Visit Channel

`ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಆನಂತರ ನೋಡೋಣ’ ಎಂದು ಸಂಸತ್ ನಲ್ಲಿ ಹಾಸ್ಯ ಮಾಡಿದ ಪ್ರಧಾನಿ!

bjp

ಹಲವು ರೀತಿಯಲ್ಲಿ ಸೋಲು ತನ್ನದಾದರು ಕಾಂಗ್ರೆಸ್ (congress) ಇನ್ನು ತನ್ನ ದಾಷ್ಟ್ಯವನ್ನ ಬಿಟ್ಟಿಲ್ಲ. ಅವರಲ್ಲಿ ಇನ್ನು ಹಲವರು ಅಧಿಕಾರದ ಭ್ರಮೆಯಿಂದ ಹೊರಬಂದಿಲ್ಲ ಎಂದು ಪ್ರಧಾನಿ(Prime minister) ನರೇಂದ್ರ ಮೋದಿ(Narendra Modi) ಪ್ರತಿಪಕ್ಷಗಳನ್ನ ಕುಹಕವಾಗಿ ಟೀಕಿಸಿದ್ದಾರೆ!

ಇನ್ನು ಶತಮಾನ ಕಳೆದರು ಕಾಂಗ್ರೆಸ್(Congress) ಅಧಿಕಾರದ ಗದ್ದುಗೆ ಏರೋದಿಲ್ಲ ಅನ್ನೋದು ನಿಸ್ಸಂದೇಹ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲು ಪ್ರಜೆಗಳು ನಿರುತ್ಸಾಹೀಗಳಾಗಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು. ನಮ್ಮ ಅಧಿಕಾರಾವಧಿಯಲ್ಲಿ ಬಡವರನ್ನ ಹಸಿವಿನಿಂದ ಹೊರ ತಂದಿದ್ದೇವೆ.

prime minister

80 ಕೋಟಿಗೂ(Crore) ಹೆಚ್ಚು ಜನರಿಗೆ ಉಚಿತ ಆಹಾರ ಒದಗಿಸಿದ ಖ್ಯಾತಿಯು ನಮಗಿದೆ. ಗಾಂಧೀಜಿಯ(Gandhiji) ಸ್ವದೇಶಿ ಕನಸನ್ನ ಇನ್ನು ಜೀವಂತವಾಗಿ ಇರಿಸಿದ ಹೆಮ್ಮೆಯು ನಮಗಿದೆ. ಆದರೆ ವಿಪರ್ಯಾಸ ಗಾಂಧೀ ಕನಸಿಗೆ ಕಾಂಗ್ರೆಸ್(congress)ಅಡ್ಡಿಯಾಗುತ್ತಿದೆ. ಆತ್ಮನಿರ್ಭರ ಭಾರತವನ್ನ ಕಾಂಗ್ರೆಸ್ ಬಯಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ ಪ್ರಹಾರ ನಡೆಸಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಶುರುವಾಗುತ್ತಲೇ ನಾವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಿಸಬೇಕು ಕೊರೊನಾ ಎಂಬ ಮಹಾಮಾರಿ ನಮ್ಮ ದೇಶವನ್ನು ಎರಡು ವರ್ಷಗಳ ಕಾಲ ನಮ್ಮನ್ನಾಳಿದರು.

