ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮುರುಘಾಶ್ರೀ‌: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ

Chitradurga: ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಪಾಲಾಗಿದ್ದ ಚಿತ್ರದುರ್ಗದ (Murugashree Released – CTA Jail) ಮುರುಘಾಶ್ರೀಗೆ ಜಾಮೀನು ಸಿಕ್ಕಿದ್ದು, ಇದೀಗ ಚಿತ್ರದುರ್ಗ

ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ‌ (Murugashree Released – CTA Jail) ಬಿಡುಗಡೆಯಾಗಿದ್ದಾರೆ.

ಮಠದ ಹಾಸ್ಟೆಲ್‌ನಲ್ಲಿದ್ದ (Hostel) ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿ, ಪೋಕ್ಸೋ ಕೇಸ್ (Pocso Case) ದಾಖಲಾಗಿ ಕಳೆದ ವರ್ಷ ಮುರುಘಾ ಶರಣರು

ಜೈಲುಪಾಲಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ (Highcourt), ನವೆಂಬರ್ 8 ರಂದು ಜಾಮೀನು ನೀಡಿತ್ತು ಹೀಗಾಗಿ ಇಂದು (ನ. 16) ಮುರುಘಾಶ್ರೀ ಬರೋಬ್ಬರಿ 14 ತಿಂಗಳುಗಳ

ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

14 ತಿಂಗಳ ಬಳಿಕ ಮುರುಘಾಶ್ರೀ, ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನಲೆ ಜೈಲಿನಿಂದ (Jail) ಹೊರಬಂದಿದ್ದು, ಆದರೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡುವಂತಿಲ್ಲ ಸೇರಿದಂತೆ ಹಲವು

ನಿಬಂಧನೆಗಳನ್ನು ಕೋರ್ಟ್ ಹಾಕಿದೆ. ಸೆಪ್ಟೆಂಬರ್ (September 1) ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನನ್ನು ಕೂಡಾ ಕೋರ್ಟ್ ತಿರಸ್ಕರಿಸಿತ್ತು.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾಶ್ರೀಗಳ ವಿರುದ್ಧ ಎರಡು ಪೋಕ್ಸೋ ಪ್ರಕರಣಗಗಳು ದಾಖಲಾಗಿದ್ದವು. ಈ ಪೈಕಿ ಒಂದೇ ಕೇಸ್​ನಲ್ಲಿ ಮಾತ್ರ ಮುರುಘಾಶ್ರೀಗಳನ್ನು

ಬಂಧಿಸಲಾಗಿತ್ತು. ಇದೇ ಒಂದನೇ ಪ್ರಕರಣರದಲ್ಲಿ ನ.8 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹಾಗಾಗಿ ಇಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಇಂದು ಮುರುಘಾಶ್ರೀಗಳನ್ನು‌

ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ: “ನಾನು ನೀಡಿದ ಲಿಸ್ಟ್ನಲ್ಲಿದ್ದವರ ಕೆಲಸ ಮಾತ್ರ ಆಗ್ಬೇಕು” ಸಿಎಂ ಪುತ್ರನ ದರ್ಬಾರ್ ; ಕಳಚಿತು ಸಮಾಜವಾದದ ಮುಖವಾಡ

Exit mobile version