ಪ್ರಥಮ ಬಾರಿಗೆ `ಧೋನಿ ನಾಯಕತ್ವ’ವಿಲ್ಲದ ಐಪಿಎಲ್!

captain cool

ಭಾರತ(India) ಕಂಡ ಶ್ರೇಷ್ಟ ಆಟಗಾರ, ಶ್ರೇಷ್ಟ ವ್ಯಕ್ತಿ ಹಾಗೂ ವ್ಯಕ್ತಿತ್ವ ಭಾರತದ ಮಾಜಿ ನಾಯಕ(Former Captain) ಮಹೇಂದ್ರ ಸಿಂಗ್ ಧೋನಿ(Mahendra Singh Dhoni).

ಹೌದು, ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ. ಸದ್ಯ ಟಾಟಾ ಐಪಿಎಲ್(Tata IPL) 2022ರ 15ನೇ ಆವೃತ್ತಿಯ ಚೆನೈ ಸೂಪರ್ ಕಿಂಗ್ಸ್(Chennai Super Kings) ತಂಡದ ನಾಯಕನಾಗಿ(Captain) ಕಣಕ್ಕಿಳಿಯುತ್ತಿಲ್ಲ.

ಹೌದು, ಇದೇ ಶನಿವಾರ ಮಾರ್ಚ್(March) 26 ರಂದು ಸಂಜೆ 7 ಗಂಟೆಗೆ ಆರಂಭವಾಗುತ್ತಿರುವ ಐಪಿಎಲ್(IPL) ಪಂದ್ಯಗಳಲ್ಲಿ ಧೋನಿ ಅವರ ನಾಯಕತ್ವ ನಿಮಗೆ ಕಾಣಿಸುವುದಿಲ್ಲ. ತಮ್ಮ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ಅವರು ರಾಜೀನಾಮೆ(Retirement) ಘೋಷಿಸಿ, ಸಿಎಸ್‍ಕೆ ನಾಯಕತ್ವವನ್ನು ಜಡೇಜಾ ಅವರಿಗೆ ವರ್ಗಾಯಿಸುವ ಮುಖೇನ ನಾಯಕನ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸುತ್ತಾರೆ…

ಅಷ್ಟು ಪ್ರೀತಿ, ಗೌರವ ಮಹೇಂದ್ರ ಸಿಂಗ್ ಧೋನಿ ಅವರೆಂದರೆ. 2007 ರಲ್ಲಿ ಭಾರತ ತಂಡದ ನಾಯಕನಾಗಿ, ವಿಜಯದ ಹಾದಿಯನ್ನು ಗುರುತಿಸಿದ ಧೋನಿ ಅವರು, ಮತ್ತೆ ಹಿಂದಿರುಗಿ ನೋಡಲೇ ಇಲ್ಲ! ವಿಜಯವನ್ನು ಹಣ್ಣು ತಿಂದಷ್ಟು ಸುಲಭ ಎಂಬಂತೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿ ತೋರಿಸಿಕೊಟ್ಟಿದ್ದು ಮಹೇಂದ್ರ ಸಿಂಗ್ ಧೋನಿ. ಈ ಪಾಠಗಳ ಹಿಂದೆ ಒಂದೊಳ್ಳೆ ಸಂದೇಶವನ್ನು ಧೋನಿ ಅವರು ಅಭಿಮಾನಿಗಳಿಗೆ ಮತ್ತು ಯುವ ಕ್ರಿಕೆಟ್ ಪ್ರತಿಭೆಗಳಿಗೆ ತಿಳಿಸಿಕೊಟ್ಟಿದ್ದಾರೆ. ಸೋತರು, ಗೆದ್ದರು ಒಂದೇ ಮುಖ ಹೊಂದಿರುವ ‘ಕ್ಯಾಪ್ಟನ್ ಕೂಲ್’.

