ಈ 2023 ರ ಐಪಿಎಲ್(IPL) ನಲ್ಲಿ ಕೆಲ ಆಟಗಾರರು ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿಯಳಿದ್ದಾರೆ.ನೂರಕ್ಕೂ ಅಧಿಕ ಪಂದ್ಯಗಳಲ್ಲಿ ಈಗಾಗಲೇ ಸೋಲಿನ ರುಚಿ ಕಂಡಿದ್ದಾರೆ. ಈವರೆಗೆ ನಡೆದ ಒಟ್ಟು 15 ಸೀಸನ್‌ಗಳಲ್ಲಿ (Season) ಆಟಗಾರರು ಅತೀ ಹೆಚ್ಚು ಸೋಲು ಕಂಡು ಇನ್ನು ನಡೆಯುವ ಮುಂದಿನ ಪಂದ್ಯಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹಾಗಾದರೆ ಐಪಿಎಲ್ನಲ್ಲಿ ಇಲ್ಲಿಯವರೆಗೆ ನಡೆದ ಒಟ್ಟು 16 ಸೀಸನ್‌ಗಳ ಮೂಲಕ ಅತೀ ಹೆಚ್ಚು ಸೋತ ತಂಡಗಳ ಭಾಗವಾದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ…
1- ವಿರಾಟ್ ಕೊಹ್ಲಿ(Virat Kohil): ಐಪಿಎಲ್ ನ ಕಳೆದ 16 ಸೀಸನ್‌ಗಳಿಂದ ಆರ್ ಸಿಬಿ (RCB) ಆಡಿರುವ ಒಟ್ಟು 234 ಪಂದ್ಯಗಳಲ್ಲಿ ಒಟ್ಟು 116 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸೋತ್ತಿದ್ದಾರೆ. ಅಂದರೆ ಐಪಿಎಲ್‌ನಲ್ಲಿ ಇದುವರೆಗೆ ಅತೀ ಹೆಚ್ಚು ಸೋಲು ಕಂಡಂತಹ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ.
2- ದಿನೇಶ್ ಕಾರ್ತಿಕ್(Dinesh Karthik): ಗುಜರಾತ್ ಲಯನ್ಸ್ (Gujarat Lions), ಡೆಲ್ಲಿ ಕ್ಯಾಪಿಟಲ್ಸ್,ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್,ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಒಟ್ಟು 240 ಪಂದ್ಯಗಳನ್ನು ಆಡಿದ್ದಾರೆ,ಇದರಲ್ಲಿ ಒಟ್ಟು 114 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
3- ರೋಹಿತ್ ಶರ್ಮಾ (Rohit Sharma): ಹೈದೆರಾಬಾದ್ ಡೆಕ್ಕನ್ ಚಾರ್ಜರ್ಸ್ (Hyderabad Deccan Chargers) ಮತ್ತು ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಒಟ್ಟು 238 ಪಂದ್ಯಗಳಲ್ಲಿ ಆಡಿದ್ದಾರೆ, ಅದರಲ್ಲಿ ಒಟ್ಟು 107 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

4- ರಾಬಿನ್ ಉತ್ತಪ್ಪ (Robin Uthappa): ಮುಂಬೈ ಇಂಡಿಯನ್ಸ್, ಸಿಎಸ್ಕೆ, ಕೆಕೆಆರ್, ಪುಣೆ ವಾರಿಯರ್ಸ್ (Pune Warriors) , ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ರಾಬಿನ್ ಉತ್ತಪ್ಪ ಒಟ್ಟು 205 ಪಂದ್ಯಗಳನ್ನಾಡಿದ್ದಾರೆ, ಇದರಲ್ಲಿ ಒಟ್ಟು 106 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
5- ಶಿಖರ್ ಧವನ್ (Shikhar Dhawan) : ಮುಂಬೈ ಇಂಡಿಯನ್ಸ್,ಡೆಲ್ಲಿ ಕ್ಯಾಪಿಟಲ್ಸ್(Delhi Capitals), ಎಸ್ಆಹೆಚ್, ಹಾಗೂ ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ ಒಟ್ಟು 214 ಪಂದ್ಯಗಳನ್ನು ಆಡಿದ್ದಾರೆ.ಇದರಲ್ಲಿ ಒಟ್ಟು 102 ಮ್ಯಾಚ್‌ನಲ್ಲಿ ಸೋಲು ಕಂಡಿದ್ದಾರೆ.
6- ಎಂಎಸ್ ಧೋನಿ(M.S.Dhoni): ರೈಸಿಂಗ್ ಪುಣೆ ಜೈಂಟ್ಸ್ (Rising Pune Giants) ಮತ್ತು ಸಿಎಸ್‌ಕೆ ಪರ ಆಡುತ್ತಿರುವ ಧೋನಿ ಆಡಿರುವ ಒಟ್ಟು 246 ಪಂದ್ಯಗಳಲ್ಲಿ ಒಟ್ಟು 102 ಪಂದ್ಯಗಳಲ್ಲಿ ಸೋತ್ತಿದ್ದಾರೆ.
ರಶ್ಮಿತಾ ಅನೀಶ್