ಮೈಸೂರು ದಸರಾದಲ್ಲಿ ಈ ಬಾರಿ ನಡೆಯಲ್ಲ ವಜ್ರಮುಷ್ಟಿ ಜಟ್ಟಿ ಕಾಳಗ

 ಮೈಸೂರು ಸೆ 27 :  2021ರ ವಿಶ್ವವಿಖ್ಯಾತ ಮೈಸೂರು ದಸರಾ  ಸಿದ್ದತೆ, ಮೈಸೂರು ಅರೆಮನೆಯಲ್ಲಿ ಪ್ರಾರಂಭವಾಗಿದೆ. ಸಂಪ್ರದಾಯದಂತೆ ಕಾರ್ಯಕ್ರಮಗಳು ನಿಗದಿಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ವಜ್ರಮುಷ್ಟಿ ಜಟ್ಟಿ ಕಾಳಗಕ್ಕೆ ಬ್ರೇಕ್‌ ಬಿದ್ದಿದೆ. ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುವುದು, ಅಂದಿನಿಂದ ಅರಮನೆಗೆ ಪ್ರವಾಸಿಗರು ಬರುವುದನ್ನು ನಿರ್ಬಂಧ ಹೇರಲಾಗಿದೆ. ಅಕ್ಟೋಬರ್‌ 7ನೇ ತಾರೀಕಿನಿಂದ 14ನೇ ತಾರೀಕಿನವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯಲಿವೆ. 

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಕ್ಟೋಬರ್‌ 7 ನೇ ತಾರೀಕಿನಿಂದ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಅಕ್ಟೋಬರ್‌  14 ಅರಮನೆಯಲ್ಲಿ ಆಯುಧಪೂಜೆ ನಡೆಯಲಿದೆ.  ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿವೆ. 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ತಂದು ಪೂಜೆ ಸಲ್ಲಿಸಲಾಗುತ್ತದೆ.  ಬಳಿಕ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಅರಮನೆಯಲ್ಲಿ ಯದುವೀರ ಅವರು ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. 

15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ಮಾಡಲಾಗುವುದು,  ಬೆಳಿಗ್ಗೆ 5.45ಕ್ಕೆ  ಆನೆ ಕುದುರೆ ಹಸುಗಳ ಆಗಮನ, ಬೆ.6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ,  ಬೆ.7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ಶುರುವಾಗಲಿದೆ.  ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ.  ದೇಗುಲದ ಬನ್ನಿ ಮರಕ್ಕೆ ಯದುವೀರ ಪೂಜೆ ಸಲ್ಲಿಸಲಿದ್ದಾರೆ. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸು ಆಗಲಿದೆ. ಎಂದು ಅರಮನೆ ಮೂಲಗಳು ತಿಳಿಸಿವೆ.

Exit mobile version