‘ಕ್ಯಾಪ್ಟನ್ ಕೂಲ್’ ಆಗುವ ಮುನ್ನ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂ.ಎಸ್ ಧೋನಿ

MSD

ಭಾರತದಲ್ಲಿ ಹೆಚ್ಚು ಪ್ರಸಿದ್ಧವಾದ ಆಟವೆಂದರೆ ಅದು ಕ್ರಿಕೆಟ್(Cricket). 1983 ರಲ್ಲಿ ಭಾರತ ವರ್ಲ್ಡ್ ಕಪ್(World Cup) ಗೆದ್ದಿತ್ತು, ಆದರ ನಂತರದ ಸುದೀರ್ಘ 20 ವರ್ಷಗಳ ಕಾಲ ವರ್ಲ್ಡ್ ಕಪ್ ಗೆಲ್ಲುವುದರಲ್ಲಿ ನಿರಂತರವಾಗಿ ಸೋಲನ್ನು ಕಂಡಿತ್ತು.

ನಂತರ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ನಾಯಕತ್ವದಲ್ಲಿ 2011 ರಲ್ಲಿ ಭಾರತ ವರ್ಲ್ಡ್ ಕಪ್ ಗೆದ್ದಿದ್ದು ಈಗ ಇತಿಹಾಸ.

ತನ್ನ ಹೆಲಿಕಾಪ್ಟರ್ ಶಾಟ್ ಮೂಲಕ ಜಗತ್ಪ್ರಸಿದ್ಧರಾದ ಮಹೇಂದ್ರ ಸಿಂಗ್ ಧೋನಿ ಅವರು, ಜುಲೈ 7 ರಂದು ಜಾರ್ಖಂಡ್ ನಲ್ಲಿ ಜನಿಸಿದರು.

ಮಹೇಂದ್ರ ಸಿಂಗ್ ಧೋನಿ ಅವರ ತಂದೆಯ ಹೆಸರು ಪಾನ್ ಸಿಂಗ್ ಮತ್ತು ತಾಯಿಯ ಹೆಸರು ದೇವಕಿ ಧೋನಿ. ಎಂ. ಎಸ್ ಧೋನಿ ಅವರಿಗೆ ಒಬ್ಬ ಸಹೋದರಿ ಮತ್ತು ಒಬ್ಬ ಸಹೋದರ ಇದ್ದಾರೆ. ಸಹೋದರನ ಹೆಸರು ನರೇಂದ್ರ ಧೋನಿ ಮತ್ತು ಸಹೋದರಿಯ ಹೆಸರು ಜಯಂತಿ ಧೋನಿ.

https://vijayatimes.com/health-facts-about-banana-fruit/


ಎಂ.ಎಸ್ ಧೋನಿ ಅವರು ಹುಟ್ಟಿದ್ದು, ಮಧ್ಯಮ ವರ್ಗದ ಕುಟುಂಬದಲ್ಲಿ. ಧೋನಿ ತಮ್ಮ ಆರಂಭಿಕ ಶಿಕ್ಷಣವನ್ನು ರಾಂಚಿಯ(Ranchi) ಜವಾಹರ್ ವಿದ್ಯಾಮಂದಿರ ಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು.

ಮಹೇಂದ್ರ ಸಿಂಗ್ ಧೋನಿ ಅವರ ತಂದೆ ಮೇಕಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಧೋನಿಗೆ ಬಾಲ್ಯದಲ್ಲಿ ಫುಟ್ಬಾಲ್ ಬಗ್ಗೆ ಒಲವಿತ್ತು. ಇವರ ಸ್ಪೋರ್ಟ್ಸ್ ಆಸಕ್ತಿ ನೋಡಿ ಇವರ ಕೋಚ್ ಕ್ರಿಕೆಟ್ ಆಡಲು ತಿಳಿಸುತ್ತಾರೆ.

ನಂತರ ಕ್ರಿಕೆಟ್ ಆಟದಲ್ಲಿ ವಿಕೆಟ್ ಕೀಪರ್ ಆಗಿ ಆಡಲು ಪ್ರಾರಂಭಿಸುತ್ತಾರೆ. ಧೋನಿ 10ನೇ ಕ್ಲಾಸ್ ನಂತರ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದು. ಓದು ಪೂರ್ಣಗೊಳಿಸಿದ ನಂತರ, ಇವರಿಗೆ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಉದ್ಯೋಗ ಸಿಗುತ್ತದೆ.

