರಾದ ಸಿನಿ ಶೆಟ್ಟಿಯವರಿಗೆ(Miss India 2022 winner sini shetty) ಮಿಸ್ ಇಂಡಿಯಾ 2022 ಕಿರೀಟವನ್ನು ಮುಡಿಗೇರಿಸಿದರು.
ಈ ಕಾರ್ಯಕ್ರಮವು ಭಾನುವಾರ ಸಂಜೆ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ.

ಸಿನಿ ಶೆಟ್ಟಿ ಅವರು ಮೂಲತಃ ಕರ್ನಾಟಕದ (Karnataka) ಮಂಗಳೂರಿನವರಾಗಿದ್ದು(Mangaluru), ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಿನಿ ಶೆಟ್ಟಿ ಅವರು ಈಗ ಪ್ರತಿಷ್ಠಿತ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಕಿರೀಟ ನಂತರದ ಸ್ಥಾನ, ಮಿಸ್ ಇಂಡಿಯಾ 2022 ರ ರನ್ನರ್ ಅಪ್ ಕಿರೀಟವನ್ನು ಯಾರು ಪಡೆದರು? ಎಂಬ ಮಾಹಿತಿ ಹೀಗಿದೆ.
ರಾಜಸ್ಥಾನದ (Rajasthan) ರೂಬಲ್ ಶೇಖಾವತ್ ಅವರು ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದು ಹೊರಹೊಮ್ಮಿದರು.
2022ರ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಪಂದ್ಯವು ಕೃತಿ ಸನೋನ್ ಮತ್ತು ಲಾರೆನ್ ಗಾಟ್ಲೀಬ್ ಅವರ ನೃತ್ಯ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದಿತು.
ಈ ಕಾರ್ಯಕ್ರಮವನ್ನು ಮನೀಶ್ ಪೌಲ್ ಆಯೋಜಿಸಿದ್ದರು. ಮಿಸ್ ಇಂಡಿಯಾ ತೀರ್ಪುಗಾರರ ಸಮಿತಿಯು ಬಾಲಿವುಡ್ ನಟಿ ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ನಟಿ ಮಲೈಕಾ ಅರೋರಾ ಅವರಂತಹ ನಟರನ್ನು ಒಳಗೊಂಡಿತ್ತು.

ಇತ್ತೀಚೆಗಷ್ಟೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಫಾರ್ಮೆಟ್ಗೂ ವಿದಾಯ ಘೋಷಿಸಿದ ಮಿಥಾಲಿ ರಾಜ್ ಕೂಡ ತೀರ್ಪುಗಾರರ ಭಾಗವಾಗಿದ್ದರು. ಅಲ್ಲದೆ, ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಿಯಾಮಕ್ ದಾವರ್ ಕೂಡ ಸಮಿತಿಯ ಭಾಗವಾಗಿದ್ದರು.
ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆ ಜುಲೈ 17 ರಂದು ಕಲರ್ಸ್ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.