ಬೆಂಗಳೂರಿನಲ್ಲಿಂದು ಪ್ರಧಾನಿ ಮೋದಿ ರೋಡ್ ಶೋ : ಅಪ್ಪಿತಪ್ಪಿಯೂ ಈ ಮಾರ್ಗಗಳಲ್ಲಿ ಸಂಚರಿಸಬೇಡಿ

Bangalore : ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka assembly election 2023) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಂತಿಮ ಹಂತದಲ್ಲಿ ರಾಜ್ಯದ ರಾಜಧಾನಿಯಲ್ಲಿ ಬಿಜೆಪಿ (BJP) ಪರ ಅಲೆ ಎಬ್ಬಿಸಲು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ ಇಂದು (ಮೇ 6) ಮತ್ತು ನಾಳೆ ಬೆಂಗಳೂರಿನಲ್ಲಿ ಬೃಹತ್ ರೋಡ್ (Modi Road Show In Bengaluru) ಶೋ ನಡೆಸಲಿದ್ದಾರೆ. ಹೀಗಾಗಿ ಇಡೀ ಬೆಂಗಳೂರು ಕೇಸರಿಮಯವಾಗಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಇಂದು (ಮೇ 6) ಪ್ರಧಾನಿ ಮೋದಿಯವರ ರೋಡ್ ಶೋನ ಸಂಪೂರ್ಣ ವಿವರಗಳು ಕೆಳಗಿವೆ :

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ (Road show) ನಡೆಸಲಿದ್ದಾರೆ.

ನೀಟ್ ಪರೀಕ್ಷೆಯಿಂದಾಗಿ ರೋಡ್ ಶೋ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮೂಲತಃ ಭಾನುವಾರ ನಡೆಸಲು ಉದ್ದೇಶಿಸಿರುವ ಮಾರ್ಗದಲ್ಲಿ ಶನಿವಾರ ರೋಡ್‌ಶೋ ನಡೆಯಲಿದೆ.

ಪ್ರಧಾನಿ ಮೋದಿ ಶನಿವಾರ 26 ಕಿಲೋಮೀಟರ್ ರಸ್ತೆಯಲ್ಲಿ ಪ್ರಯಾಣಿಸಲಿದ್ದಾರೆ. ಇದಕ್ಕಾಗಿ ಸಾಕಷ್ಟು ಪೂರ್ವಸಿದ್ಧತಾ ಕಾರ್ಯ ನಡೆದಿದೆ.

ರೋಡ್‌ಶೋ ಮಾರ್ಗದ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಪೊಲೀಸರು ಕೂಡ ನಾನಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/pratapa-simha-vs-prakash-raj/

ಬೆಳಗ್ಗೆ 10 ಗಂಟೆಯಿಂದ 1.30ರವರೆಗೆ ರೋಡ್ ಶೋ

ಇಂದು (ಮೇ 6) ಪ್ರಧಾನಿ ನರೇಂದ್ರ ಮೋದಿ ಅವರು ರಾಜಭವನದಿಂದ ಬೆಳಿಗ್ಗೆ 9.15 ಕ್ಕೆ ಹೊರಟು 9.25 ಕ್ಕೆ ರಸ್ತೆ ಮೂಲಕ ಮೇಖ್ರಿ ವೃತ್ತದ ಬಳಿಯ HQTC ಹೆಲಿಪ್ಯಾಡ್ ತಲುಪಲಿದ್ದಾರೆ.

ನಂತರ ಅಲ್ಲಿಂದ 9.50ಕ್ಕೆ ಲೊಯೊಲಾ ಕಾಲೇಜಿನ ಹೆಲಿಪ್ಯಾಡ್ ತಲುಪಿದರು. ಪ್ರಧಾನಿರನ್ನು ಸ್ವಾಗತಿಸಲು ಬಿಜೆಪಿ 6 ಮುಖಂಡರು (Modi Road Show In Bengaluru) ಹಾಜರಾಗಿದ್ದರು.

ಬಳಿಕ ಕಾರಿನಲ್ಲಿ ಪ್ರಯಾಣಿಸಿ ಬೆಳಗ್ಗೆ 10 ಗಂಟೆಗೆ ಸೋಮೇಶ್ವರ ಭವನ ತೆರಳಿ ಅಲ್ಲಿಂದ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಿತು.

ಸಿರ್ಸಿ ವೃತ್ತದ ಬಳಿ ಬಿಬಿಎಂಪಿ ಪೌರಕಾರ್ಮಿಕರು (BBMP civil servants) ಪ್ರಧಾನಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಿರ್ಸಿ ಸರ್ಕಲ್ನಲ್ಲಿ ರೋಡ್‌ಶೋ ವಾಹನ 1 ನಿಲ್ಲುತ್ತದೆ.

