ಮುಂಬೈ ದಾಳಿಯನ್ನು ನಾವು ಮರೆತಿಲ್ಲ, ಮರೆಯುವುದಿಲ್ಲ : ಶ್ರದ್ಧಾಂಜಲಿ ಸಲ್ಲಿಸಿದ ರಾಜನಾಥ್, ಜೈಶಂಕರ್

New Delhi : ಭಾರತವು ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ (Mumbai Terror Attack) 14ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಂದು ದೇಶಾದ್ಯಂತದ ಹಲವಾರು ನಾಯಕರು ದಾಳಿಯ ವೇಳೆ ಪ್ರಾಣ ಕಳೆದುಕೊಂಡ ನೂರಾರು ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು “ನಾವು ಅವರ ಪ್ರೀತಿಪಾತ್ರರು ಮತ್ತು ಕುಟುಂಬಗಳ ನಿರಂತರ ನೋವನ್ನು ಹಂಚಿಕೊಳ್ಳುತ್ತೇವೆ.

ಕರ್ತವ್ಯದ ಸಾಲಿನಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಅತ್ಯುನ್ನತ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ”ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು “ಮುಂಬೈನ ತಾಜ್ ಹೋಟೆಲ್ನ ಲಾಬಿಯಲ್ಲಿ ನಡೆದ ಯುಎನ್ ಸೆಕ್ಯುರಿಟಿ ಕೌನ್ಸಿಲ್ನಿಂದ ಕಳೆದ ತಿಂಗಳು ನಡೆದ ಸ್ಮರಣಾರ್ಥ ಕಾರ್ಯಕ್ರಮದಿಂದ ತಮ್ಮ ಹೇಳಿಕೆಗಳನ್ನು ಎತ್ತಿ ತೋರಿಸುತ್ತಾ ಸುಮಾರು ಎರಡು ನಿಮಿಷಗಳ ಅವಧಿಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದರು.

https://fb.watch/h1sE-nALI2/ ಬೆಂಗಳೂರು : ಗಣಿಗಾರಿಕೆಯಿಂದ ನಾಶವಾಗುತ್ತಿದೆ ಶಾಲಾ-ಕಾಲೇಜು ಪ್ರದೇಶ!

“2008ರಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದ ಸ್ಥಳಗಳಲ್ಲಿ ಈ ಹೋಟೆಲ್ ಕೂಡ ಒಂದು. ಭಯೋತ್ಪಾದನೆ ಮಾನವೀಯತೆಗೆ ಬೆದರಿಕೆ ಹಾಕುತ್ತದೆ. ಇಂದು 26/11 ರಂದು, ಆ ಘಟನೆಯಲ್ಲಿ ಬಲಿಯಾದವರನ್ನು ಸ್ಮರಿಸುವುದರಲ್ಲಿ ಜಗತ್ತು ಭಾರತವನ್ನು ಸೇರುತ್ತದೆ.

ಈ ದಾಳಿಯ ಯೋಜನೆ ಮತ್ತು ಮೇಲ್ವಿಚಾರಣೆ ನಡೆಸಿದವರನ್ನು ನ್ಯಾಯಾಂಗಕ್ಕೆ ತರಬೇಕು.

ಜಗತ್ತಿನಾದ್ಯಂತ ಭಯೋತ್ಪಾದನೆಗೆ ಬಲಿಯಾದ ಪ್ರತಿಯೊಬ್ಬರಿಗೂ ನಾವು ಋಣಿಯಾಗಿದ್ದೇವೆ” ಎಂದು ಜೈಶಂಕರ್ ಅವರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಕೂಡ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ “ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರೆಲ್ಲರ ನೆನಪಿಗಾಗಿ ವಂದಿಸುತ್ತೇನೆ.

ಈ ದಾಳಿಯ ವಿರುದ್ಧ ಹೋರಾಡುವಾಗ ಪ್ರಾಣ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ನಮನಗಳು.

https://youtu.be/nII399KkWTY ವೀರ ಯೋಧರ ಹೆಸರಿನ ತಂಗುದಾಣ ಈಗ ಕುಡುಕರ ತಾಣ!

ಈ ದೇಶವು 26/11 ರ ಘಟನೆಯನ್ನು ಮರೆತಿಲ್ಲ ಮತ್ತು ಎಂದಿಗೂ ಮರೆಯುವುದಿಲ್ಲ “ಎಂದು ಅವರ ಹೇಳಿದ್ದಾರೆ.

2008ರ ಮುಂಬೈ ದಾಳಿಯು ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಇದು ನವೆಂಬರ್ 29 ರವರೆಗೆ ನಾಲ್ಕು ದಿನಗಳ ಕಾಲ ನಡೆಯಿತು.

ಈ ದಾಳಿಗಳಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದರಲ್ಲಿ ನಾಗರಿಕರು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ವಿದೇಶಿ ನಾಗರಿಕರು ಸಹ ಸೇರಿದ್ದಾರೆ. ದಾಳಿಯಲ್ಲಿ 300ಕ್ಕೂ ಹೆಚ್ಚು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾದ (ಎಲ್ಇಟಿ) 10 ಸದಸ್ಯರು ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ,

ಇದನ್ನೂ ಓದಿ : https://vijayatimes.com/nia-enters-mangaluru-blast/

ಭಾರತದ ಆರ್ಥಿಕ ರಾಜಧಾನಿಯಾದ್ಯಂತ ಅನೇಕ ಸ್ಥಳಗಳಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದ್ದರು.

ತಾಜ್ ಹೋಟೆಲ್ ಮಾತ್ರವಲ್ಲದೇ, ಛತ್ರಪತಿ ಶಿವಾಜಿ ಟರ್ಮಿನಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್ ಮತ್ತು ಒಬೆರಾಯ್ ಟ್ರೈಡೆಂಟ್ ದಾಳಿಗಳು ನಡೆದ ಇತರ ಸ್ಥಳಗಳಾಗಿವೆ.

Exit mobile version