ನವದೆಹಲಿ : ಪ್ರಧಾನಿ(PrimeMinister) ನರೇಂದ್ರ ಮೋದಿಯವರು(Narendra Modi) ಇಂದು ಆಂಧ್ರ ಪ್ರದೇಶಕ್ಕೆ(AndhraPardesh) ನವದೆಹಲಿಯಿಂದ ಹೆಲಿಪಾಪ್ಟರ್(Helicopter) ಮೂಲಕ ತೆರಳಿದರು.
ಪ್ರಧಾನಿ ಅವರ ಭದ್ರತೆಯಲ್ಲಿ ಲೋಪ ಕಂಡುಬಂದಿದ್ದು, ಪ್ರಧಾನಿ ಅವರನ್ನು ವಿರೋಧಿಸಿ ಕಾಂಗ್ರೆಸ್(Congress) ಕಾರ್ಯಕರ್ತರು ದೆಹಲಿ ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಬಳಿ ಕಾಂಗ್ರೆಸ್ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಕಪ್ಪು ಬಲೂನ್ಗಳನ್ನು, ಮೋದಿ ಅವರು ಬರುತ್ತಿದ್ದ ಮಾರ್ಗದಲ್ಲಿ ಹಾರಿಸಿದ್ದಾರೆ.
ವಿಜಯವಾಡದಲ್ಲಿ(Vijayawada) ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿರುವಾಗ ಬಲೂನ್ಗಳನ್ನು ಹಾರಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವು ವರದಿಗಳು ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರತ್ಯೇಕ್ಷವಾಗಿ ದೂರಿವೆ.
ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆದ ವಿಮಾನ ನಿಲ್ದಾಣದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಅವರು ಕಪ್ಪು ಬಲೂನ್ಗಳು ಮತ್ತು ಫಲಕಗಳನ್ನು ಹಿಡಿದು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ವಿರೋಧಿಸಿದ್ದಾರೆ. ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿಯವರು ಬರುತ್ತಿದ್ದ ಹೆಲಿಕಾಪ್ಟರನ್ನು ಗುರಿಯಾಗಿಸಿಕೊಂಡು ಕಪ್ಪು ಬಲೂನ್ ಹಾರಿಸಿದ್ದಾರೆ. ಭದ್ರತಾ ಲೋಪದಿಂದ ಈ ಘಟನೆಯಾಗಿದ್ದು, ಸ್ಥಳೀಯ ಪೊಲೀಸರು ಬಲೂನ್ ಹಾರಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.