ಭಾರತದ ಮುಸ್ಲಿಮರು ತಮ್ಮ ಸಂವಿಧಾನದ ಬಗ್ಗೆ ಹೆಮ್ಮೆಪಡುತ್ತಾರೆ – ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ

New Delhi: ಭಾರತದ ಮುಸ್ಲಿಂಮರು ಡಾ. ಬಿ.ಆರ್.ಅಂಬೇಡ್ಕರ್ (Muslims proud about indian constitution) ಅವರು ರಚಿಸಿರುವ ಸಂವಿಧಾನದ ಕುರಿತು ಹೆಮ್ಮೆ ಪಡುತ್ತಾರೆ.

ಅವರು ಇತರೆ ಧರ್ಮಗಳ ಜನರೊಂದಿಗೆ ಸಹೋದರ ಭಾವವನ್ನು ಹೊಂದಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೂ ಇಸ್ಲಾಂ ಧರ್ಮಕ್ಕೂ ಯಾವುದೇ

ಸಂಬಂಧವಿಲ್ಲ ಎಂದು ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ (Mohammad bin Abdulkareem Al Issa) ಹೇಳಿದ್ದಾರೆ.

ಭಾರತ ಪ್ರವಾಸದಲ್ಲಿರುವ ಮುಸ್ಲಿಂ ವರ್ಲ್ಡ್ ಲೀಗ್ (Muslim World League) ಮುಖ್ಯಸ್ಥ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ, ಅನೇಕ ಭಾರತೀಯ ರಾಜಕಾರಣಿಗಳು,

ಉದ್ಯಮಿಗಳು, ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಭಾರತದಲ್ಲಿ ಮುಸ್ಲಿಂಮರು ಮತ್ತು ಇತರೆ ಸಮುದಾಯಗಳ ನಡುವೆ ಕೆಲ ಭಿನ್ನಾಭಿಪ್ರಾಯಗಳು ಇರಬಹುದು.

ಆ ಭಿನ್ನಾಭಿಪ್ರಾಯಗಳನ್ನು ಸಂವಿಧಾನದ ಪರಿಧಿಯೊಳಗೆ ಬಗೆಹರಿಸಿಕೊಳ್ಳಬಹುದು. ಈ ರೀತಿಯ ಎಲ್ಲ ಸಮಸ್ಯೆಗಳನ್ನು ಪ್ರೀತಿ ಹಾಗೂ ಸಹೋದರತ್ವದ ಚೌಕಟ್ಟಿನಲ್ಲಿಯೇ ಚರ್ಚಿಸಬೇಕು ಎಂದು ಕರೆ ನೀಡಿದ್ದಾರೆ .

ಇದನ್ನು ಓದಿ: ಗ್ಯಾರಂಟಿಗಳ ಭರಾಟೆಯಲ್ಲಿ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ : ಅನುದಾನ ಮೀಸಲಿಡದ ಸರ್ಕಾರ

ಇನ್ನು ನಾನು ಭೇಟಿಯ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಭೆಗಳನ್ನು ನಡೆಸಿದ್ದೇನೆ. ಭಾರತದ ಪ್ರಮುಖ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅಲ್ಲಿನ ರಾಜಕೀಯ ನಾಯಕರನ್ನು ಹಾಗೂ ಧಾರ್ಮಿಕ

ನಾಯಕರನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಗಿದೆ. ಸಹಜವಾಗಿ ಭಾರತದ ಭೇಟಿ ನಮ್ಮ ಸ್ನೇಹಿತರ ಭೇಟಿಯಾಗಿದೆ. ಜಗತ್ತಿನಲ್ಲಿ ಶಾಂತಿ-ಸಹಬಾಳ್ವೆಯುತ ಸಮಾಜ ಕಟ್ಟುವ ನಿಟ್ಟಿನಲ್ಲಿ

ಭಾರತ ಕೊಡುಗೆ ಅಪಾರವಾದದು (Muslims proud about indian constitution) ಎಂದಿದ್ದಾರೆ.

ಇದೇ ವೇಳೆ ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಕಟುವಾಗಿ ಟೀಕಿಸಿದ ಅವರು, ಭಯೋತ್ಪಾದಕರಿಗೆ ಯಾವುದೇ ಒಂದು ಧರ್ಮ ಅಥವಾ ದೇಶವಿಲ್ಲ.

ಅವರ ಆಲೋಚನೆಗಳನ್ನು ನಾವು ವಿರೋಧಿಸುತ್ತೇವೆ. ಭಯೋತ್ಪಾದನೆಗೆ ಇಸ್ಲಾಂ (Islam) ಎಂದಿಗೂ ಬೆಂಬಲ ನೀಡುವುದಿಲ್ಲ. ಇಸ್ಲಾಂ ಶಾಂತಿಯನ್ನು ಬೋಧಿಸುವ ಧರ್ಮ. ಹೀಗಾಗಿ ಇಸ್ಲಾಂ ಧರ್ಮಕ್ಕೂ

ಹಾಗೂ ಭಯೋತ್ಪಾದನೆಗೂ ಸಂಬಂಧ ಇಲ್ಲ. ಭಯೋತ್ಪಾದನೆ ಒಂದು ಧರ್ಮದ ಚಿತ್ರಣವನ್ನು ವಿರೂಪಗೊಳಿಸುವುದರ ಮೇಲೆ ಕಾರ್ಯನಿರ್ವಹಿಸುತ್ತೇವೆ. ಹೀಗಾಗಿ ಇಸ್ಲಾಂ ಎಂದಿಗೂ ಭಯೋತ್ಪಾದನೆಯನ್ನು

ಸಮರ್ಥಿಸುವುದಿಲ್ಲ ಎಂದು ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ ಹೇಳಿದ್ದಾರೆ.

ಇನ್ನು ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ ಅವರು ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

Exit mobile version