ಅಮೇರಿಕಾದ US News & World Report ಇತ್ತೀಚೆಗೆ ಪ್ರಕಟಿಸಿದ 2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಶ್ರೇಯಾಂಕಗಳಲ್ಲಿ, ಯುನೈಟೆಡ್ ಸ್ಟೇಟ್ಸ್ (United States), ಚೀನಾ ಮತ್ತು ರಷ್ಯಾ ವಿಶ್ವದ ಅತ್ಯಂತ ಪ್ರಬಲ ಮತ್ತು ಶಕ್ತಿಯುತ ರಾಷ್ಟ್ರಗಳಾಗಿ ತಮ್ಮ ಅಪ್ರತಿಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಈ ವರದಿಯ ಮೌಲ್ಯಮಾಪನವು 17,000 ವ್ಯಕ್ತಿಗಳನ್ನು ಮತ್ತು 87 ವೈವಿಧ್ಯಮಯ ದೇಶಗಳ ಕುರಿತು ಅವರ ಅಭಿಪ್ರಾಯಗಳನ್ನು ಒಳಗೊಂಡಿದೆ. ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯದಂತಹ ಅಂಶಗಳನ್ನು ಪರಿಗಣಿಸುವ ಮೂಲಕ ದೇಶಗಳ ಪ್ರಭಾವವನ್ನು ಅಳೆಯಲಾಗಿದೆ.
- ಅಮೆರಿಕ (America): ಯುನೈಟೆಡ್ ಸ್ಟೇಟ್ಸ್ ‘ಪ್ರಬಲ ಜಾಗತಿಕ ಶಕ್ತಿ’ಯಾಗಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. $25.5 ಟ್ರಿಲಿಯನ್ GDP ಮತ್ತು ‘ಅತ್ಯಂತ ತಾಂತ್ರಿಕವಾಗಿ ಮುಂದುವರಿದ’ ರಾಷ್ಟ್ರವಾಗಿ ಅಮೇರಿಕಾ (America) ಜಾಗತಿಕವಾಗಿ ಅತ್ಯಂತ ಪ್ರಬಲ ದೇಶವಾಗಿದೆ
- ಚೀನಾ (China): ಭೂಪ್ರದೇಶ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಚೀನಾ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಚೀನಾದ (China) ಪರಮಾಣು ಸಾಮರ್ಥ್ಯಗಳು ಮತ್ತು ಪ್ರಭಾವಶಾಲಿ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ಸದಸ್ಯತ್ವವು ಅದರ ಶಕ್ತಿಯ ಶ್ರೇಯಾಂಕವನ್ನು ಹೆಚ್ಚಿಸಿದೆ.
- ರಷ್ಯಾ (Russia): ಉಕ್ರೇನ್ನೊಂದಿಗಿನ ಯುದ್ಧದ ಹೊರತಾಗಿಯೂ, ರಷ್ಯಾ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಅಧ್ಯಯನವು ಹೇಳಿದೆ. ಇದರ ವಿಸ್ತಾರವಾದ ಗಡಿಗಳು, ದೊಡ್ಡ ಭೂಪ್ರದೇಶ, ಪ್ರಮುಖ ಕೈಗಾರಿಕೆಗಳು, ಸಾಂಸ್ಕೃತಿಕ ಕೊಡುಗೆಗಳು ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿನ ಇತಿಹಾಸವು ಅದರ ಸ್ಥಾನವನ್ನು ಹೆಚ್ಚಿಸಿದೆ. ರಷ್ಯಾ (Russia) G20 ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂತಹ ಮಹತ್ವದ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು, ಜಾಗತಿಕವಾಗಿ ಪ್ರಭಾವ ಹೊಂದಿದೆ.
- ಜರ್ಮನಿ (Germany): ಅಂತಾರಾಷ್ಟ್ರೀಯ ಮೈತ್ರಿಗಳು ಮತ್ತು ಅಸಾಧಾರಣ ಆರ್ಥಿಕ ಪ್ರಭಾವದಿಂದಾಗಿ ಜರ್ಮನಿಯ ಜಾಗತಿಕ ಮನ್ನಣೆ ಪಡೆದಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದನ್ನು ಹೊಂದಿರುವ ಜರ್ಮನಿ (Germany) UN, EU, NATO ಮತ್ತು OECD ಯಂತಹ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿದೆ.