ಇಡೀ ಕ್ರೀಡಾಂಗಣದಲ್ಲಿ ಅಭಿಮಾನಿಗಳು, ಅಂಪೈರ್, ಎದುರಾಳಿ ತಂಡದವರು ಸೇರಿದಂತೆ ಎಲ್ಲರಿಗೂ ಗಾಬರಿ, ಒತ್ತಡ ಹೆಚ್ಚಿದರೂ, ಪಂದ್ಯದ ಕೊನೆ ಬಾಲ್ ಆದರೂ ಧೋನಿ ಅವರ ಮುಖದಲ್ಲಿ ಕಿಂಚಿತ್ತು ಒತ್ತಡ, ಭಯ ಕಾಣಿಸುವುದಿಲ್ಲ. ಅದಕ್ಕೆ ಅಲ್ವಾ ಅವರನ್ನು ಅಭಿಮಾನಿಗಳು `ಕ್ಯಾಪ್ಟನ್ ಕೂಲ್' ಎಂದು ಕರೆಯುವುದು. ತಾಳ್ಮೆಯಲ್ಲೇ, ಮಂದಹಾಸದಲ್ಲೇ ಪಂದ್ಯವನ್ನು ಗೆಲ್ಲುವುದಲ್ಲದೇ, ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಶಕ್ತಿ ಹೊಂದಿರುವ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ. 
ಗೆಲುವು ಅನ್ನುವುದು ಇವರಿಗೆ ಕಷ್ಟದ ಮಾತಲ್ಲ ಬಿಡಿ, ತಮ್ಮ ಆಟದ ವೈಖರಿ, ಶ್ರದ್ಧೆಯಿಟ್ಟು ಮಾಡುವ ಕೆಲಸದಿಂದ ಎಲ್ಲವನ್ನೂ ಸರಳ, ಸುಲಭ ಮಾಡುತ್ತಾರೆ. 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ಇಡೀ ಭಾರತವನ್ನು ಹೆಮ್ಮೆ ಪಡಿಸಿದ ಶ್ರೇಷ್ಟ ನಾಯಕ ಎಂಬ ಸ್ಥಾನವನ್ನು ಅಲಂಕರಿಸಿದರು. ಪ್ರತಿಯೊಂದು ಫಾರ್ಮೆಟ್ ನಲ್ಲೂ ಯಶಸ್ವಿಯಾಗಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಎಲ್ಲದಕ್ಕೂ ನಿವೃತ್ತಿ ಘೋಷಿಸುವ ಮೂಲಕ ಹಿಂದೆ ಸರಿದರು ಜೊತೆಗೆ ನನಗೂ ವಯಸ್ಸಾಯಿತು ಎಂಬ ಸೂಚನೆಯನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ನೀಡಿದರು. 

ಧೋನಿ ಅವರ ಈ ನಿರ್ಧಾರದಿಂದ ಅಭಿಮಾನಿಗಳು ತೀವ್ರ ಬೇಸರಕ್ಕೆ ಒಳಗಾದರು. ಇದಾದ ಬಳಿಕ ಧೋನಿ ಅವರು ನಾಯಕನಾಗಿ ಮುಂದುವರೆಸಿದ್ದು ಐಪಿಎಲ್ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಸಿಎಸ್‍ಕೆ ತಂಡದ ನಾಯಕನಾಗಿ ಮುನ್ನುಗ್ಗಿದ ಮಹೇಂದ್ರ ಸಿಂಗ್ ಧೋನಿ ಅವರು ಕಂಡಿದ್ದೆಲ್ಲಾ ಯಶಸ್ಸು. ಹೌದು, ಇಲ್ಲಿಯವರೆಗೂ 12 ಸೀಸನ್ ನಾಯಕನಾಗಿ ತಂಡವನ್ನು ಮುನ್ನಡೆಸಿದ ಧೋನಿ ಅವರು, 9 ಫಿನಾಲೆ ತಲುಪಿ, 4 ಟ್ರೋಫಿ ಗೆದ್ದಿರುವ ಏಕೈಕ ನಾಯಕ. ಒಬ್ಬ ನಾಯಕ ಇಷ್ಟೆಲ್ಲಾ ಯಶಸ್ಸನ್ನು ತಂಡಕ್ಕೆ ತಂದುಕೊಡುವಲ್ಲಿ ಅವರ ಪಾತ್ರ ಎಷ್ಟು ಮುಖ್ಯವಾಗಿರುತ್ತದೆ ಎಂಬುದು ಇಲ್ಲಿ ಗಮನಾರ್ಹ ಅಂಶ.

