Perth : ಆಸ್ಟ್ರೇಲಿಯಾದಲ್ಲಿ(Australia) ನಡೆಯುತ್ತಿರುವ T-20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ(Pakistan) ಇದೀಗ ಮತ್ತೊಂದು ಆಘಾತವಾಗಿದೆ. ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ದ ಸೋತ ನಂತರ ಇದೀಗ ನಿನ್ನೆ ನಡೆದ ಪಂದ್ಯದಲ್ಲಿ ಜಿಂಬಾಬ್ವೆ(Pak Lost to Zimbabwe) ವಿರುದ್ದವು ಪಾಕಿಸ್ತಾನ ತಂಡ ಸೋಲುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದೆ.

ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಆಗ್ನೇಯ ಆಫ್ರಿಕಾದ ಜಿಂಬಾಬ್ವೆ ದೇಶವು 1 ರನ್‌ಗಳ ಆಘಾತಕಾರಿ ಗೆಲುವು(Pak Lost to Zimbabwe) ದಾಖಲಿಸುವ ಮುನ್ನವೇ ಪಾಕಿಸ್ತಾನ-ಜಿಂಬಾಬ್ವೆ ಪಂದ್ಯವು ಟ್ವಿಟರ್‌ನಲ್ಲಿ(Twitter) ಹೆಚ್ಚು ಚರ್ಚಿತ ವಿಷಯವಾಯಿತು.
ಏಕೆಂದರೆ ಜಿಂಬಾಬ್ವೆ ಅಧ್ಯಕ್ಷರು ಈ ಪಂದ್ಯದ ಕುರಿತು ಮಾಡಿರುವ ಒಂದು ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಪಾಕಿಸ್ತಾನ ತಂಡವನ್ನು ವ್ಯಂಗ್ಯವಾಡಿದ್ದು, “ಮುಂದಿನ ಬಾರಿ ನಿಜವಾದ ‘ಮಿಸ್ಟರ್ ಬೀನ್’ ಅನ್ನು ಕಳುಹಿಸಿಕೊಡಿ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : https://vijayatimes.com/chethan-slams-political-parties/
ಈ ಪಾಕ್ ಬೀನ್ ಎಂದರೇನು? ಮತ್ತು ಅದು ಈಗ ಏಕೆ ಟ್ರೆಂಡಿಂಗ್ ಆಗಿದೆ? : ಪಂದ್ಯದ ಮೊದಲು, ‘ನ್ಗುಗಿ ಚಸುರ’ ಎಂಬ ಹೆಸರಿನ ಟ್ವಿಟರ್ ಬಳಕೆದಾರ,
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪೋಸ್ಟ್‌ಗೆ ಉತ್ತರಿಸಿ “ಜಿಂಬಾಬ್ವೆಯನ್ನರಾದ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ…
https://youtu.be/uIK8oV-Tg5k ಯಾವುದೇ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ
ನೀವು ಒಮ್ಮೆ ನಮಗೆ ಮಿಸ್ಟರ್ ಬೀನ್ ಬದಲಿಗೆ ಆ ಫ್ರಾಡ್ ಪಾಕ್ ಬೀನ್ ಅನ್ನು ನೀಡಿದ್ದೀರಿ.
ನಾವು ನಾಳೆ ವಿಷಯವನ್ನು ಇತ್ಯರ್ಥಪಡಿಸುತ್ತೇವೆ, ಮಳೆಯು ನಿಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ”ಎಂದು ಟ್ವೀಟ್ ಮಾಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ‘ಪಾಕಿಸ್ತಾನಿ ಮಿಸ್ಟರ್ ಬೀನ್’ ಉಲ್ಲೇಖವು ಪಾಕಿಸ್ತಾನಿ ಹಾಸ್ಯನಟ ಆಸಿಫ್ ಮೊಹಮ್ಮದ್ ಅವರು 2016ರಲ್ಲಿ ಹರಾರೆ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ನಲ್ಲಿ ಪ್ರದರ್ಶನವನ್ನು ನೀಡಿದ್ದರು.

ಆದರೆ ಜಿಂಬಾಬ್ವೆಯವರಿಗೆ $10 ವೆಚ್ಚದ ಪ್ರದರ್ಶನವು ಸಂಪೂರ್ಣ ವಿಫಲವಾಗಿತ್ತು. ಪ್ರದರ್ಶನದಲ್ಲಿ ಜನರು ತಮ್ಮ ಹಣವನ್ನು ‘ಕಳೆದುಕೊಂಡರು’ ಮತ್ತು ಅದನ್ನು ವಂಚನೆ ಎಂದು ಕರೆದರು.
ಈಗ ಜಿಂಬಾಬ್ವೆ ಪಾಕಿಸ್ತಾನದ ವಿರುದ್ಧ 1 ರನ್‌ಗಳ ರೋಚಕ ಜಯವನ್ನು ದಾಖಲಿಸಿದ ತಕ್ಷಣ, ಟ್ವಿಟರ್ ಈ ವಿಷಯದ ಕುರಿತು ಉಲ್ಲಾಸದ ಮೇಮ್‌ಗಳೊಂದಿಗೆ ಕಾಣಿಸಿಕೊಂಡಿತು.
- ಮಹೇಶ್.ಪಿ.ಎಚ್