- ಯುನೈಟೆಡ್ ಕಿಂಗ್ಡಮ್ (United Kingdom): ಬ್ರಿಟನ್ ರಾಜಕೀಯ, ಅರ್ಥಶಾಸ್ತ್ರ, ಸಂಸ್ಕೃತಿ ಮತ್ತು ವಿಜ್ಞಾನದಲ್ಲಿ ಮಹತ್ವದ ಅಂತರರಾಷ್ಟ್ರೀಯ ಪ್ರಭಾವವನ್ನು ಹೊಂದಿರುವ ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಗುರುತಿಸಲ್ಪಟ್ಟಿದೆ. ಪ್ರಮುಖ ಜಾಗತಿಕ ಹಣಕಾಸು ಕೇಂದ್ರವಾಗಿ ಲಂಡನ್ನ ಸ್ಥಾನಮಾನ ಮತ್ತು ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
- ದಕ್ಷಿಣ ಕೊರಿಯಾ (South koria): ಪ್ರಬಲ ಮಿಲಿಟರಿ ಮತ್ತು ದೃಢವಾದ ರಫ್ತುಗಳ ಕಾರಣದಿಂದಾಗಿ ದಕ್ಷಿಣ ಕೊರಿಯಾ ಪ್ರಬಲ ಶಕ್ತಿಯಾಗಿದೆ. ರಾಷ್ಟ್ರವು ಯುಎನ್ (UN), ಜಿ 20 ಮತ್ತು ವಿಶ್ವ ವ್ಯಾಪಾರ ಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ.
- ಫ್ರಾನ್ಸ್ (France): ಪ್ರವಾಸೋದ್ಯಮದಿಂದ ಉತ್ತೇಜಿತವಾಗಿರುವ ವಿಶ್ವದ ಪ್ರಬಲ ಆರ್ಥಿಕತೆಗಳಲ್ಲಿ ಒಂದಾಗಿರುವ ಫ್ರಾನ್ಸ್ ಜಾಗತಿಕವಾಗಿ ಪ್ರಭಾವ ಹೊಂದಿದೆ. ಅದರ ದೃಢವಾದ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳು ಅದರ ಆರ್ಥಿಕ ಪ್ರಭಾವಕ್ಕೆ ಕಾರಣವಾಗಿದೆ.
- ಜಪಾನ್ (Japan): ಜಪಾನ್ (Japan) ಜಗತ್ತಿನ ಅತ್ಯಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಒಂದಾಗಿದೆ. ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ಉಕ್ಕಿನ ಪ್ರಮುಖ ಉತ್ಪಾದಕ ದೇಶವಾಗಿದೆ. ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ನಾಲ್ಕನೇ ಅತಿ ಹೆಚ್ಚು ಆರ್ಥಿಕ ಪ್ರಭಾವವನ್ನು ಜಪಾನ್ ಹೊಂದಿದೆ.
- ಸೌದಿ ಅರೇಬಿಯಾ (Soudi Arabia): ಸೌದಿ ಅರೇಬಿಯಾ (Soudi Arabia) ವಿಶ್ವದ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿದೆ. ಇದು ಜಾಗತಿಕ ತೈಲ ಉತ್ಪಾದನೆಯ ಕಾಲು ಭಾಗವನ್ನು ಹೊಂದಿದೆ. ದೇಶವು OPEC ಸ್ಥಾಪಕ ಸದಸ್ಯ, ವಿಶ್ವ ವ್ಯಾಪಾರ ಸಂಘಟನೆಯ ಭಾಗವಾಗಿದೆ ಮತ್ತು ವಾರ್ಷಿಕವಾಗಿ ಲಕ್ಷಾಂತರ ಮುಸ್ಲಿಂ ಯಾತ್ರಾರ್ಥಿಗಳ ತಾಣವಾಗಿದೆ. ಹೀಗಾಗಿ ಜಾಗತಿಕ ಪ್ರಭಾವ ಹೊಂದಿದೆ.
- ಭಾರತ : 12ನೇ ಶ್ರೇಯಾಂಕ್ವನ್ನು ಹೊಂದಿರುವ ಭಾರತ ವಿಶ್ವದ ಪ್ರಮುಖ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿದೆ. ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತ, ಜಾಗತಿಕವಾಗಿ ಪ್ರಬಲ ದೇಶವಾಗಿದೆ. ಪ್ರಬಲ ಮಿಲಿಟರಿ ಪಡೆಯನ್ನು ಹೊಂದಿದ್ದರೂ, ಭಾರತ ಅದರ ಮಿತಿಯನ್ನು ಸೀಮೀತಗೊಳಿಸಿದೆ ಎಂದು ಅಧ್ಯಯನವು ಹೇಳಿದೆ.