ಮೊಬೈಲ್ ಬ್ಯಾನ್ : UNESCO ಸಲಹೆಯಂತೆ ಆಂಧ್ರಪ್ರದೇಶದ ಎಲ್ಲಾ ಶಾಲೆಗಳಲ್ಲಿ ಮೊಬೈಲ್ ಬ್ಯಾನ್

Amaravati: ಶಿಕ್ಷಣದ ಗುಣಮಟ್ಟವನ್ನು ಮತ್ತು ನಿಯಮ ಪಾಲನೆಯ ದೃಷ್ಟಿಯಿಂದ ಮಹತ್ವದ ಕ್ರಮ ಕೈಗೊಂಡಿರುವ ಆಂಧ್ರಪ್ರದೇಶದ ವೈಎಸ್ಆರ್ (mobiles ban in AP schools)

ಕಾಂಗ್ರೆಸ್ (Congress) ಸರ್ಕಾರ, ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಶಾಲೆಯ ಅವಧಿಯ ವೇಳೆ ಮೊಬೈಲ್ ಬಳಕೆ ಮಾಡುವುದಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಈ ಕುರಿತು ಆಂಧ್ರಪ್ರದೇಶದ (Andra Pradesh) ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರುವಂತಿಲ್ಲ. ಆದರೆ ಶಿಕ್ಷಕರು

ಶಾಲೆಗೆ ಮೊಬೈಲ್ (Mobile) ತಂದರು ಕೂಡಾ, ಅದನು ಶಾಲಾ ಅವಧಿಯ ವೇಳೆ ಮತ್ತು ತರಗತಿಯೊಳಗೆ ಬಳಸುವಂತಿಲ್ಲ. ಶಿಕ್ಷಕರು ತರಗತಿಗಳಿಗೆ ಹೋಗುವ ಮುನ್ನ ಶಿಕ್ಷಕರ ತಮ್ಮ

ಮೊಬೈಲ್ಗಳನ್ನು ಮುಖ್ಯಶಿಕ್ಷಕರ ಬಳಿ ಕೊಟ್ಟು ಹೋಗಬೇಕು (mobiles ban in AP schools) ಎಂದು ಸೂಚಿಸಿದೆ.

ನೌಕಾ ಪಡೆಯಲ್ಲಿ ಹುದ್ದೆ: ನೌಕಾಪಡೆಯಲ್ಲಿ 362 ಹುದ್ದೆಗಳಿಗೆ ಅರ್ಜಿ ಅಹ್ವಾನ : ಎಸ್ಎಸ್‌ಎಲ್‌ಸಿ / ITI ಪಾಸಾದವರಿಗೆ ಅವಕಾಶ

ಇನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ವರದಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು

ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ. ಶಿಕ್ಷಕರಿಂದ ಮಕ್ಕಳಿಗೆ ಉಂಟಾಗುವ ತೊಂದರೆ ತಪ್ಪಿಸಲು ಶಿಕ್ಷಕರೂ ಕೂಡಾ ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನ ನಿಷೇಧಿಸಿರುವುದಾಗಿ ಶಿಕ್ಷಣ

ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ವರದಿ ಪ್ರಕಾರ, ಪ್ರಾಥಮಿಕ ಹಂತದ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನ ನಿಷೇಧಿಸಿದೆ.

ಮಕ್ಕಳ ಯೋಗಕ್ಷೇಮ ಕಾಳಜಿಯಿಂದ ಜಾಗತೀಕವಾಗಿ 4 ದೇಶಗಳಲ್ಲಿ ಈ ಕ್ರಮ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಇದನ್ನ ಮಾದರಿಯಾಗಿ ತೆಗೆದುಕೊಂಡಿರುವ ಶಿಕ್ಷಣ ಇಲಾಖೆ ಆಂಧ್ರ

ಪ್ರದೇಶದ ಶಾಲೆಗಳಲ್ಲಿಯೂ ಮೊಬೈಲ್ ಬಳಕೆಗೆ ನಿಷೇಧ ಹೇರಿದೆ. ಕರ್ನಾಟಕದಲ್ಲಿಯೂ (Karnataka) ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಹಿಂದಿನ ಬಿಜೆಪಿ (BJP) ಸರ್ಕಾರ ಶಾಲೆಗಳಲ್ಲಿ ಮೊಬೈಲ್ ನಿಷೇಧಿಸುವ ಕುರಿತು ಶಿಕ್ಷಣ ಇಲಾಖೆಯ ತಜ್ಞರೊಂದಿಗೆ ಚರ್ಚೆಯನ್ನು ನಡೆಸಲಾಗಿತ್ತು. ಇದೀಗ ನೂತನ ಕಾಂಗ್ರೆಸ್ವ ಸರ್ಕಾರ ಈ

ಬಗ್ಗೆ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version