ಕೊವಿಡ್-19 ಮುಂಚೂಣಿ ಕಾರ್ಯಕರ್ತರ ಸಮಗ್ರ ತರಬೇತಿ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಚಾಲನೆ

ನವದೆಹಲಿ,ಜೂ.18: ಕೊವಿಡ್-19 ಮುಂಚೂಣಿ ಕಾರ್ಯಕರ್ತರಿಗೆ ಸಮಗ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. 26 ರಾಜ್ಯಗಳಲ್ಲಿನ 111 ತರಬೇತಿ ಕೇಂದ್ರಗಳಲ್ಲಿ ಈ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ.

ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಸುಮಾರು 1 ಲಕ್ಷ ಕೋವಿಡ್ ವಾರಿಯರ್ಸ್ ಗೆ ಕೌಶಲ್ಯ ನೀಡಿ, ಅವರ ಕೌಶಲ್ಯ ವೃದ್ಧಿಸುವ ಗುರಿ ಹೊಂದಲಾಗಿದೆ. ಗೃಹ ಆರೈಕೆ ಬೆಂಬಲ, ಮೂಲ ಆರೈಕೆ ನೆರವು, ಅತ್ಯಾಧುನಿಕ ಆರೈಕೆ ನೆರವು, ತುರ್ತು ರಕ್ಷಣೆ ನೆರವು, ಮಾದರಿ ಸಂಗ್ರಹ ನೆರವು ಮತ್ತು ವೈದ್ಯಕೀಯ ಸಾಧನ ನೆರವು ಸೇರಿ ಆರು ಬಗೆಯ ಉದ್ಯೋಗಗಳಲ್ಲಿ ಕೋವಿಡ್ ವಾರಿಯರ್ಸ್ ಗೆ ತರಬೇತಿ ನೀಡಲಾಗುವುದು.

ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 3.0 ಅಡಿ ಸುಮಾರು 276 ಕೋಟಿ ವೆಚ್ಚದ ಕೇಂದ್ರದ ನೆರವಿನೊಂದಿಗೆ ವಿಶೇಷ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ.

Exit mobile version