RSS ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ‘ರಾಷ್ಟ್ರಪಿತ’ : ಉಮರ್ ಅಹ್ಮದ್ ಇಲ್ಯಾಸಿ

Mohan Bhagwat

New Delhi : ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರ ಪಿತಾ'(Mohan Bhagwat as Rashtrapeetha) ಎಂದು ಕರೆದರು.

ಮುಸ್ಲಿಂ ಮುಖಂಡರನ್ನು ಸಂಪರ್ಕಿಸುತ್ತಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat as Rashtrapeetha) ಅವರು ಗುರುವಾರ ದೆಹಲಿಯಲ್ಲಿ(New Delhi) ಪ್ರಮುಖ ಧರ್ಮಗುರುಗಳನ್ನು ಭೇಟಿ ಮಾಡಿದರು.

“ನನ್ನ ಆಹ್ವಾನದ ಮೇರೆಗೆ ಮೋಹನ್ ಭಾಗವತ್ ಅವರು ಇಂದು ಭೇಟಿ ನೀಡಿದ್ದಾರೆ. ಅವರು ರಾಷ್ಟ್ರ-ಪಿತ ಮತ್ತು ರಾಷ್ಟ್ರ-ಋಷಿ, ಅವರ ಭೇಟಿಯಿಂದ ಉತ್ತಮ ಸಂದೇಶ ಪಸರಿಸಲಿದೆ.

ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ, ಆದರೆ ಎಲ್ಲದಕ್ಕೂ ದೊಡ್ಡ ಧರ್ಮವೆಂದರೆ ಅದು ಮಾನವೀಯತೆ(Humanity). ದೇಶವು ಮೊದಲು ಬರುತ್ತದೆ ಎಂದು ನಾವು ನಂಬಿದ್ದೇವೆ ಎಂದು ಉಮರ್ ಅಹ್ಮದ್ ಇಲ್ಯಾಸಿ ಹೇಳಿರುವುದಾಗಿ ಎಎನ್‌ಐ ಸಂಸ್ಥೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.

https://youtu.be/n6flfOJYLpI

ಮೋಹನ್ ಭಾಗವತ್ ಅವರು ಗುರುವಾರ ದೆಹಲಿಯ ಮಸೀದಿ ಮತ್ತು ಮದರಸಾವೊಂದಕ್ಕೆ ಭೇಟಿ ನೀಡಿ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ‘ಸರ್ಸಂಗಚಾಲಕ್’ ಮಧ್ಯ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಗೆ ತೆರಳಿದ್ದು, ಉತ್ತರ ದೆಹಲಿಯ ಆಜಾದ್‌ಪುರದಲ್ಲಿರುವ ಮದರಾಸ ತಜ್ವೀದುಲ್ ಕುರಾನ್‌ಗೆ ಭೇಟಿ ನೀಡಿದರು.

ಒಂದು ತಿಂಗಳ ಅವಧಿಯಲ್ಲಿ ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥರು ನಡೆಸುತ್ತಿರುವ ಎರಡನೇ ಸಭೆ ಇದಾಗಿದೆ ಎನ್ನಲಾಗಿದೆ. ಈ ಹಿಂದೆ ಮೋಹನ್ ಭಾಗವತ್ ಅವರು ‘ಕೋಮು ಸೌಹಾರ್ದತೆ ಗಟ್ಟಿಗೊಳಿಸಲು’ ಐವರು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದ್ದರು.

ಈ ಸಭೆಯು ನಿರಂತರ ಚರ್ಚೆಯ ಭಾಗವಾಗಿದೆ ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ. ಸುನೀಲ್ ನೀಡಿರುವ ಹೇಳಿಕೆ ಹೀಗಿದೆ, “ಆರ್‌ಎಸ್‌ಎಸ್ ಸರ್ಸಂಘಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ನಿರಂತರ ಸಾಮಾನ್ಯ ಸಂವಾದ ಪ್ರಕ್ರಿಯೆಯ ಭಾಗವಾಗಿದೆ.

ಇದನ್ನೂ ಓದಿ : https://vijayatimes.com/rahul-gandhi-election-plans/

ಕಸ್ತೂರಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಮೋಹನ್ ಭಾಗವತ್ ಮತ್ತು ಇಮಾಮ್ ಅವರ ನಡುವೆ ನಡೆದ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ತಿಳಿಸಿದ್ದಾರೆ.

Exit mobile version