ಇಂದು ರಾಷ್ಟ್ರೀಯ ರೈತ ದಿನ : ಏನಿದರ ಇತಿಹಾಸ ?

India : ಭಾರತದ ಬೆನ್ನೆಲುಬು ನಮ್ಮ ರೈತರು(Farmers), ಏಕೆಂದರೆ ಭಾರತ(India) ಕೃಷಿ ಪ್ರಧಾನ ದೇಶವಾಗಿರುವುದರಿಂದ ರೈತರಿಗೆ (national farmers day) ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಡಿಸೆಂಬರ್ 23 ರಂದು ದೇಶದೆಲ್ಲೆಡೆ ರೈತರ ದಿನ(Farmer’s Day) ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.


ಭಾರತದ ಹೆಚ್ಚಿನ ಆದಾಯದ ಮೂಲವೆಂದರೆ ಕೃಷಿ ಈ ದೇಶದ ಅರ್ಧದಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿರುವುದರಿಂದ ರೈತರ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಈ ದಿನವೂ ಆಯೋಜಿಸಲಾಗುತ್ತದೆ. ಉತ್ತರಪ್ರದೇಶ ಸರ್ಕಾರವು ಡಿಸೆಂಬರ್ 23 ರಂದು ರಜಾದಿನವೆಂದು ಘೋಷಿಸಿದೆ ಈ ದಿನದಂದು ಕೃಷಿ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸುತ್ತಾರೆ.


ರೈತರಿಲ್ಲದೆ ಜೀವನ ನಿರ್ವಹಣೆ ತುಂಬಾ ಕಷ್ಟ ಆದ್ದರಿಂದ ಮೊದಲು ರೈತರಿಗೆ ಆದ್ಯತೆಯನ್ನು ನೀಡಬೇಕು.

ಭಾರತೀಯ ರೈತರ ಜೀವನ ಕಷ್ಟದಾಗಿದೆ ರೈತರು ಕಷ್ಟದ ಸ್ಥಿತಿಯಲ್ಲಿ ಹೇಗೆ ಬೆಳೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಸಾಮಾನ್ಯನಿಗೆ ಅರಿವು ಮೂಡಿಸಬೇಕೆಂಬ ಸದಾಶಯದೊಂದಿಗೆ ಈ ದಿನವನ್ನುರೈತರ ದಿನವೆಂದು ಆಚರಿಸಲಾಗುತ್ತದೆ.

ಇದನ್ನೂ ನೋಡಿ : https://fb.watch/hB86P0A_C4/ ಕೋವಿಡ್‌ ರೂಪಾಂತರ ತಳಿಯ ಹಾವಳಿ.

ರಾಷ್ಟ್ರೀಯ ರೈತ ದಿನಾಚರಣೆಯ ಇತಿಹಾಸ :

ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್(Charan Singh) ಅವರ ಗೌರವಾರ್ಥವಾಗಿ ಡಿಸೆಂಬರ್ 23 ರಂದು ರೈತರ ದಿನಾಚರಣೆ ಎಂದು ಆಚರಿಸಲಾಗುವುದು.

ಇವರು 1979 ಜುಲೈ 28ರಿಂದ 1980 ಜನವರಿ 14ರವರೆಗೆ ಪ್ರಧಾನಮಂತ್ರಿ ಪದವಿಯನ್ನು ಹೊಂದಿದರು ಜೊತೆಗೆ ಈ ಅವಧಿಯಲ್ಲಿ ರೈತರ ಜೀವನ ಮಟ್ಟವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಜೈ ಜವಾನ್ ಜೈ ಕಿಸಾನ್ ಅನ್ನು ಅನುಸರಿಸಿದರು.


ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡ ಇವರು ಅನೇಕ ನೀತಿ ನಿಯಮಗಳನ್ನು ತಂದುಕೊಟ್ಟವರು ನಮ್ಮ ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್. ಆದ್ದರಿಂದ ದೇಶದ ಸಾಮಾನ್ಯ ರೈತರಲ್ಲಿ ಕೂಡ ಜನಪ್ರಿಯರಾಗಿರುವ ನಾಯಕನ ಗೌರವಾರ್ಥವಾಗಿ ರೈತ ದಿನಾಚರಣೆಯಾಗಿ ಆಚರಿಸಲು ನಿರ್ಧರಿಸಲಾಯಿತು.


ಪ್ರಸ್ತುತವಾಗಿ ರೈತರಿಗಿರುವ ಯೋಜನೆಗಳನ್ನು ನೋಡುವುದಾದರೆ :

ಇದನ್ನೂ ಓದಿ : https://vijayatimes.com/t20-world-cup/

Exit mobile version