ಮಹೇಂದ್ರ ಸಿಂಗ್ ಧೋನಿ ಎಂದರೆ ಗೆಲುವು, ಗೆಲುವು ಎಂದರೆ ಮಹೇಂದ್ರ ಸಿಂಗ್ ಧೋನಿ ಎಂಬ ಮಾತು ಇವತ್ತಿಗೂ ಅಭಿಮಾನಿಗಳ ಮನದಲ್ಲಿ ಅಚ್ಚಾಗಿ ಉಳಿದಿದೆ ಎಂಬುದು ಅಕ್ಷರಶಃ ಸತ್ಯ. ಟಾಟಾ ಐಪಿಎಲ್ 2022ರ 15ನೇ ಆವೃತ್ತಿಗೆ ಸರಿಯಾಗಿ ಧೋನಿ ಅವರು ತಮ್ಮ ನಾಯಕತ್ವದಿಂದ ಕೆಳೆಗಿಳಿದಿರುವುದು ಅಭಿಮಾನಿಗಳಿಗೆ ದುಪ್ಪಟ್ಟು ಬೇಸರ ತಂದಿದೆ. ತಮ್ಮ ನೆಚ್ಚಿನ ಆಟಗಾರನನ್ನು ಇನ್ಮುಂದೆ ನಾಯಕನ ಸ್ಥಾನದಲ್ಲಿ ನೋಡಲಾಗುವುದಿಲ್ಲ ಎಂಬುದು ಅಭಿಮಾನಿಗಳ ನೋವಿನ ಕೂಗಾಗಿದೆ.

ಸದ್ಯ ಜಡೇಜಾ ಸಿಎಸ್‍ಕೆ ನಾಯಕನಾಗಿ ತಂಡ ಮುಂದುವರೆಸಿದರೂ ಕೂಡ ಧೋನಿ ಅವರ ಕೀಪಿಂಗ್, ಆಕರ್ಷಕ ಬ್ಯಾಟಿಂಗ್ ಮತ್ತು ತಂಡವನ್ನು ಕಾಪಾಡಿಕೊಳ್ಳವುದನ್ನು ಅಭಿಮಾನಿಗಳು ಈ ಬಾರಿಯೂ ಕಣ್ತುಂಬಿಕೊಳ್ಳಬಹುದಾಗಿದೆ. ಒಟ್ಟಾರೆ, ಧೋನಿ ಅವರು ಪ್ರತ್ಯಕ್ಷವಾಗಿ ನಾಯಕನಾಗಿ ಆಡದೆ ಇದ್ದರೂ…ಪರೋಕ್ಷವಾಗಿ ನಾಯಕನಾಗಿಯೇ ಕಾಣಿಸಕೊಳ್ಳುತ್ತಾರೇ ಎಂಬುದರಲ್ಲಿ ಅನುಮಾನವೇ ಇಲ್ಲ!

ಪ್ರೀತಿಸುವ ಅಭಿಮಾನಿಗಳಿಗೆ ಧೋನಿ ಅವರು ಎಂದೆಂದಿಗೂ ನೆಚ್ಚಿನ ನಾಯಕನೇ, ಅಚ್ಚುಮೆಚ್ಚಿನ ಕ್ಯಾಪ್ಟನ್ ಕೂಲ್ ಆಗಿಯೇ ಉಳಿಯಲಿದ್ದಾರೆ. ಮಾರ್ಚ್ 26 ರಂದು ಶನಿವಾರ ಪ್ರಾರಂಭವಾಗಲಿರುವ ಐಪಿಎಲ್ ಪಂದ್ಯದಲ್ಲಿ ಧೋನಿ ಅವರು ಅಖಾಡಕ್ಕಿಳಿಯಲ್ಲಿದ್ದಾರೆ, ಆದ್ರೆ ನಾಯಕನಾಗಲ್ಲ ತಂಡದ ಆಟಗಾರನಾಗಿ…..
Exit mobile version