ಭಾರತದಿಂದ ರಫ್ತು ಹೆಚ್ಚಿಸಲು ಮೋದಿ ಕರೆ

ನವದೆಹಲಿ, ಆ. 07: ಕೋವಿಡ್ ನಿಂದ ಚೇತರಿಸಿಕೊಳ್ಳಲು ರಫ್ತನ್ನು ಹೆಚ್ಚಿಸಿ ಇದರಿಂದಾಗಿ ಉದ್ಯೋಗವು ಹೆಚ್ಚುತ್ತದೆ ಇದು ಕೋವಿಡ್ ನಿಂದ ಆದ ಸಂಕಷ್ಟದ ಆರ್ಥಿಕ ಚೇತರಿಕೆಗೂ ಕೂಡ ಸಹಾಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಬಗ್ಗೆ ವಿದೇಶದಲ್ಲಿರುವ ಭಾರತೀಯ ಉದ್ಯಮಿಗಳ ಜೊತೆ ‘ಲೋಕಲ್ ಗೋಸ್ ಗ್ಲೋಬಲ್ – ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’  ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತ ನಮ್ಮ ರಫ್ತು ಜೆಡಿಪಿಯ 20 ಪ್ರತಿಶತದಷ್ಟಿದೆ ಇದನ್ನು ಇನ್ನೂ ಹೆಚ್ಚಿಸಲು ಆರ್ಥಿಕತೆ ಗಾತ್ರ, ಸಾಮರ್ಥ್ಯ, ಉತ್ವಾದನೆ ಹಾಗೂ ಸೇವಾ ಉದ್ಯಮದೊಂದಿಗೆ ರಫ್ತನ್ನು ಇನ್ನಷ್ಟು ಹೆಚ್ಚಿಸಬಹುದು. ಕೋವಿಡ್ ನಂತರದ ಆದ ಜಾಗತಿಕ ಪೂರೈಕೆಯ ರಫ್ತಿನಲ್ಲಾದ ಬದಲಾವಣೆಯ ಹಾಗೂ ಸೃಷ್ಟಿಯಾದ ಹೊಸ ಅವಕಾಶಗಳ ಲಾಭವನ್ನು ಪಡೆದು ಕೊಳ್ಳಬೇಕು. ಭಾರತವು ಈ ಆರ್ಥಿಕ ವರ್ಷದಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ದೇಶದಲ್ಲಿ ಉತ್ಪಾದನೆ ಹೆಚ್ಚಿಸಬೇಕು, ಸಾರಿಗೆ ಸಮಸ್ಯೆಗಳನ್ನು ಬಗೆಹರಿಸಬೇಕು, ಸರ್ಕಾರವು ರಫ್ತುದಾರರಿಗೆ ಸಹಕರಿಸಬೇಕು ಮತ್ತು ಭಾರತೀಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಬೇಕು ಈ ನಾಲ್ಕು ಅಂಶಗಳಿಂದ ಭಾರತೀಯರು ರಫ್ತು ಹೆಚ್ಚಿಸಬಹುದು ಅದಲ್ಲದೆ ಭಾರತೀಯ ರಫ್ತುದಾರರಿಗೆ ವಿಮೆಯ ರೂಪದಲ್ಲಿ ಸುಮಾರು 88ಕೋಟಿಗಳಷ್ಟು ಪ್ರೋತ್ಸಾಹ ಧನವನ್ನು ಕೂಡ ನೀಡುತ್ತಿದೆ ಎಂದು ಈ ಸಂದರ್ಭದಲ್ಲಿ  ತಿಳಿಸಿದರು.

Exit mobile version