ಹಲ್ಲೆ ಆರೋಪ ತಳ್ಳಿಹಾಕಿದ ನಲಪಾಡ್‌

nalapad

ಬೆಂಗಳೂರು ಜ 20 : ಸದಾ ಒಂದಲ್ಲ ಒಂದು ಪ್ರಕರಣದಲ್ಲಿ ಸಿಲುಕುತ್ತಿರುವ ಯುವ ಕಾಂಗ್ರೆಸ್‌ ಮುಖಂಡ ಈಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಸಿದ್ದು ಎಂಬ ಕಾಂಗ್ರೆಸ್‌ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪದಲ್ಲಿ ಮೊಹಮ್ಮದ್​ ನಲಪಾಡ್ ಸಿಲುಕಿದ್ದಾರೆ. 

ನಲಪಾಡ್ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಫೆಬ್ರವರಿ 1ರಂದು ಅಧ್ಯಕ್ಷನಾಗಬೇಕು. ಅದನ್ನು ತಪ್ಪಿಸೋಕೆ ಈ ರೀತಿ ಮಾಡುತ್ತಿದ್ದಾರೆ. ಸಿದ್ದು ನಾನೇನು ಮಾಡಿಲ್ಲ ಅಂತ ಹೇಳಿದ್ದಾನೆ. ಅವನೇ ಈಗ ಹೇಳಿದ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲು ಹೇಗೆ ಆಗುತ್ತದೆ. ನನ್ನ ಅಧ್ಯಕ್ಷ ಸ್ಥಾನ ಯಾರೂ ತಪ್ಪಿಸೋಕೆ ಆಗಲ್ಲ. ನಿನ್ನೆ ಯೂತ್ ಕಾಂಗ್ರೆಸ್ ಸ್ನೇಹಿತರ ಸಭೆ ಕರೆದಿದ್ದೆವು. ನಾನು ಆ ಸಭೆಗೆ ಹೋಗಿದ್ದೆ ಆದರೆ ಯಾರ ಮೇಲೂ ‌ಹಲ್ಲೆ ಮಾಡಿಲ್ಲ ಎಂದರು.

ಇನ್ನು ನಾನು ‌ಬ್ಯಾಡ್ ಬಾಯ್ ಅಂತ ಗುರ್ತಿಸಿಕೊಂಡಿದ್ದೇನೆ. ಅದಕ್ಕೆ ಇಂತಹ ಆರೋಪ ಬರುತ್ತಲೇ ಇರುತ್ತದೆ. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಮಾಡಿರಲಿಲ್ಲ. ಸುಮ್ಮನೆ ನನ್ನ ತೇಜೋವಧೆಗೆ ಈ ಪ್ರಯತ್ನ ನಡೆದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ನಾನು ಒಳ್ಳೆಯವನಾಗೋಕೆ ಹೊರಟಿದ್ದೇನೆ. ಆದರೆ ಪದೇ ಪದೇ ಈ ರೀತಿ ಆಗುತ್ತಿದೆ ಎಂದರು.

ಪ್ರಕರಣದ ಹಿನ್ನೆಲೆ : ಕಾಂಗ್ರೆಸ್​ ಮುಖಂಡ ಮೊಹಮ್ಮದ್​ ನಲಪಾಡ್​ ವಿರುದ್ಧ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸಿದ್ದು ಹಳ್ಳಿಗೌಡ ಸ್ಪಷ್ಟನೆ ನೀಡಿದ್ದು, ವಿಡಿಯೋ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾನು ಅರಾಮಾಗಿದ್ದೇನೆ. ನಿನ್ನೆ ಯಾವುದೇ ಸಮಸ್ಯೆ, ಜಗಳವಾಗಿಲ್ಲ. ಹೊಡೆದಾಟದ ಫೋಟೋ ವೈರಲ್ ಆಗರುವುದು ಸುಳ್ಳು. ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಇನ್ನು ನಲಪಾಡ್ ಹೊಡೆದಿರೋದು ಸತ್ಯಕ್ಕೆ ದೂರವಾಗಿದೆ. ಇದು ಬಿಜೆಪಿ ಷಡ್ಯಂತ್ರವಾಗಿದೆ. ನಮ್ಮ ಕುಟುಂಬದ ಸದಸ್ಯರು ಗಾಬರಿಯಾಗಿದ್ದಾರೆ.. ದಯವಿಟ್ಟು ಸುದ್ದಿ ಹರಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಜನವರಿ 30ರಂದು ಯೂತ್​ ಕಾಂಗ್ರೆಸ್​ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದ್ದು, ನಲಪಾಡ್​​ ಅಧಿಕಾರ ಹಸ್ತಾಂತರವಾಗಬೇಕಿದೆ. ಹೀಗಾಗಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಲಪಾಡ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ಬಹುತೇಕ ಎಲ್ಲಾ ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಎನ್ನುವವರ ಮೇಲೆ ನಲಪಾಡ್ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

Exit mobile version