2001-2003 ರವರೆಗೆ ಸೇವೆ ಸಲ್ಲಿಸಿದ ಧೋನಿ, ಈ ಕೆಲಸದಿಂದ ಕ್ರಿಕೆಟ್ ಕಡೆ ಹೆಚ್ಚು ಸಮಯ ಕೊಡಲು ಆಗುವುದಿಲ್ಲ ಎಂದು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಕ್ರಿಕೆಟ್ ಆಡಲು ಆರಂಭಿಸುತ್ತಾರೆ.

ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಆರಂಭ 1998 ರಲ್ಲಿ ಬಿಹಾರ್ ಅಂಡರ್ -19 ಟೀಮ್ ನಲ್ಲಿ ಶುರುವಾಯಿತು. 1999-2000 ರಲ್ಲಿ ಧೋನಿ ಬಿಹಾರ್ ರಣಜಿ ಟೀಮ್ ನಿಂದ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟರು.

2004 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಮ್ಯಾಚ್ ಚಿಟ್ಟಿಗಾಮ್ ನಲ್ಲಿ ನಡೆಯಿತು, ಅಲ್ಲಿಂದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ನಲ್ಲಿ ಸುಧೀರ್ಘ ಪಯಣ ಸಾಗಿಸಿದ್ದಾರೆ.

ತನ್ನ ಕ್ರಿಕೆಟ್ ಕೆರಿಯರ್ ನಲ್ಲಿ ಎಂ. ಎಸ್. ಧೋನಿ ಅವರು ಒಟ್ಟು 90 ಟೆಸ್ಟ್ ಮ್ಯಾಚ್ ಗಳಲ್ಲಿ 4876 ರನ್ ಗಳಿಸಿದ್ದಾರೆ.

ಟೆಸ್ಟ್ ಮ್ಯಾಚ್ ನಲ್ಲಿ ಅವರು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ನಲ್ಲಿ 224 ರನ್ ಗಳಿಸಿದ್ದರು. ಟೆಸ್ಟ್ ಮ್ಯಾಚ್ ನಲ್ಲಿ ಅವರು 256 ಕ್ಯಾಚ್ ಗಳು ಮತ್ತು 38 ಸ್ಟಂಪ್ ಔಟ್ ಮಾಡಿದ್ದಾರೆ.


ಒನ್ ಡೇ ಇಂಟರ್ನ್ಯಾಷನಲ್ ನಲ್ಲಿ 347 ಮ್ಯಾಚ್ ಗಳಲ್ಲಿ 10,773 ರನ್ಸ್ ಗಳಿಸಿದ್ದಾರೆ. ಮತ್ತು ಧೋನಿಯವರ ವೃತ್ತಿ ಬದುಕಿನ ಸರ್ವೋತ್ತಮ ಆಟ 2005 ರಲ್ಲಿ ಶ್ರೀಲಂಕಾದ ವಿರುಧ್ಧದ ಮ್ಯಾಚ್. ಈ ಮ್ಯಾಚ್ ಜಯಪುರ್ ನ ಸವಾಯಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಒನ್ ಡೇ ಮ್ಯಾಚ್ ನಲ್ಲಿ ಧೋನಿ 183 ರನ್ ಗಳಿಸಿದ್ದರು. https://vijayatimes.com/actor-anant-nag-received-doctorate/

ಒನ್ ಡೇ ಮ್ಯಾಚ್ ನಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಲೇ ಒಟ್ಟು 1318 ಕ್ಯಾಚ್ ಔಟ್ ಮತ್ತು 120 ಸ್ಟಂಪ್ ಔಟ್ ಮಾಡಿದ್ದಾರೆ. ಎಂ.ಎಸ್ ಧೋನಿಯವರ ಹೆಸರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಶರವೇಗದಲ್ಲಿ ಸ್ಟಂಪ್ ಔಟ್ ಮಾಡಿರುವ ರೆಕಾರ್ಡ್ ಸಹ ಇದೆ.

ಇವರಿಗೂ ಮುಂಚೆ ಮಿಶೆಲ್ ಮಾರ್ಶ್ ಎಂಬ ಕ್ರಿಕೆಟಿಗನ ಸ್ಟಂಪಿಂಗ್ ಸಮಯ 0.76 ಸೆಕೆಂಡ್ ಇತ್ತು. ಒಟ್ಟಾರೆ ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಗಾಗಿ ಎಂ ಎಸ್. ಧೋನಿ ಜಗತ್ಪ್ರಸಿದ್ಧರಾಗಿದ್ದಾರೆ.
Exit mobile version