ಘಟನೆಯನ್ನು ವಿಚಾರಿಸಲು ಹೋದಾಗ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾರೆ : ಎಂ.ಪಿ ಕುಮಾರಸ್ವಾಮಿ

Chikkamaglur : ಕರ್ನಾಟಕದ ರಾಜ್ಯದ ಚಿಕ್ಕಮಗಳೂರು(Chikkamaglur) ಜಿಲ್ಲೆಯಲ್ಲಿ ಆನೆ ದಾಳಿಗೆ ಸಿಲುಕಿದ 45 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಘಟನೆ ವಿರುದ್ಧ ಸ್ಥಳೀಯರು ಪ್ರತಿಭಟನೆಯ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತನ್ನ ಮೇಲೆ ಜನರು ಹಲ್ಲೆ ಮಾಡಿದ್ದಾರೆ ಎಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ(BJP) ಶಾಸಕರಾದ ಎಂ.ಪಿ ಕುಮಾರಸ್ವಾಮಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಆದ್ರೆ, ಶಾಸಕರ ಈ ಹೇಳಿಕೆಯನ್ನು ಪೊಲೀಸರು ವಿರೋಧಿಸಿದ್ದಾರೆ.

ಹರಿದುಹೋದ ಅಂಗಿ ಹಾಕಿಕೊಂಡು ಸಂಸದ ಎಂ.ಪಿ ಕುಮಾರಸ್ವಾಮಿ ಅವರು ತಮ್ಮ ಸಂಕಷ್ಟವನ್ನು ವಿವರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದೆ.

ಇದನ್ನೂ ಓದಿ : https://vijayatimes.com/siddaramaiah-koppala-plans/

ಈ ಒಂದು ಘಟನೆಯ ಬಗ್ಗೆ ನಾನು ತಿಳಿಯಲು ಹೋದಾಗ ಅಲ್ಲಿದ್ದ ಪ್ರತಿಭಟನಾಕಾರರು ನನ್ನನ್ನು ತರಾಟೆಗೆ ತೆಗೆದುಕೊಂಡು ಮನಬಂದಂತೆ ಹಿಯಾಳಿಸಿ,

ನನ್ನ ಅಂಗಿಯನ್ನು ಹರಿದು ಹಾಕಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/kadlekai-parishe-2022/

ಆದ್ರೆ, ಶಾಸಕ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಪೊಲೀಸರು ತೀವ್ರ ಖಂಡಿಸಿದ್ದು, ಈ ಹೇಳಿಕೆಯನ್ನು ನಾವು ಒಪ್ಪಲ್ಲ ಕಾರಣ,

ಘಟನೆಯ ಸ್ಥಳದಲ್ಲಿ ತೀವ್ರ ವಾಗ್ವಾದದ ನಂತರ ಪ್ರತಿಭಟನಾಕಾರರು ಶಾಸಕ ಕುಮಾರಸ್ವಾಮಿ ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ,

ನಾವು ಅವರನ್ನು ಕೂಡಲೇ ನಮ್ಮ ಜೀಪಿಗೆ ಕರೆದೊಯ್ದು ಮನೆಗೆ ಕಳುಹಿಸಿಕೊಟ್ಟೆವು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಹೇಳಿದ್ದಾರೆ.

ಇನ್ನೊಂದು ವೀಡಿಯೋದಲ್ಲಿ, ಪೊಲೀಸರ ಸಹಾಯದಿಂದ ಎಂ.ಪಿ ಕುಮಾರಸ್ವಾಮಿ ಅವರು ಜೀಪ್‌ ಹತ್ತುತ್ತಿರುವುದನ್ನು ಕಾಣಬಹುದು ಮತ್ತು ಗ್ರಾಮಸ್ಥರು ವಾಹನವನ್ನು ಸುತ್ತುವರೆದಿರುವಾಗ ಅವರ ಅಂಗಿ ಹರಿಯದೆ ಹಾಗೆ ಇರುವುದು ಖಚಿತವಾಗಿದೆ!

