Tiruvanthapura: ತಾಯಿಗೆ ತನ್ನ ಮಕ್ಕಳಿಗೆ ಸ್ವಲ್ಪ ನೋವಾದರೂ ಕಣ್ಣಿನಂಚಲ್ಲಿ ನೀರು ಬರುತ್ತೆ. ಯಾವಾಗಲು ಮಕ್ಕಳನ್ನು ತಾಯಿ ರಕ್ಷಿಸುವಲ್ಲಿ ಮುಂದೆ ಇರುತ್ತಾಳೆ. ಆದರೆ ಕೇರಳದ ತಿರುವನಂತಪುರಂನ (Tiruvanthapura) ಈ ಮಹಿಳೆಯು ತನ್ನ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ತನ್ನ ಪ್ರೇಮಿಗಳಿಗೆ ಈಕೆಯೇ ಸಹಾಯ ಮಾಡಿದ್ದು, ಸಾಬೀತಾಗಿದೆ ರಾಕ್ಷಸೀಯ ಪ್ರವೃತ್ತಿ ಕಂಡು ಕೋರ್ಟ್ (Court) ಕೂಡ ದಂಗಾಗಿದೆ. ಅದಕ್ಕೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕರುಣೆಗೆ ಅರ್ಹಳಲ್ಲ ಎಂದ ನ್ಯಾಯಾಲಯ ಈ ಮಹಿಳೆ ತಾಯಿ ಕುಲಕ್ಕೆ ಅವಮಾನ ತನ್ನ ಸ್ವಂತ ಮಕ್ಕಳ ಮೇಲೆಯೇ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದ್ದ ಕ್ರೂರ ತಾಯಿ ಎಂದು ಕೇರಳದ ತಿರುವನಂತಪುರದ ತ್ವರಿತಗತಿ ವಿಚಾರಣಾ ನ್ಯಾಯಾಲಯ ಪೋಕ್ಸೊ (Pocso) ಕಾಯಿದೆಯಡಿ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೊತೆಗೆ 20 ಸಾವಿರ ರೂಪಾಯಿ. ದಂಡ ವಿಧಿಸಿ ಕಠಿಣ ತೀರ್ಪು ನೀಡಿದೆ. ಪೋಕ್ಸೊ ಕೇಸ್ನಲ್ಲಿ ಶಿಕ್ಷೆಗೆ ಗುರಿಯಾದ ಪ್ರಕರಣ ಇದಾಗಿದೆ.
ಮಾನಸಿಕ ಅಸ್ವಸ್ತನಾಗಿದ್ದ ಗಂಡನನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆಕೆ ಅವನೊಂದಿಗೆ ಜೀವನ ನಡೆಸುತ್ತಿದ್ದಳು. 2018-2019 ರ ಅವಧಿಯಲ್ಲಿ ಹೆತ್ತ ತಾಯಿಯ ಸಹಕಾರ ಪಡೆದು ಇಬ್ಬರ ಮೇಲೆ ದೌರ್ಜನ್ಯ ನಡೆಸಿದ್ದಾನೆ. ದೈಹಿಕ ಹಿಂಸೆಯಿಂದ ಕಂಗೆಟ್ಟ ಹೆಣ್ಣುಮಕ್ಕಳು ಅಜ್ಜಿ ಮನೆಗೆ ಹೋಗಿದ್ದರು. ಅಲ್ಲಿ ಮಗಳಿಗೆ ಬುದ್ದಿ ಹೇಳಿದ ಕುಟುಂಬದವರು ಮಕ್ಕಳನ್ನು ವಾಪಸ್ ಮನೆಗೆ ಕಳಿಸಿಕೊಟ್ಟಿದ್ದರು. ಈ ವೇಳೆ ಮಹಿಳೆ ಜೊತೆ ಸಂಬಂಧ ಹೊಂದಿದ ಮತ್ತೊಬ್ಬ ವ್ಯಕ್ತಿಯಿಂದ ದೌರ್ಜನ್ಯ ಮುಂದುವರಿದಿತ್ತು.
ಮಕ್ಕಳ ನೋವು ಕೇಳಿದ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಮಹಿಳೆ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ರೇಖಾ (R Rekha), ”ಹೆತ್ತ ಮಕ್ಕಳ ಮೇಲೆ ದೌರ್ಜನ್ಯಕ್ಕೆ ಬೆಂಗಾವಲಾಗಿ ನಿಂತ ಆಪಾದಿತ ಮಹಿಳೆ ತಾಯಿ ಕುಲಕ್ಕೆ ಅವಮಾನ. ಮಕ್ಕಳ ಭವಿಷ್ಯ ಹಾಳು ಮಾಡಿದ ಈಕೆಗೆ ಯಾವುದೇ ರೀತಿಯಲ್ಲೂ ಕರುಣೆಗೆ ಅರ್ಹಳಲ್ಲ.
ಇಂಥವರಿಗೆ ಕಠಿಣ ಶಿಕ್ಷೆಯೊಂದೆ ದಾರಿ” ಎಂದು ತೀರ್ಪಿನಲ್ಲಿ ಹೇಳಿದರು. ಮಹಿಳೆಗೆ 40 ವರ್ಷ 6 ತಿಂಗಳ ಕಠಿಣ ಶಿಕ್ಷೆ 20 ಸಾವಿರ ರೂ ದಂಡ ತೆರುವಲ್ಲಿ ವಿಫಲವಾದರೆ ಮತ್ತೆ ಆರು ತಿಂಗಳು ಸೆರೆವಾಸ ಮುಂದುವರಿಸಬೇಕು ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಇನ್ನೊಬ್ಬ ಪ್ರೇಮಿಯು ಕೂಡ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಪ್ರತ್ಯೇಕ ಪ್ರಕರಣ ವಿಚಾರಣೆ ಹಂತದಲ್ಲಿದೆ. ಶಿಶುಪಾಲನ್ (Shishupalan) ಆತ್ಮಹತ್ಯೆ ಮಾಡಿಕೊಂಡಿದ್ದರಿಂದ, ತಾಯಿಗೆ ಮಾತ್ರ ಶಿಕ್ಷೆಯಾಗಿದೆ. 22 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದ್ದು, 32 ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸಲಾಗಿತ್ತು ಇದರ ಆದಾರದ ಮೇಲೆ ದೌರ್ಜನ್ಯ ಎಸಗಿದವನಿಗೂ ಮತ್ತು ದೌರ್ಜನ್ಯಕ್ಕೆ ಬೆಂಗಾವಲಾಗಿ ನಿಂತ ಆಪಾದಿತ ಮಹಿಳೆ ತಾಯಿಗೂ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ.
ಮೇಘಾ ಮನೋಹರ ಕಂಪು.