ಇಂಗ್ಲೆಂಡ್ ನಲ್ಲಿದೆ ವಿಚಿತ್ರ ಬಾವಿ ; ಈ ಬಾವಿ ನೀರು ವಸ್ತುಗಳನ್ನು ಕಲ್ಲಾಗಿಸುತ್ತಂತೆ!

England : ನಮ್ಮ ವಿಶ್ವದಲ್ಲಿ ಹಲವಾರು ವಿಚಿತ್ರ ಸಂಗತಿಗಳು (Mysterious Well Of England) ನಡೆಯುತ್ತಲೇ ಇರುತ್ತವೆ. ಹಲವಾರು ವಿಚಿತ್ರಗಳಿಗೆ ಉತ್ತರವಿಲ್ಲದೆ ನಿಗೂಢವಾಗಿ ಉಳಿದಿದ್ದರೂ, ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತಿರುವುದಂತೂ ಸುಳ್ಳಲ್ಲ.

ಅದರಲ್ಲಿ ಈ ಬಾವಿಯೂ ಹೌದು, ಈ ಬಾವಿಯ ನೀರು ತಾಗಿದರೆ ಸಾಕು ಎಲ್ಲವೂ ಕಲ್ಲಾಗುತ್ತಂತೆ! ಹೌದು, ವಿಶ್ವದಲ್ಲಿ ಬಹಳ ಬಗೆಯ ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತವೆ. ಕೆಲವೊಂದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಲು ಸಾಧ್ಯವಾದರೆ, ಮತ್ತೆ ಕೆಲವೊಂದು ತರ್ಕಕ್ಕೆ ನಿಲುಕದ್ದಾಗಿರುತ್ತದೆ.

ಇಂಗ್ಲೆಂಡ್‌ನಲ್ಲಿರುವ (England) ಈ ಬಾವಿಯ ನೀರು ತಾಗಿದ ಎಲ್ಲಾ ವಸ್ತುಗಳೂ ತಿಂಗಳೊಳಗೆ ಕಲ್ಲಾಗುತ್ತವಂತೆ. ಈ ವಿಚಿತ್ರದ ಬಗೆಗಿನ ವಿವರಣೆಯನ್ನು ನೋಡೋಣ,

ಜಗತ್ತಿನಲ್ಲಿ ನಡೆಯುವ ಕೆಲವು ವಿಶಿಷ್ಟ ಸಂಗತಿಗಳು ನಮ್ಮ ಊಹೆಗೂ ನಿಲುಕುವುದಿಲ್ಲ. ಇದೂ ಕೂಡ (Mysterious Well Of England) ಅಂಥದ್ದೇ ಒಂದು ಚಿತ್ರ ವಿಚಿತ್ರಗಳಲ್ಲೊಂದಾಗಿದ್ದು, ಇದನ್ನು ಅದ್ಭುತ ಎಂದೇ ಕರೆಯಬಹುದು.

ಇದನ್ನೂ ಓದಿ : https://vijayatimes.com/bengaluru-will-be-economic-capital/


ಇದು ಪ್ರತ್ಯಕ್ಷವಾಗಿ ನಡೆಯುತ್ತಿರುವ ವೈಶಿಷ್ಟ್ಯ. ಅಷ್ಟಕ್ಕೂ ಇದು ಇರುವುದು, ಬರ್ಗ್‌ನ ಉತ್ತರ ಯಾರ್ಕ್ ಶೈರ್‌ನಲ್ಲಿ. ಈ ಬಾವಿಯ (Well) ನೀರಿಗೆ ತಾಕಿದ ಪ್ರತಿಯೊಂದು ವಸ್ತುಗಳೂ ಕಲ್ಲಾಗಿ ಮಾರ್ಪಾಡಾಗುತ್ತವೆ.

ಯಾವುದೇ ವಸ್ತುವಿರಲಿ, ಎಲೆ, ಕೋಲು, ಸೈಕಲ್, ಗೊಂಬೆ ಎಲ್ಲವೂ ಕೆಲವೇ ತಿಂಗಳಲ್ಲಿ ಕಲ್ಲಾಗುತ್ತವೆ!


