New Delhi : 2023ರಲ್ಲಿ ಎಲ್ಲ ಮೊಬೈಲ್‌ಗಳ ಸೇವಾ ಶುಲ್ಕ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ವರ್ಷದ ಜೂನ್ ತಿಂಗಳ ನಂತರ ಮೊಬೈಲ್ ಸೇವಾ ಕಂಪನಿಗಳು(Mobile service company) , ಮೊಬೈಲ್ ಸೇವಾ ಶುಲ್ಕವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಐಐಎಫ್ಎಲ್(Mobile service charges will increase) ಸೆಕ್ಯೂರಿಟೀಸ್ ತಿಳಿಸಿದೆ.
ಪ್ರತಿ ಮೊಬೈಲ್ ಬಳಕೆದಾರನಿಂದ 5G ಸೇವೆಗೆ ಸಂಬಂಧಿಸಿದಂತೆ ಪಡೆದುಕೊಳ್ಳುವ ಸರಾಸರಿ ಮೊತ್ತವನ್ನು ತಕ್ಷಣದಲ್ಲಿ ಏರಿಕೆ ಮಾಡುವುದು ಅಸಾಧ್ಯ.
ಆದುದರಿಂದಲೇ 4G ಪ್ರಿಪೇಯ್ಡ್ ಶುಲ್ಕವನ್ನು(Prepaid fees) ಏರಿಕೆ ಮಾಡುವುದು ಟೆಲಿಕಾಂ ಕಂಪೆನಿಗಳಿಗೆ(Telecam company) ಬಹಳ ಮುಖ್ಯವಾಗಿದೆ.
ಹಾಗಾಗಿ 2023ರ ಶೈಕ್ಷಣಿಕ ವರ್ಷದಿಂದ 4G ಮೊಬೈಲ್ ಸೇವಾ ಶುಲ್ಕ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಅಲ್ಲದೆ ಮೊಬೈಲ್ ಸೇವಾ ಕಂಪನಿಗಳು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪ್ಪೇಯ್ಡ್ ಎರಡರ ಶುಲ್ಕವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ .
ಪೋಸ್ಟ್ ಪೇಯ್ಡ್(Mobile service charges will increase) ಯೋಜನೆಗಳಿಂದ ಗಳಿಸುತ್ತಿರುವ ಆದಾಯ ಕುಂಠಿತವಾಗುತ್ತಿರುವುದರಿಂದ ಉಳಿದ ಸೇವಗಳ ಶುಲ್ಕವನ್ನು ಏರಿಸುವುದು ಅನಿವಾರ್ಯವಾಗಲಿದೆ ಎಂದು ಟೆಲಿಕಾಂ ವಿಶ್ಲೇಷಕರು ತಿಳಿಸಿದ್ದಾರೆ.
ಭಾರತದಲ್ಲಿ ಮೊಬೈಲ್ ಸೇವಾ ಕಂಪನಿಗಳು 2021 ನವೆಂಬರ್ ತಿಂಗಳಲ್ಲಿಯೇ ಈ ಶುಲ್ಕ ಏರಿಕೆಯ ಬಗ್ಗೆ ಮಾಹಿತಿ ನೀಡಿದ್ದು ಈ ವರ್ಷ ಕಾರ್ಯ ರೂಪಕ್ಕೆ ಬರಲಿದೆ.
ಮೊದಲಿಗೆ ಐಡಿಯಾ(Idea) , ವೊಡಾಫೋನ್(Vodafone) ಕಂಪನಿಗಳು ಶೇಕಡಾ 42ರಷ್ಟು ಮೊಬೈಲ್ಸ್ ಸೇವಾ ಶುಲ್ಕವನ್ನು ಏರಿಕೆ ಮಾಡಿತ್ತು,
ಇದನ್ನೂ ಓದಿ: https://vijayatimes.com/siddaramaiahs-puppy-statement/
ನಂತರದ ದಿನಗಳಲ್ಲಿ ಏರ್ಟೆಲ್(Airtel) ಹಾಗೂ ಜಿಯೋ ಕಂಪನಿಗಳು(Jio ) ಶುಲ್ಕ ಏರಿಕೆ ಕ್ರಮವನ್ನು ಅನುಸರಿಸಿದ್ದವು.
ಆದರೆ ಏರ್ಟೆಲ್ ಹಾಗೂ ಜಿಯೋ ಕಂಪನಿಗಳು, 5G ಸೇವೆಯನ್ನು ಉನ್ನತ ಸೇವೆ ಎಂದು ಪರಿಗಣಿಸುವ ಯಾವುದೇ ಯೋಜನೆಯನ್ನು ಅವು ಹೊಂದಿಲ್ಲ ಎಂದು ಈ ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ.
ಬಳಕೆದಾರರು 5g ಸೇವೆಯನ್ನು ಪಡೆಯಲು ಕನಿಷ್ಠ ಪ್ರಮಾಣದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಹಳೆಯ ಸೇವಾ ಶುಲ್ಕದೊಂದಿಗೆ 5G ಪಡೆಯುವುದನ್ನು ಮುಂದುವರಿಸಬಹುದು ಎಂಬ ನೀತಿ ಈಗಾಗಲೇ ಜಾರಿಯಲ್ಲಿದೆ.
ಏರ್ಟೆಲ್ ಹಾಗೂ ಜಿಯೋ ಕಂಪನಿಗಳು ನಿರ್ದಿಷ್ಟ ಸೇವಾ ಶುಲ್ಕವನ್ನು ಹೊರತುಪಡಿಸಿ, ಈ ಎರಡು ಕಂಪನಿಗಳು ಪ್ರಿಪೇಯ್ಡ್(Prepaid) ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿ ಒದಗಿಸುವ ಸಾಧ್ಯತೆ ಇದೆ ಎಂಬ ಸಿಹಿ ಸುದ್ದಿಯನ್ನು IIFL ವರದಿ ನೀಡಿದೆ.
- ಪಂಕಜಾ. ಎಸ್