2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?

ಎರಡು ವರ್ಷಗಳ ಲಾಕ್‌ಡೌನ್‌ (Lock Down) ಅವಧಿಯ ನಂತರ, 2022 ಚಲನಚಿತ್ರ (most searched movies of 2022) ಪ್ರೇಮಿಗಳಿಗೆ ರೋಮಾಂಚಕಾರಿ ವರ್ಷವಾಗಿತ್ತು. ಈ ವರ್ಷ ಸಿನಿಪ್ರೇಮಿಗಳು ತಮ್ಮ ನೆಚ್ಚಿನ ತಾರೆಯರನ್ನು ಥಿಯೇಟರ್‌ಗಳಲ್ಲಿ ವೀಕ್ಷಿಸುತ್ತಾ ಸಂಭ್ರಮಿಸಿದರು.

ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ  ಚಲನಚಿತ್ರಗಳ  ಪಟ್ಟಿಯೂ ಹೊರಬಂದಿದೆ.  ಗೂಗಲ್‌ ನೀಡಿರುವ(most searched movies of 2022 2022ರಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

1) ಬ್ರಹ್ಮಾಸ್ತ್ರ: ಭಾಗ ಒಂದು – ಶಿವ

2) K.G.F: ಅಧ್ಯಾಯ 2

3) ಕಾಶ್ಮೀರ ಫೈಲ್ಸ್

4) ಆರ್ಆರ್ಆರ್

5) ಕಾಂತಾರ

6) ಪುಷ್ಪಾ

7) ವಿಕ್ರಮ್

8) ಲಾಲ್ ಸಿಂಗ್ ಚಡ್ಡಾ

9) ದೃಶ್ಯ 2

10) ಥಾರ್

ಭಾರತದಲ್ಲಿ 2022 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿಯಲ್ಲಿ  ಬ್ರಹ್ಮಾಸ್ತ್ರ ಅಗ್ರಸ್ಥಾನದಲ್ಲಿದೆ. ಇದರ ನಂತರ ಯಶ್ ಅವರ ಕೆಜಿಎಫ್ 2 (KGF 2) ಮತ್ತು ಕಾಶ್ಮೀರ ಫೈಲ್ಸ್ ಸಿನಿಮಾಗಳನ್ನು ಹೆಚ್ಚು ಜನರು ಹುಡುಕಿದ್ದಾರೆ.

https://vijayatimes.com/chandrababu-2024-last-election/

 ನಾಲ್ಕನೇ ಸ್ಥಾನದಲ್ಲಿ ರ್ಆರ್ಆರ್ಆ ಚಿತ್ರವಿದ್ದು, ಐದನೇಯ ಸ್ಥಾನದಲ್ಲಿ ಕನ್ನಡದ ಕಾಂತಾರ (Kanthara) ಚಿತ್ರ ಸ್ಥಾನ ಪಡೆದುಕೊಂಡಿದೆ.

ಅಲ್ಲು ಅರ್ಜುನ್ (Allu Arjun) ಅವರ ಪುಷ್ಪ (Pushpa) 2021ರ ಕೊನೆಯಲ್ಲಿ ಬಿಡುಗಡೆಯಾಯಿತು. ಆದರೆ ರಷ್ಯಾದಲ್ಲಿ ಬಿಡುಗಡೆಯಾದ ನಂತರ ಮತ್ತೆ ಜನಪ್ರಿಯತೆಯ ಪಟ್ಟಿಗೆ ಮರಳಿದೆ. 

ಇನ್ನೊಂದೆಡೆ ಕಮಲ್ ಹಾಸನ್ ಅವರ ವಿಕ್ರಮ್ (Vikram) ತಮಿಳು ಚಲನಚಿತ್ರೋದ್ಯಮದ ಅತಿದೊಡ್ಡ ಬ್ಲಾಕ್‌ ಬಾಸ್ಟರ್‌ಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : https://vijayatimes.com/siddaramaih-vs-rahul-gandhi/ 

ಇನ್ನು ಅಮೀರ್ ಖಾನ್ ಅವರ ಪುನರಾಗಮನದ ಚಿತ್ರ, ಲಾಲ್ ಸಿಂಗ್ ಚಡ್ಡಾ (Laal Singh Chaddha) ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡರು, ಬಹು ವಿವಾದಾತ್ಮಕ ಕಾರಣಗಳಿಂದಾಗಿ ಚಿತ್ರವು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಅಜಯ್ ದೇವಗನ್ (Ajay Devgn) ಅವರ ದೃಶ್ಯಂ 2 (Drishyam2) ಬಾಲಿವುಡ್ ಚಿತ್ರವಾಗಿದ್ದು, ಈ ವರ್ಷ ಯಶಸ್ಸು ಕಂಡ ಬಾಲಿವುಡ್‌ ಚಿತ್ರವಾಗಿದೆ.

-ಮಹೇಶ್.ಪಿ.ಎಚ್

Exit mobile version