ಗುಜರಾತ್‌ ಗಲಭೆ : ಸುಪ್ರೀಂಕೋರ್ಟ್‌ vs ಬಿಬಿಸಿ ಸಾಕ್ಷ್ಯಚಿತ್ರ ; ಯಾವುದು ಸತ್ಯ…..

Viral News: ಗುಜರಾತ್‌(Gujarat) ಗಲಭೆಗೆ ಸಂಬಂಧಿಸಿದಂತೆ ಬ್ರಿಟನ್‌ನ ಬಿಬಿಸಿ ಸಂಸ್ಥೆ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಆ ಸಾಕ್ಷ್ಯಚಿತ್ರದಲ್ಲಿ ಗುಜರಾತ್‌ಗಲಭೆಗೆ (Narendra modi BBC Documentary) ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ನೇರ ಹೊಣೆಗಾರರು ಎಂದು ಬಿಬಿಸಿ(BBC) ಬಿಂಬಿಸಿದೆ.

ಬಿಬಿಸಿಯ ಈ ಸಾಕ್ಷ್ಯಚಿತ್ರದ ವಿರುದ್ದ ಭಾರತ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಇದೊಂದು ವಸಾಹತುಶಾಹಿ ಮನಸ್ಥಿತಿಯ ಅಪಪ್ರಚಾರದ ಸರಕು ಎಂದು ಟೀಕಿಸಿದೆ.

ಈ ನಡುವೆ ಭಾರತದಲ್ಲಿ ಈ ಸಾಕ್ಷ್ಯಚಿತ್ರದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಬಿಬಿಸಿ ಸಿದ್ದಪಡಿಸಿರುವ ಸಾಕ್ಷ್ಯಚಿತ್ರಕ್ಕೆ ಆಧಾರವೇನು..?!
ಇಡೀ ಸಾಕ್ಷ್ಯಚಿತ್ರವನ್ನು ಅಂದಿನ ಬ್ರಿಟನ್‌(Britain) ರಾಜತಾಂತ್ರಿಕ ಅಧಿಕಾರಿಯೊಬ್ಬ ಬ್ರಿಟನ್‌ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನೇ ಆಧಾರವಾಗಿಟ್ಟುಕೊಂಡು ರೂಪಿಸಲಾಗಿದೆ.

ಆದರೆ ಆ ವರದಿಯ ನೇತೃತ್ವ ವಹಿಸಿದ್ದ ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಿಲ್ಲ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳನ್ನೇ (Narendra modi BBC Documentary) ಪ್ರಧಾನವಾಗಿಟ್ಟುಕೊಂಡು ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದೆ.

ಆದರೆ ಅಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ನಾನಾವತಿ ಆಯೋಗವನ್ನು ರಚನೆ ಮಾಡಿತ್ತು.

ಅದೇ ರೀತಿ ವಿಶೇಷ ತನಿಖಾ ದಳ (ಎಸ್‌ಐಟಿ)(SIT)ಯನ್ನು ರಚನೆ ಮಾಡಿ, ಸುದಿರ್ಘ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ಬಿಜೆಪಿಯವರು ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ, ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ : ಸಿದ್ದರಾಮಯ್ಯ

ಮಾನವ ಹಕ್ಕುಗಳ ಆಯೋಗವು ಕೂಡಾ ಈ ಗಲಭೆಯ ಕುರಿತು ಸ್ವತಂತ್ರ ವಿಚಾರಣೆ ನಡೆಸಿತ್ತು. ಈ ಎಲ್ಲ ತನಿಖಾ ವರದಿಗಳು ನರೇಂದ್ರ ಮೋದಿ ಅವರಿಗೆ ಕ್ಲಿನ್‌ಚೀಟ್‌ ನೀಡಿದ್ದವು.

ಅದೇ ರೀತಿ ಈ ಕುರಿತು ಭಾರತದ ಸುಪ್ರೀಂಕೋರ್ಟ್‌ನಲ್ಲಿಯೂ(Supreme Court) ಸುದಿರ್ಘ ವಿಚಾರಣೆ ನಡೆದು, ಸುಪ್ರೀಂಕೋರ್ಟ್‌ನಲ್ಲಿಯೂ ನರೇಂದ್ರ ಮೋದಿ ಅವರಿಗೆ ಕ್ಲಿನ್‌ಚೀಟ್‌ನೀಡಲಾಗಿತ್ತು.

ಆದರೆ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಭಾರತೀಯ ತನಿಖಾ ಸಂಸ್ಥೆಗಳು ಮತ್ತು ಭಾರತದ ಪರಮೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ.

ಇನ್ನು ಭಾರತ ಸರ್ಕಾರ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ(India) ಪ್ರಸಾರ ಮಾಡದಂತೆ ನಿಷೇಧ ಹೇರಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್‌ಸೇರಿದಂತೆ ವಿಪಕ್ಷಗಳು ಟೀಕಿಸಿವೆ.

ಆದರೆ ಭಾರತದ ಉನ್ನತ ನ್ಯಾಯಾಲಯ ನೀಡಿರುವ ತೀರ್ಪಿಗೆ ವಿರುದ್ದವಾಗಿ ವಿದೇಶಿ ಮಾದ್ಯಮವೊಂದು, ಕೇವಲ ರಾಜತಾಂತ್ರಿಕ ಅಧಿಕಾರಿಯೊಬ್ಬ ನೀಡಿರುವ ವರದಿಯನ್ನೇ ಆಧಾರವಾಗಿಟ್ಟುಕೊಂಡು,

ಭಾರತದ ಪ್ರಧಾನಿಯನ್ನು “ಗಲಭೆಗೆ ಕಾರಣಕರ್ತ” ಎಂದು ಬಿಂಬಿಸುವುದನ್ನು ಭಾರತ ಸಹಿಸಿಕೊಳ್ಳಬೇಕಾ..? ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ತೋರಿಸಿರುವುದು ಸತ್ಯವೆಂದಾದರೆ,

ಭಾರತದ ಸುಪ್ರೀಂಕೋರ್ಟ್‌ ನಡೆಸಿರುವ ವಿಚಾರಣೆ ಮತ್ತು ತೀರ್ಪನ್ನು ನಾವು ಏನೆಂದು ಪರಿಗಣಿಸಬೇಕು..? ಬಿಬಿಸಿ ಸಂಸ್ಥೆ ಬಿಜೆಪಿಯ ನಾಯಕ ನರೇಂದ್ರ ಮೋದಿಯನ್ನು ಟೀಕಿಸುತ್ತಿಲ್ಲ, ಅದು ಟೀಕಿಸುತ್ತಿರುವುದು ಭಾರತದ ಪ್ರಧಾನಿಯನ್ನು ಎಂಬುದನ್ನು ಭಾರತೀಯರು ಮರೆಯಬಾರದು ಎಂದು ಹೇಳಿದೆ.

Exit mobile version