ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ: ಮಾಲ್ಡೀವ್ಸ್​ಗೆ ಶುರುವಾಗಿದೆ ಆತಂಕ

New Delhi: ಪ್ರಧಾನಿ ನರೇಂದ್ರ ಮೋದಿ @NarendraModi ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿರುವ ಸಂಗತಿ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದರೆ, ಇನ್ನೊಂದೆಡೆ ಮೋದಿಯವರ ಲಕ್ಷದ್ವೀಪ ಭೇಟಿಯಿಂದಾಗಿ ನೆರೆಯ ಮಾಲ್ಡಿವ್ಸ್ಗೆ ಆತಂಕ ಶುರುವಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ವಿರೋಧಿ ದೋರಣೆ ಅನುಸರಿಸುತ್ತಿರುವ ಮಾಲ್ಡಿವ್ಸ್ಗೆ (Maldives) ಭಾರತ ಪರೋಕ್ಷವಾಗಿ ಶಾಕ್ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿರುವ ಪೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಲಕ್ಷದ್ವೀಪಕ್ಕೆ ವಿಶೇಷ ಮೆರಗು ಬಂದಿದೆ.

ಪ್ರಧಾನಿ ಮೋದಿ ಅವರ ಲಕ್ಷದ್ವೀಪ (Lakshadweep) ಭೇಟಿ ನಂತರ, ಭಾರತೀಯರು ಗೂಗಲ್ನಲ್ಲಿ ಲಕ್ಷದ್ವೀಪದ ಪ್ರವಾಸಿ ತಾಣಗಳ ಕುರಿತು ಸರ್ಚ್ ಮಾಡುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಪ್ರಧಾನಿ ಮೋದಿ ಅವರು ಫೋಟೋ ಹಾಕುವುದರ ಜೊತೆಗೆ ಸಾಹಸಪ್ರಿಯರು ಮತ್ತು ಪ್ರಕೃತಿ ಆರಾಧಕರು ತಪ್ಪದೇ ಒಮ್ಮೆಯಾದ್ರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ, ಪರೋಕ್ಷವಾಗಿ ಮಾಲ್ಡೀವ್ಸ್ಗೆ ಹೋಗಬೇಡಿ ಎಂದು ಸೂಚಿಸಿದ್ದಾರೆ.

ಭಾರತದಲ್ಲಿ ಬುಧವಾರ ಅತಿಹೆಚ್ಚು ಗೂಗಲ್ ಸರ್ಚ್ಗೆ (Google Search) ಒಳಗಾದ 9ನೇ ಪದ ಲಕ್ಷ ದ್ವೀಪವಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಭಾರತೀಯರು ಲಕ್ಷದ್ವೀಪದ ಕುರಿತು ಇಂಟರ್ನೆಟ್ನಲ್ಲಿ (Internet) ಹುಡುಕಾಡಿದ್ದಾರೆ. ಹೀಗಾಗಿ ಮಾಲ್ಡಿವ್ಸ್ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಕುಸಿತು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಭಾರೀ ಸಂಖ್ಯೆಯಲ್ಲಿ ಲಕ್ಷದ್ವೀಪಕ್ಕೆ ಭಾರತೀಯರು ಭೇಟಿ ನೀಡಿದರೆ ಮಾಲ್ಡೀವ್ಸ್ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತದೆ.

ಇನ್ನು 2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಭಾರತೀಯರು ನೆರೆಯ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್ಗೆ ಅತಿ ಹೆಚ್ಚು ವಿದೇಶಿಗರು ಪೈಕಿ ಭಾರತೀಯರೇ ಮೊದಲ ಸ್ಥಾನದಲ್ಲಿದ್ದಾರೆ. ಮಾಲ್ಡಿವ್ಸ್ನ್ ಆರ್ಥಿಕತೆಗೆ ಭಾರತೀಯರ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಹಣವನ್ನು ಲಕ್ಷದ್ವೀಪದತ್ತ ಹರಿಸಲು ಮೋದಿ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಭಾರತದ ಪ್ರವಾಸಿಗರು ವಿದೇಶದಲ್ಲಿ ಮಾಡುವ ಖರ್ಚನ್ನು ಭಾರತದತ್ತ ತಿರುಗಿಸಿ ದೇಶದ ಪ್ರವಾಸೋದ್ಯಮ ಬೆಳೆಸಲು ಪ್ರೋತ್ಸಾಹ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.

Exit mobile version