Visit Channel

37 ಕೋಟಿಗಳ ಒಡತಿ ನಟಿ ಮೌನಿ ರಾಯ್ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ.?

Untitled design (24)

ಇಂದು 37 ಕೋಟಿಗಳ ಒಡತಿ ನಟಿ ಮೌನಿ ರಾಯ್ ಮದುವೆ ಸಂಭ್ರಮ.
ಮೌನಿ ರಾಯ್ ಅವರು ಬಾಲಿವುಡ್ ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟಿ, ನರ್ತಕಿ, ಗಾಯಕಿ ಮತ್ತು ರೂಪದರ್ಶಿ ಕೂಡ ಹೌದು. ಈ ನಟಿಗೆ ದೇಶದೆಲ್ಲೆಡೆ ಅಪಾರ ಅಭಿಮಾನಿಗಳಿದ್ದು, ಹೆಚ್ಚು ಸಂಭಾವನೆ ಪಡೆಯುವ ಟಾಪ್ ಟೆಲಿವಿಷನ್ ನಟಿಯಾಗಿದ್ದಾರೆ.

ನಟಿ ಮೌನಿ ರಾಯ್ ಇಂದು ಗೋವಾದಲ್ಲಿ ತಾನು ಮೆಚ್ಚಿದ
ಹುಡುಗ ಸೂರಜ್ ನಂಬಿಯಾರ್ ಅವರ ಜೊತೆ
ಹಸೆಮಣೆ ಏರಿದ್ದಾರೆ. ಇವರಿಬ್ಬರು 2019 ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಎಲ್ಲಾ ಅತಿಥಿಗಳು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಒಯ್ಯುವಂತೆ ಕೇಳಿಕೊಳ್ಳಲಾಗಿತ್ತು.


ಯಾರು ಈ ಸೂರಜ್ ನಂಬಿಯಾರ್ ?


34 ವರ್ಷಗಳ ವಯಸ್ಸಿನ ಸೂರಜ್ ನಂಬಿಯಾರ್, ಭಾರತದ ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದರು. ಸೂರಜ್ ಒಬ್ಬ ಪ್ರಸಿದ್ಧ ಭಾರತೀಯ ಉದ್ಯಮಿ ಹಾಗು ಅವರ ವ್ಯವಹಾರವನ್ನು ದುಬೈನಲ್ಲಿಯು ಸ್ಥಾಪಿಸಲಾಗಿದೆ.

ಮೌನಿ ರಾಯ್ ಹಾಗು ಸೂರಜ್ ನಂಬಿರಾಯ್ ಪ್ರೇಮ ಕಥೆ,
ಸೂರಜ್ ನಂಬಿಯಾರ್ ದುಬೈನಲ್ಲಿ ನೆಲೆಸಿರುವ ಹೆಸರಾಂತ ಉದ್ಯಾಮಿಯಾಗಿದ್ದು ಮೌನಿ ಅವರನ್ನು ದುಬೈನಲ್ಲಿ ಭೇಟಿಯಾದರು. ಮೌನಿ ಲಾಕ್‌ಡೌನ್‌ನಲ್ಲಿ ಸುಮಾರು 8 ತಿಂಗಳ ಕಾಲ ದುಬೈನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಸಿಲುಕಿಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮೌನಿ ಮತ್ತು ಸೂರಜ್‌ನ ಆತ್ಮೀಯತೆ ಹೆಚ್ಚಾಯಿತು.

ಸೂರಜ್ ಮತ್ತು ಮೌನಿ ಬಹಳ ಸಮಯದಿಂದ ಒಟ್ಟಿಗೆ ಇದ್ದಾರೆ ಮತ್ತು ಒಟ್ಟಿಗೆ ಸಮಯ ಕಳೆಯುವ ಯಾವುದೇ ಅವಕಾಶವನ್ನು ಕಳೆದುಕೊಂಡಿಲ್ಲ ಹಾಗು ಮೌನಿ ಅವರು ಸೂರಜ್ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ದುಬೈನಲ್ಲಿ ಹೊಸ ವರ್ಷವನ್ನು ಪ್ರಾರಂಭಿಸಿದರು.

ನಟಿ ಮೌನಿ ರಾಯ್ ಅವರ ಹಳದಿ ಸಮಾರಂಭವು ಜನವರಿ 26 ರಂದು ನಡೆಯಿತು ಮತ್ತು ವಧು-ವರರು ಜುಬೇದಾ ಚಲನಚಿತ್ರದ ‘ಮೆಹಂದಿ
ಹೈ ರಚನೆ ವಾಲಿ’ ಎಂಬ ಪ್ರಸಿದ್ಧ ಹಾಡಿಗೆ ನೃತ್ಯ ಮಾಡಿದ್ದು,
ಮೌನಿ ರಾಯ್ ಅವರು ಸೊಗಸಾದ ಹಳದಿ ಲೆಹೆಂಗಾವನ್ನು ಧರಿಸಿ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಮೌನಿ ರಾಯ್ ಅವರ ನಾಗಿನಿಯ ದಾರವಾಹಿಯ ಸಹ ನಟ
ಅರ್ಜುನ್ ಬಿಜ್ಲಾನಿ ಕೂಡ ಗೋವಾದಲ್ಲಿ ನಡೆದ ಹಳದಿ ಕಾರ್ಯಕ್ರಮದಲ್ಲಿ ಉತ್ಸುಕರಾಗಿದ್ದರು . ಅವರು ಒಂದೆರಡು
ಚಿತ್ರಗಳನ್ನು ಸಹ ಹಂಚಿಕೊಂಡಿದ್ದು,ಇಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮೌನಿ ರಾಯ್ ಹಾಗು ಸುರಜ್ ನಂಬಿಯಾರ್ ಗೆ ಶುಭ ಹಾರೈಸಿದ್ದಾರೆ.

  • Ramitha

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.