ಗೋಹತ್ಯೆ ಮಾಡದೇ ಬಕ್ರೀದ್ ಆಚರಿಸೋಣ : ಮುಸ್ಲಿಮರಿಗೆ ಮೌಲಾನಾ ಅಜ್ಮಲ್ ಕರೆ

assam

ಗುವಾಹಟಿ : ಮುಸ್ಲಿಂಮರು(Muslims) ಕೂಡಾ ಬೇರೆ ಧರ್ಮದವರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು.

ಆಗ ಮಾತ್ರ ಸಮಾಜದಲ್ಲಿ ಸಹಬಾಳ್ವೆ ಸಾಧ್ಯ. ಹೀಗಾಗಿ ಈ ಬಾರಿ ಮುಸ್ಲಿಂಮರೆಲ್ಲರೂ ಬಕ್ರೀದ್ ಹಬ್ಬದ(Bakrid Festival) ಆಚರಣೆ ವೇಳೆ ಹಿಂದೂಗಳ ಭಾವನೆಯನ್ನು ಗೌರವಿಸೋಣ.

ಗೋವುಗಳ ಹತ್ಯೆ(Cow Slaughter) ಮಾಡದೇ ಬಕ್ರೀದ್‌ ಆಚರಿಸೋಣ ಎಂದು ಅಸ್ಸಾಂ ಸಂಸದ(Assam MLA) ಹಾಗೂ ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರಾಟಿಕ್ ಫ್ರಂಟ್ ನಾಯಕ ಮೌಲಾನಾ ಬದ್ರುದ್ದಿನ್ ಅಜ್ಮಲ್ ಅವರು ಹೇಳಿದ್ದಾರೆ.

ಇನ್ನು ನಮ್ಮ ಪೂರ್ವಜರು ಹಿಂದೂಗಳಾಗಿದ್ದು, ಇಸ್ಲಾಂ ಧರ್ಮದ ಮೌಲ್ಯಗಳನ್ನು ಮೆಚ್ಚಿಕೊಂಡು ಇಸ್ಲಾಂ ಧರ್ಮಕ್ಕೆ ಬಂದಿದ್ದಾರೆ. ಇಸ್ಲಾಂ ಧರ್ಮ ಅನೇಕ ವಿಶೇಷ ಗುಣಗಳನ್ನು ಹೊಂದಿದೆ.

https://vijayatimes.com/weather-forecast-alerts-coastal-regions/

ಜಗತ್ತಿನ ಎಲ್ಲ ಧರ್ಮಗಳ ಭಾವನೆಗಳನ್ನು ಇಸ್ಲಾಂ ಗೌರವಿಸುತ್ತದೆ. ಹೀಗಾಗಿ ಒಂದು ದಿನ ಗೋಮಾಂಸ ತಿನ್ನದಿದ್ದರೆ ಮುಸ್ಲಿಂಮರು ಸಾಯುವುದಿಲ್ಲ. ನಾವು ಮುಸ್ಲಿಂಮರೆಲ್ಲರೂ ಹಿಂದೂ ಸಹೋದರರೊಂದಿಗೆ ಸೇರಿ ಈ ಬಾರಿಯ ಬಕ್ರೀದ್‌ ಹಬ್ಬವನ್ನು ಆಚರಿಸೋಣ ಎಂದು ಮುಸ್ಲಿಂಮರಿಗೆ ಕರೆ ನೀಡಿದ್ದಾರೆ.

ಇನ್ನು ಇದೇ ವೇಳೆ ನೂಪುರ್ ಶರ್ಮಾ(Nupur Sharma) ವಿವಾದ ಕುರಿತು ಮಾತನಾಡಿದ ಅವರು, ಆ ದೇವರು ನೂಪುರ್ ಶರ್ಮಾ ಅವರಂತಹವರಿಗೆ ಉತ್ತಮ ಬುದ್ದಿಯನ್ನು ನೀಡಬೇಕೆಂದು ಮುಸ್ಲಿಂಮರು ಪ್ರಾರ್ಥಿಸಬೇಕು. ಶಿರಚ್ಛೇದ ಮಾಡುತ್ತೇನೆ ಎನ್ನುವುದು ಮೂರ್ಖತನದ ಪರಮಾವಧಿ. 

ಮುಸ್ಲಿಮರು ಈ ವಿವಾದದ ಕುರಿತು ಪ್ರತಿಕ್ರಿಯಿಸಬಾರದು. ಬದಲಿಗೆ, ಶಾಂತಿಯಿಂದ ದೇವರು ಆಕೆಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಪ್ರಾರ್ಥಿಸಬೇಕು. ಇನ್ನು ಈ ರೀತಿಯ ವಿವಾದಗಳನ್ನು ಬಳಸಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ದೇಶವನ್ನು ಹಿಂದೂ ರಾಜ್‌ ಮಾಡಲು ಪ್ರಯತ್ನಿಸುತ್ತದೆ.

ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಅವರಿಗೆ ದೇಶದಲ್ಲಿರುವ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು ಸಾಧ್ಯವಿಲ್ಲ. ಎರಡು ಸಮುದಾಯಗಳು ಅದಕ್ಕೆ ಅವಕಾಶವನ್ನೂ ನೀಡಬಾರದು.

ಇನ್ನು ಭಾರತ ಅನೇಕ ಧರ್ಮಗಳ ಜನರ ದೇಶವಾಗಿದೆ. ಇಲ್ಲಿ ವಿವಿಧ ಸಮುದಾಯಗಳು, ಜನಾಂಗೀಯ ಗುಂಪುಗಳು ಇವೆ. ಅವರೆಲ್ಲರೊಂದಿಗೆ ನಾವೆಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಭಾರತ ಸಾವಿರಾರೂ ವರ್ಷಗಳಿಂದ ಸನಾತನ ಧಾರ್ಮಿಕ ಪರಂಪರೆಯ ಮೇಲೆ ನಂಬಿಕೆ ಇಟ್ಟಿದೆ.

ಸನಾತನ ಹಿಂದೂ ಧರ್ಮ ಹಸುವನ್ನು ದೇವರೆಂದು ಗೌರವಿಸುತ್ತದೆ. ಹೀಗಾಗಿ ಹಿಂದೂಗಳ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಮುಸ್ಲಿಂಮರು ಗೋಹತ್ಯೆ ಮಾಡಬಾರದು ಎಂದು ಮನವಿ ಮಾಡಿದರು.
Exit mobile version