Bengaluru: ಜನವರಿ 19ರಂದು ಬೆಂಗಳೂರಿಗೆ (Narendra Modi Arrives Blore) ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ
ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ (Boeing India Engineering) ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್ ನ್ನು ಪ್ರಧಾನಿ ನರೇಂದ್ರ
ಮೋದಿ ಉದ್ಘಾಟಿಸಲಿದ್ದಾರೆ.
ಇನ್ನು ಪ್ರಧಾನಿ ಮೋದಿ (Modi) ಆಗಮನ ಹಿನ್ನೆಲೆ ಬೆಂಗಳೂರಿನ ಹಲವೆಡೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚಾರ ನಿಷೇಧಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.
ಯಾವ ಮಾರ್ಗದಲ್ಲಿ ಸಂಚಾರ ನಿಷೇಧ?
ಜನವರಿ (January) 19ರ ಬೆಳಗ್ಗೆ 8 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಗೊಲ್ಲಹಳ್ಳಿ ಗೇಟ್ ನಿಂದ ಹುನಚೂರುವರೆಗೆ, ಏರ್ ಲೈನ್ಸ್ ಡಾಬಾದಿಂದ ಬೂದಿಗೆರೆಯವರೆಗೆ, ಹೆಣ್ಣೂರು-ಬಾಗಲೂರು
(Hennuru-Bagluru) ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆಯವರೆಗೆ, ಚಿಕ್ಕಜಾಲ ಕೋಟೆ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ, ಬಗಲೂರಿನಿಂದ ವಿಮಾನ ನಿಲ್ದಾಣದವರೆಗೆ
ಸಂಚಾರವನ್ನು ತಾತ್ಕಾಲಿಕವಾಗಿ (Narendra Modi Arrives Blore) ನಿಷೇಧಿಸಲಾಗಿದೆ.
ವೈಟ್ ಫೀಲ್ಡ್, ಕೆ.ಆರ್. ಪುರಂನಿಂದ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (Kempegowda International Airport) ಗೊಲ್ಲಹಳ್ಳಿ ಗೇಟ್ ಮಾರ್ಗವಾಗಿ ಸಂಚರಿಸುವ ವಾಹನಗಳು
ಸಂಚರಿಸಬೇಕಾದ ಮಾರ್ಗಗಳು: ಗೊಲ್ಲಹಳ್ಳಿ ಗೇಟ್-ಬಲದಿರುವು-ಹೊನ್ನಹಳ್ಳಿ ಗೇಟ್-ಬೆಟ್ಟಕೋಟೆ-ಎಲ್ಲೈನ್ ಡಾಬಾ-ಎಡತಿರುವು-ದೇವನಹಳ್ಳಿ ಬಸ್ ನಿಲ್ದಾಣ-ಎಡ ತಿರುವು-ದೇವನಹಳ್ಳಿ
ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್-ಎಡ ತಿರುವು-ಕೆಂಪೇಗೌಡ ವಿಮಾನ ನಿಲ್ದಾಣ.
ರಾಷ್ಟ್ರೀಯ ಹೆದ್ದಾರಿ-648 ಏರ್ಲೈನ್ ಡಾಬಾ ಜಂಕ್ಷನ್ (Airline Daba Junction) ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಡೆಗೆ ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ ಸಂಚರಿಸುವ
ವಾಹನ ಸಂಚರಿಸಬೇಕಾದ ಮಾರ್ಗಗಳು: ಏರ್ಲೈನ್ಸ್ ಡಾಬಾ-ದೇವನಹಳ್ಳಿ ಬಸ್ ನಿಲ್ದಾಣ (Devanahalli Bus Stand)-ಎಡತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ- ದೇವನಹಳ್ಳಿ
ಟೋಲ್-ಎಡ ತಿರುವು- ಕೆಂಪೇಗೌಡ ವಿಮಾನ ನಿಲ್ದಾಣ.
ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳನ್ನು ಸರ್ಕಲ್ ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಬಾಗಲೂರು ಕಾಲೋನಿ ಬಲ ತಿರುವು
– ರಜಾಕ್ ಪಾಳ್ಯ – ಎಂ.ವಿ.ಐ.ಟಿ ಕಾಲೇಜು – ಚಿಕ್ಕಚಾಲ ಬಲ ತಿರುವು – ಬಿಬಿ ರಸ್ತೆ (BB Road) – ಸಾದಹಳ್ಳಿ ಟೋಲ್- ಏರ್ ಪೋರ್ಟ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ.
ಚಿಕ್ಕಜಾಲ ಕೋಟೆ ಕ್ರಾಸ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ (Galamma Circle) ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಚಿಕ್ಕಚಾಲ-ಸಾದಹಳ್ಳಿ ಟೋಲ್ – ಏರ್ ಪೋರ್ಟ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ
ಹೆಣ್ಣೂರು-ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ಸಂಚರಿಸುವ ವಾಹನ ಸಂಚರಿಸಬೇಕಾದ ಮಾರ್ಗಗಳು: ಬಾಗಲೂರು ಗುಂಡಪ್ಪ ಸರ್ಕಲ್-ಎಡ
ತಿರುವು-ರೇವಾ ಕಾಲೇಜು ಜಂಕ್ಷನ್-ಬಾಗಲೂರು ಕ್ರಾಸ್-ಬಲ ತಿರುವು- ಚಿಕ್ಕ ಚಾಲ-ಸಾದಹಳ್ಳಿ ಟೋಲ್ -ಏರ್ ಪೋರ್ಟ ಪ್ರೈ ಓವರ್ ಎಂಟ್ರಿ (Airport Fly Over Entry)– ಕೆಂಪೇಗೌಡ ವಿಮಾನ ನಿಲ್ದಾಣ.
- ಭವ್ಯಶ್ರೀ ಆರ್ ಜೆ