ತನ್ನ ಪತ್ನಿ ಮೇಲೆ ಕಾರು ಹರಿಸಿದ ನಿರ್ಮಾಪಕ ಕಮಲ್ ಕಿಶೋರ್ ಬಂಧನ!

Mumbai : ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ತಮ್ಮದೇ ಕಾರಿನಲ್ಲಿ ತಮ್ಮ ಪತ್ನಿಯ ಮೇಲೆ ಕಾರು ಹತ್ತಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ದಿನದ ಬಳಿಕ ಮುಂಬೈ ಪೊಲೀಸರು (Mumbai Police Arrested Kamal) ನಿರ್ಮಾಪಕ ಕಮಲ್ ಕಿಶೋರ್ ನನ್ನು ಬಂಧಿಸಿದ್ದಾರೆ.

ಅಂಧೇರಿಯಲ್ಲಿರುವ ತಮ್ಮ ವಸತಿ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಪತ್ನಿಯ ಕಾಲುಗಳ ಮೇಲೆ ಕಾರು ಹತ್ತಿಸಿದ ಆರೋಪದ ಮೇಲೆ ಅವರ ಪತ್ನಿ ನೀಡಿದ್ದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ.

https://youtu.be/k9Nbowf5kkQ

ದೂರಿನ ಅನ್ವಯ, ಘಟನೆ ಅಕ್ಟೋಬರ್ 19 ರಂದು ಸಂಭವಿಸಿದೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ನೀಡಿದ ದೂರಿನ ನಂತರ,

ಮಿಶ್ರಾ ಅವರ ಪತ್ನಿ ಗಾಯಗೊಂಡಿರುವುದಕ್ಕೆ ಸಿಸಿಟಿವಿ ದೃಶ್ಯಗಳು(CCTV Footage) ಬಲವಾದ ಸಾಕ್ಷಿಯಾದ ಪರಿಣಾಮ ನಿರ್ಮಾಪಕ ಕಿಶೋರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ ಪತ್ನಿ ತನ್ನ ಪತಿಯನ್ನು ಹುಡುಕುತ್ತಿರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/pak-lost-to-zimbabwe/

ವಿವಾಹಿತ ಮಹಿಳೆಯೊಂದಿಗೆ ಇರುವ ಅಕ್ರಮ ಸಂಬಂಧದ ಬಗ್ಗೆ ತಿಳಿದು, ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಕಾರಿನೊಳಗೆ ಕಿಶೋರ್ ಮತ್ತು ವಿವಾಹಿತ ಮಹಿಳೆಯನ್ನು ಕಂಡು ಗಾಬರಿಯಾದ ಕಿಶೋರ್ ಪತ್ನಿ, ಏಕಾಏಕಿ ಆತನ ಮೇಲೆ ದಾಳಿ ಮಾಡಿದ್ದಾರೆ.

ಹೆಂಡತಿಯ ಜಟಾಪಟಿಯನ್ನು ಸಹಿಸಲಾಗದ ಕಿಶೋರ್(Mumbai Police Arrested Kamal), ಇದನ್ನು ತಪ್ಪಿಸುವ ಉದ್ದೇಶದಿಂದ ತನ್ನ ಕಾರನ್ನು ಪತ್ನಿಯ ಮೇಲೆ ಹತ್ತಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಕಿಶೋರ್ ಪತ್ನಿ, ತಮ್ಮ ತಲೆಗೆ ಗಾಯಗಳಾಗಿವೆ ಎಂದು ಪೊಲೀಸರಿಗೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/review-of-appu-gandadagudi/

ನಾವು ಆರೋಪಿಗಾಗಿ ಹುಡುಕುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ಗುರುವಾರ ಅವರಿಗೆ ಹೇಳಿ ಮನೆಗೆ ಕಳಿಸಿದ್ದರು. ಇಂದು ಅವರ ಪತಿ ಕಿಶೋರ್ ನನ್ನು ಪೊಲೀಸರು ಬಂಧಿಸಿ,

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅಪವೇಗದ ಚಾಲನೆ) ಮತ್ತು 338 (ಘೋರ ಗಾಯ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Exit mobile version