ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಸರ್ಕಾರ ಮತ್ತು ಪ್ರಲ್ಹಾದ್ ಜೋಶಿ(Prahlad Joshi) ಗುಜರಾತ್(Gujarat) ಜನರ ಕ್ಷಮೆ ಕೇಳಬೇಕು ಎಂದು ಎಎಪಿ ಸಂಸದ(AAP MP) ಸಂಜಯ್ ಸಿಂಗ್(Sanjay Singh) ಆಗ್ರಹಿಸಿದರು. ಎಎಪಿ ಸಂಸದ ಸಂಜಯ್ ಸಿಂಗ್ ಮಾತನಾಡಿ, “ಮೋದಿ ಸರ್ಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಗುಜರಾತ್ ಜನರ ಕ್ಷಮೆಯಾಚಿಸಬೇಕು ಎಂದು ನಾನು ಬಯಸುತ್ತೇನೆ. ಬಿಜೆಪಿ(BJP) 27 ವರ್ಷಗಳಿಂದ ಅಲ್ಲಿ ಆಡಳಿತ ನಡೆಸುತ್ತಿದೆ ಮತ್ತು ರಾಜ್ಯದಲ್ಲಿ ನಕಲಿ ಮದ್ಯ ಸೇವಿಸಿ ಹಲವಾರು ಜನರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದರೇ ನಮ್ಮನ್ನು ಗುರಿಯಾಗಿಸುತ್ತಾರೆ. ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ಹೆಚ್ಚಾಗಬೇಕು! ಬೆಲೆ ಏರಿಕೆ ಮತ್ತು ಜಿಎಸ್ಟಿ ಹೆಚ್ಚಳ ವಿರೋಧಿಸಿ ಪ್ರತಿಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಲಿವೆ. ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಜಿಎಸ್ಟಿ(GST) ದರ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಬೆಳಗ್ಗೆ 10.30ಕ್ಕೆ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಜಂಟಿ ಪ್ರತಿಭಟನೆ ನಡೆಸಲಿವೆ ಎಂದು ಹೇಳಿದ್ದಾರೆ. ಇನ್ನು ಅಮಾನತುಗೊಂಡಿರುವ 24 ಸಂಸದರು ಒಗ್ಗಟ್ಟನ್ನು ಪ್ರದರ್ಶಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ.
ಸದ್ಯ ಸದನದೊಳಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಸಂಸದರು, ಬುಧವಾರ ಬೆಳಗ್ಗೆ 11 ಗಂಟೆಯಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆಯವರೆಗೆ 50 ಗಂಟೆಗಳ ಕಾಲ ರಿಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಒಗ್ಗಟ್ಟು ಮತ್ತು ರಾಜಕೀಯ ಶಕ್ತಿಯ ಪ್ರದರ್ಶನದಲ್ಲಿ, ಪ್ರತಿಪಕ್ಷಗಳು ಪ್ರತಿಭಟನೆಗೆ ಡ್ಯೂಟಿ ರೋಸ್ಟರ್ ರಚಿಸಲು ಒಗ್ಗೂಡಿ, ಪ್ರತಿ ಪಕ್ಷವು ಧರಣಿ ಕುಳಿತವರಿಗೆ ಊಟ ಸೇರಿದಂತೆ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
#WATCH | Delhi: The 50-hour long day-night protest of suspended MPs continues at the Gandhi statue at Parliament.
— ANI (@ANI) July 28, 2022
(Video Source: Opposition MP) pic.twitter.com/F2Tpu6q8WU
ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ “ಸರ್ವಾಧಿಕಾರ”(Dictatorship) ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.