ಇದರ ಬಗೆಗಿನ ಜನರ ನಂಬಿಕೆ ಹೀಗಿದೆ, ಅನಾದಿ ಕಾಲದಿಂದಲೂ ಜನರು ನಂಬಿಕೊಂಡು ಬಂದಂತೆ ಒಂದು ದೆವ್ವದ ಶಾಪದಿಂದ ಈ ಬಾವಿಯ ನೀರು ಪ್ರತಿಯೊಂದು ವಸ್ತುಗಳನ್ನು ಕಲ್ಲಾಗಿಸುತ್ತದಂತೆ.

ಈ ಬಾವಿಯನ್ನು ಒಂದು ಕಡೆಯಿಂದ ನೋಡಿದರೆ ತಲೆ ಬುರುಡೆಯ ರೀತಿ ಕಾಣುತ್ತದೆ. ಮನುಷ್ಯರೂ ಕೂಡ ಅದನ್ನು ಮುಟ್ಟಿದರೆ ಕಲ್ಲಾಗುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ.

https://youtu.be/nz64LK6IYf4 ಕೆರೆ ನಾಪತ್ತೆ! ಸುಪ್ರೀಂ ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದ ಬಿಬಿಎಂಪಿ.

ಜನರು ವಸ್ತುಗಳು ಕಲ್ಲಾಗುವುದನ್ನು ಪರೀಕ್ಷಿಸಲು ತಮ್ಮ ವಸ್ತುಗಳನ್ನು ಬಿಡುತ್ತಿದ್ದರು. ಹೀಗೆ ಬಿಟ್ಟ ವಸ್ತುಗಳು ಕಲ್ಲಾಗಿರುವುದು ಈಗಲೂ ಕಾಣಿಸುತ್ತದೆ. ಈ ಬಾವಿಯ ಬಗ್ಗೆ ಇರುವ ಇನ್ನೂ ಒಂದು ವಿಚಿತ್ರ ನಂಬಿಕೆಯೆಂದರೆ,

ಈ ಬಾವಿ ನೀರಿನ ಬಗ್ಗೆ ಇಂಥದ್ದೊಂದು ನಂಬಿಕೆ, ಭಯ ಜನರಲ್ಲಿದ್ದರೂ ಕೂಡ ಮತ್ತೊಂದು ಗುಂಪಿನ ಜನ ಈ ನೀರಿನಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದೂ ನಂಬಿಕೊಂಡಿದ್ದಾರೆ.

ಏಕೆಂದರೆ ಈ ನೀರನ್ನು ಪರೀಕ್ಷೆ ಮಾಡಿದ ವಿಜ್ಞಾನಿಗಳೂ ಸಹ, ನೀರಿನಲ್ಲಿ ದೇಹದ ನೋವುಗಳನ್ನು ದೂರ ಮಾಡುವ ವಿಶೇಷ ಶಕ್ತಿಯಿದೆ ಎಂದು ತಿಳಿಸಿದ್ದಾರೆ.

ಆಧುನಿಕ ಜಗತ್ತಿನ ವಿಜ್ಞಾನಿಗಳು ಕೂಡ ಈ ನೀರನ್ನು ಪರೀಕ್ಷಿಸಿ, ನೀರಿನಲ್ಲಿ ಹೆಚ್ಚಿನ ಪ್ರಮಾಣದ ಮಿನರಲ್ ಗಳು ಇರುವುದನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/state-congress-tweets/

ಈ ಮಿನರಲ್ ವಸ್ತುಗಳ ಸುತ್ತಲೂ ಶೇಖರಣೆಗೊಂಡು ಕಲ್ಲಾಗಿ ಕಾಣುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ನಂಬಿಕೆಗಳು ಹಾಗೂ ವಿಜ್ಞಾನ ಏನೇ ಇರಲಿ, ಸದ್ಯಕ್ಕಂತೂ ಈ ತಾಣ ಇಂಗ್ಲೆಂಡ್ ನ ಅತ್ಯಂತ ಹಳೆಯ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದ್ದು ಜನಪ್ರಿಯವಾಗಿದೆ.
Exit mobile version