ಕುಮಾರಸ್ವಾಮಿ ತಡವಾಗಿ ಸ್ಥಳಕ್ಕೆ ಬಂದಿದ್ದಕ್ಕೆ ಕೋಪಗೊಂಡ ಗ್ರಾಮಸ್ಥರು ಪ್ರಶ್ನಿಸಿದಾಗ ಸರ್ಕಲ್ ಇನ್ಸ್‌ಪೆಕ್ಟರ್,

ಸಬ್ ಇನ್ಸ್‌ಪೆಕ್ಟರ್ ಜೊತೆಗೆ ನಾನು ಕೂಡ ಅಲ್ಲಿಯೇ ಇದ್ದೆ.

ವಾಗ್ವಾದದ ನಂತರ ಗ್ರಾಮಸ್ಥರು ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ಲಘು ಲಾಠಿ ಪ್ರಹಾರ ನಡೆಸಿ ಸುರಕ್ಷಿತವಾಗಿ ಬೆಂಗಾವಲು ಮಾಡಿ ಮನೆಗೆ ಕಳುಹಿಸಿದ್ದೇವೆ ಎಂದು ಪುರುಷೋತ್ತಮ್ ಸ್ಪಷ್ಟಪಡಿಸಿದ್ದಾರೆ.

ಕಾಡು ಆನೆಗಳ ಹಾವಳಿಯ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಕೋಪಗೊಂಡಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂಬುದು ನಮಗೆ ತಿಳಿದಿತ್ತು.

ಹೀಗಾಗಿ ಭಾನುವಾರ ಬೆಳಗ್ಗೆ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಿದ್ದೆವು. ಕುಮಾರಸ್ವಾಮಿ ಅವರಿಗೆ ಹಲ್ಲೆ ಮಾಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ.

ಆನೆ ದಾಳಿಯಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೂಡಿಗೆರೆಗೆ(Mudigere) ಧಾವಿಸಿದ್ದಾರೆ.

https://youtu.be/DXZ9Sc0_agQ ಮುರುಗಮಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಹಗಲು ದರೋಡೆ.

ಈ ಘಟನೆಯು ಪದೇ ಪದೇ ಆನೆಗಳ ದಾಳಿಯಿಂದ ಹಾಗೂ ಆ ವಿಚಾರಕ್ಕೆ ಸ್ಪಂದಿಸದ ಆಡಳಿತದ ನಿರಾಸಕ್ತಿಯು ಸ್ಥಳೀಯರನ್ನು ಕೆಂಡಾಮಂಡಲವಾಗಿಸಿದೆ ಎಂದು ಪೊಲೀಸ್ ವರಿಷ್ಠರು ಹೇಳಿದರು.

ಶಾಸಕ ಕುಮಾರಸ್ವಾಮಿ ಅವರು ತಮ್ಮ ಮೇಲಿನ ದಾಳಿಯು ಪೂರ್ವ ನಿಯೋಜಿತ ಎಂದು ಆರೋಪಿಸಿ ಹೇಳಿದ್ದಾರೆ ಮತ್ತು ಸ್ಥಳದಿಂದ ಹೊರಹೋಗಲು ತಪ್ಪಾಗಿ ಪೊಲೀಸರನ್ನು ದೂಷಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಭಾರಿ ಪ್ರತಿಭಟನೆಯ ಮಧ್ಯೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಇಂದು ಸೋಮವಾರ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಸದ್ಯ ಎಂ.ಪಿ ಕುಮಾರಸ್ವಾಮಿ ಅವರ ಹೇಳಿಕೆಯ ಬೆನ್ನಲ್ಲೇ ಹಲವು ಚರ್ಚೆಗಳು, ಊಹಪೋಹಗಳ ಭುಗಿಲೆದ್ದಿವೆ!

Exit mobile version