ಆ ಸವಾಲನ್ನ ಸಮರ್ಥವಾಗಿ ನಾವು ಎದುರಿಸಿದ್ದೇವೆ. ಭಾರತದಲ್ಲಿ ಶೇ. 80 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ. ಕೊರೊನಾ ಕಾಲವನ್ನು ಕೂಡ ರಾಜಕೀಯವಾಗಿ ಪರಿವರ್ತಿಸಿದ ಹೆಗ್ಗಳಿಕೆ ಕಾಂಗ್ರೆಸ್ಸಿಗೆ ಸಲ್ಲುವುದು ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಭಾಷಣಕ್ಕೆ ವಿಪಕ್ಷಗಳು ಹಲ್ಲೆಗಳೆಯುತ್ತಲೇ ಇದ್ದರು. ಈ ವೇಳೆ ಲತಾಮಂಗೇಶ್ಕರ್ ನಿಧನವನ್ನು ಕೂಡ ಪ್ರಸ್ತಾಪಿಸಿದರು ಜೊತೆಗೆ ಸಂತಾಪವನ್ನು ಕೂಡ ಸೂಚಿಸಿದರು. ಲತಾ ಅವರ ನಿಧನವು ಭಾರತಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು. ಭಾರತವು ಮುನ್ನಡೆಯುತ್ತಿದೆ ನಾವು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ಭಾರತ ಜಾಗತಿಕ ನಾಯಕತ್ವದ ಪಾತ್ರವನ್ನು ನಿರ್ವಹಿಸಲಿದೆ. ಹಲವು ಕ್ಷೇತ್ರಗಳಲ್ಲಿ ನಾವು ಮುನ್ನಡೆಯುತ್ತಿದ್ದರೆ ಇದರಿಂದ ನಾವೆಲ್ಲರೂ ಹೆಮ್ಮೆಪಡುವಂತಹ ಹಂತಕ್ಕೆ ತಲುಪಿದ್ದೇವೆ.

Rahul Gandhi

ದೇಶದ ನಾನಾ ಮನೆಗಳಿಗೆ ಉಚಿತ ಶೌಚಾಲಯಗಳನ್ನು ನಿರ್ಮಿಸುವುದರಲ್ಲಿ ಬಯಲು ಮಲ ವಿಸರ್ಜನೆಯನ್ನು ತಡೆಗಟ್ಟಿದ ಹೆಗ್ಗಳಿಕೆಯೂ ಕೂಡ ನಮ್ಮ ಆಡಳಿತಕ್ಕೆ ಸಲ್ಲುವುದು
ಈ-ಆಡಳಿತದಿಂದ ಸಂತೋಷ ಪಡದ ಪ್ರಜೆಗಳು ಇರಬಹುದೇ?ಎಂಬ ಪ್ರಶ್ನೆಯನ್ನು ಕೂಡ ನರೇಂದ್ರ ಮೋದಿ ಲೋಕಸಭೆಯಲ್ಲಿ ಕೇಳಿದರು. ಬಡವರ ಸಂತೋಷ ದೇಶದ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿದೆ ಬಡವರ ಮನೆಗೆ ಶೌಚಾಲಯ ವಿದ್ಯುತ್ ಸಂಪರ್ಕ ಬಂದಿದೆ. ಇದೀಗ ಬಡವರು ಬ್ಯಾಂಕ್ ಖಾತೆ ತೆರೆಯುವಂತಾಗಿದೆ. 2014 ರವರೆಗು ಆಡಳಿತ ನಡೆಸಿದಂತಹ ಸರಕಾರ ಬಡವರನ್ನ ಕಡೆಗಣಿಸಿದ್ದು ಐದು ದಶಕಗಳ ಕಾಲ ಕಾಂಗ್ರೆಸ್ ಆಡಳಿತವನ್ನು ನಡೆಸಿದೆ. ಆದರೆ ಜನರಿಗೆ ಯೋಗ್ಯವಾದ ಅಂತಹ ಯೋಜನೆಗಳು ಈವರೆಗೂ ತಲುಪಿಲ್ಲ.

ಬಿಹಾರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದರೂ ಕೂಡ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ. ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಇದ್ದಾಗ ವ್ಯವಸ್ಥೆ ಹೇಗಿತ್ತು? ಈಗ ಹೇಗಿದೆ! ಇದನ್ನೆರಡನ್ನು ತುಲನೆ ಮಾಡಿರಿ ಎಂದು ಪ್ರಶ್ನೆಯೂ ಹಾಕಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಮೊದಲ ಆದ್ಯತೆ ನೀಡಿದ್ದು, ನಮ್ಮ ಸರಕಾರವೇ. ಇನ್ನೂ ಭಾರತವನ್ನು ಡಿಜಿಟಲ್ ಇಂಡಿಯಾ ಮಾಡಲು ನಮ್ಮ ಸರಕಾರ ಪಣತೊಟ್ಟಿದ್ದು ಸಾರ್ಥಕವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.