ಲಿಂಗ ಬದಲಾವಣೆಗೆ ಅಸ್ತು ಎಂದ ಗೃಹ ಇಲಾಖೆ

ಭೋಪಾಲ್ ಡಿ 2 :  ಮಹಿಲಾ ಪೊಲೀಸ್‌ ಪೇದೆಯೊಬ್ಬರು ಪುರಷನಾಗಲು ಬಯಸಿ ಲಿಂಗ ಪರಿವರ್ತಿಸಿಕೊಳ್ಳಲು ಬಯಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಮಹಿಳಾ ಪೇದೆಯೊಬ್ಬರಿಗೆ ಲಿಂಗ ಬದಲಾಯಿಸಿಕೊಳ್ಳಲು ರಾಜ್ಯ ಗೃಹ ಇಲಾಖೆ ಅನುಮತಿ ನೀಡಿದೆ.

ಮಹಿಳಾ ಪೇದೆ ತಮ್ಮ ಲಿಂಗವನ್ನು ಪುರುಷ ಎಂದು ಬದಲಾಯಿಸಿಕೊಳ್ಳಲು ರಾಜ್ಯ ಗೃಹ ಇಲಾಖೆಯಿಂದ ಅನುಮತಿ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ರಾಜ್ಯದ ಸರ್ಕಾರಿ ಇಲಾಖೆಯ ಉದ್ಯೋಗಿಯೊಬ್ಬರು ಹೆಣ್ಣಿನಿಂದ ಪುರುಷನಿಗೆ ಲಿಂಗ ಬದಲಾಯಿಸಲು ಅನುಮತಿ ಪಡೆಯುತ್ತಿರುವುದು ಮಧ್ಯಪ್ರದೇಶದಲ್ಲಿ ಇದೇ ಮೊದಲು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ರಾಜೇಶ್ ರಾಜೋರಾ ತಿಳಿಸಿದ್ದಾರೆ.

ಇತರ ಪುರುಷ ಕಾನ್’ಸ್ಟೇಬಲ್ ಹಾಗೆ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಆಕೆಗೆ ಬಾಲ್ಯದಿಂದಲೂ ಲಿಂಗ ಗುರುತಿನ ಅಸ್ವಸ್ಥತೆ ಇತ್ತು ಎಂದು ಪ್ರಖ್ಯಾತ ಮನೋವಿಜ್ಞಾನಿಗಳು ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Exit mobile version