ʼಉದಯವಾಣಿʼ ಸಂಸ್ಥಾಪಕ  ಮೋಹನದಾಸ್ ಪೈ ನಿಧನ ; ಗಣ್ಯರ ಸಂತಾಪ

mohan das pai

ಮಣಿಪಾಲ : ಉದಯವಾಣಿ ದಿನಪತ್ರಿಕೆ(Udayavani Print Media) ಸಂಸ್ಥಾಪಕ(Founder) ಮತ್ತು ನಾಡಿನ ಹೆಸರಾಂತ ಉದ್ಯಮಿ ಮೋಹನದಾಸ್ ಪೈ(Mohandas Pai)  ಅವರು  ಮಣಿಪಾಲದ ಆಸ್ಪತ್ರೆಯಲ್ಲಿ(Manipal Hospital) ನಿಧನರಾಗಿದ್ದಾರೆ. ಇಂದು  ಮಣಿಪಾಲದ ಎಂಜಿಎಂ ಕಾಲೇಜಿನಲ್ಲಿ  ಮೋಹನದಾಸ್ ಪೈ ಅವರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮೋಹನದಾಸ್  ಪೈ ಅವರ ನಿಧನ ಹಿನ್ನೆಲೆಯಲ್ಲಿ ಇಂದು ಡಾ. ಟಿಎಂಎ ಪೈ ಫೌಂಡೇಶನ್ನ ಎಲ್ಲಾ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪೈ ಅವರು ಕರಾವಳಿ ಸೇರಿದಂತೆ ನಾಡಿನ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ.  ಪೈ  ಶಿಕ್ಷಣ ಸಂಸ್ಥೆಗಳು ನಾಡಿನ ಪ್ರತಿಷ್ಠಿತ  ಶಿಕ್ಷಣ ಸಂಸ್ಥೆಗಳಾಗಿ ಹೆಸರು ಮಾಡಿವೆ.  ಟಿ.ಮೋಹನದಾಸ್ ಪೈ ಅವರು ಸಹೋದರರಾದ ಟಿ.ಅಶೋಕ್ ಪೈ, ಡಾ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಸಹೋದರಿಯರಾದ ಆಶಾ ಪೈ, ವಸಂತಿ ಆರ್ ಶೆಣೈ, ಇಂದುಮತಿ ಪೈ , ಜಯಂತಿ ಪೈ, , ಅವರನ್ನು ಅಗಲಿದ್ದಾರೆ. ಮೋಹನದಾಸ್ಪೈ ಅವರ ನಿಧನಕ್ಕೆ ನಾಡಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮಣಿಪಾಲದ ಪೈ ಪರಿವಾರದ ಹಿರಿಯರು, ನಾಡಿನ ಹೆಸರಾಂತ ಪತ್ರಿಕೆ ‘ಉದಯವಾಣಿ’ ಸಂಸ್ಥಾಪಕರು ಆಗಿದ್ದ ಶ್ರೀ ಟಿ. ಮೋಹನದಾಸ್ ಪೈ ಅವರ ನಿಧನ ಬಹಳ ದುಃಖವನ್ನುಂಟು ಮಾಡಿದೆ. ಅತ್ಯುತ್ತಮ ಆಡಳಿತಗಾರರಾಗಿದ್ದ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೇರಿಸಿ ಅಸಂಖ್ಯಾತ ಜನರಿಗೆ ಉದ್ಯೋಗದಾತರಾಗಿದ್ದರು. ಶ್ರೀಯುತ ಮೋಹನದಾಸ ಪೈ ಅವರಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ಈ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಮತ್ತು ಪೈ ಪರಿವಾರಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ತಿಳಿಸಿದ್ದಾರೆ.  

ಇನ್ನು ಉದಯವಾಣಿ ಪತ್ರಿಕೆಯ ಸಂಸ್ಥಾಪಕರು, ಹಿರಿಯ ಉದ್ಯಮಿ, ಹಲವು ಸಂಘ – ಸಂಸ್ಥೆಗಳ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಟಿ.ಮೋಹನದಾಸ ಪೈ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.  ಅವರ ದುಃಖತಪ್ತ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟ್ವೀಟ್ ಮಾಡಿದ್ದಾರೆ.

ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕರು ಆದ ಶ್ರೀ ಟಿ. ಮೋಹನದಾಸ್ ಪೈ ಅವರು ನಿಧನರಾದ ವಿಷಯ ನನಗೆ ಆಘಾತವನ್ನುಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಹಾಗೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ(Basavaraj Bommai)  ಟ್ವೀಟ್ ಮಾಡಿದ್ದಾರೆ.

Exit mobile version