ಮೇ 6 ರಂದು ಪ್ರಧಾನಿ ಮೋದಿ ರೋಡ್​ ಶೋ ವಿವರ ಇಲ್ಲಿದೆ :

10:00 AM – ಶ್ರೀ ಸೋಮೇಶ್ವರ ಸಭಾ ಭವನ
10.10 AM – ಜೆಪಿ ನಗರ 5ನೇ ಹಂತ
10:20AM – ಜಯನಗರ 5ನೇ ಬ್ಲಾಕ್
10:30 AM – ಜಯನಗರ 4ನೇ ಬ್ಲಾಕ್
10:40 AM – ಸೌತ್ ಎಂಡ್ ಸರ್ಕಲ್
10:45 AM – ಮಾಧವರಾವ್ ವೃತ್ತ
11:00 AM – ರಾಮಕೃಷ್ಣ ಆಶ್ರಮ

ಇದನ್ನೂ ಓದಿ : https://vijayatimes.com/remote-voting/


11:05 AM – ಉಮಾ ಥಿಯೇಟರ್ ಸಿಗ್ನಲ್
11:15 AM – ಮೈಸೂರು ರಸ್ತೆ ಸಿಗ್ನಲ್
11:25 AM – ಟೋಲ್ ಗೇಟ್ ಸಿಗ್ನಲ್
11:35 AM – ಗೋವಿಂದರಾಜನಗರ
11:45 AM – ಮಾಗಡಿ ರೋಡ್ ಜಂಕ್ಷನ್
12:00 AM – ಶಂಕರ್ ಮಠ ಚೌಕ್
12:20 PM – ಮಲ್ಲೇಶ್ವರಂ ವೃತ್ತ
12:30 PM – 18ನೇ ಅಡ್ಡ ರಸ್ತೆ ಜಂಕ್ಷನ್ ಸಂಪಿಗೆ ರಸ್ತೆ

ಬೆಂಗಳೂರಿನ 34 ರಸ್ತೆಗಳು ಸಂಪೂರ್ಣ ಬಂದ್

ಬೆಳಗ್ಗೆ 10 ಗಂಟೆಗೆ ರೋಡ್‌ಶೋ ನಡೆಯಲಿದ್ದು, ಬೆಳಗ್ಗೆ ಟ್ರಾಫಿಕ್ ಜಾಮ್ (Traffic jam) ಆಗದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ಮೋದಿ ರೋಡ್ ಶೋ ನಡೆಸುವ ಒಟ್ಟು 34 ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಹೀಗಾಗಿ ಬೆಂಗಳೂರಿಗರು ಮಧ್ಯಾಹ್ನ 1.30ರೊಳಗೆ ಈ ರಸ್ತೆಯನ್ನು ಬಳಸದಂತೆ ಸೂಚಿಸಲಾಗಿದೆ

ಇದನ್ನೂ ಓದಿ : https://vijayatimes.com/internal-survey-of-congress/

ಪ್ರಧಾನಿ ಮೋದಿಯವರ ರೋಡ್ ಶೋಗೆ ಪೊಲೀಸ್ ಪಡೆಯ ಬಂದೋ ಬಸ್ತ್ :

ಬೆಂಗಳೂರು ಪೊಲೀಸ್ ಮುಖ್ಯಸ್ಥ ಪ್ರತಾಪ್ ರೆಡ್ಡಿ (Bengaluru Police Chief Pratap Reddy) ಸೇರಿದಂತೆ ನಗರದಾದ್ಯಂತ 8,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾರಿಗೆ ಸಚಿವಾಲಯದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ (Special Commissioner of the Ministry of Transport, Dr. MA Salim) ,

ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಹತ್ತು ಡಿಸಿಪಿಗಳು ಮತ್ತು 8,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.

ಸುಮಾರು 150 ಕೆಎಸ್ ಆರ್ ಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : https://vijayatimes.com/4-crore-cash-seized-in-kolar/

ಮೇ 6 ಇಂದು ಯಾವುದೇ ಕಾರಣಕ್ಕೂ ಈ ರಸ್ತೆಗಳನ್ನ ಬಳಸಬೇಡಿ!

ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ ನಗರ & ಶಿರ್ಸಿ ಸರ್ಕಲ್, ಜೆ.ಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್,

ಆರ್ಮುಗಂ ಸರ್ಕಲ್, ಬುಲ್ ಟೆಂಪಲ್ ರೋಡ್, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಚಾಮರಾಜಪೇಟೆ ರಸ್ತೆ, ಬಾಳೆಕಾಯಿ ಮಂಡಿ ರಸ್ತೆ,

ಮೋದಿ ಅಸ್ಪತ್ರೆ ರೋಡ್ (Modi Hospital Road) , ನವರಂಗ ರಸ್ತೆ, ಎಂಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ

Exit mobile version