NESTS ಶಿಕ್ಷಣ ಸೊಸೈಟಿಯಲ್ಲಿ ಪದವೀಧರ ಶಿಕ್ಷಕರು ಸೇರಿದಂತೆ ಒಟ್ಟು 6329 ಹುದ್ದೆ ನೇಮಕ : ಕೇಂದ್ರ ಸರ್ಕಾರದ ವೇತನ ಜೊತೆಗೆ ಇತರೆ ಸೌಲಭ್ಯಗಳು

Job News : ಬೃಹತ್‌ ಹುದ್ದೆಗಳ ನೇಮಕ ಪ್ರಕ್ರಿಯೆಯು ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸೊಸೈಟಿ (NESTS Recruitment 22023) ಯಲ್ಲಿ ನಡೆಸಲಾಗುತ್ತಿದ್ದು,ಇದೀಗ ಬರೋಬರಿ 6329 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಬಿ.ಇಡಿ ಶಿಕ್ಷಣ ಪಡೆದವರು ಮತ್ತು ಯಾವುದೇ ಪದವಿ ಪಾಸ್‌ ಮಾಡಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಡನ್ ಹುದ್ದೆಗಳನ್ನು ಮತ್ತು ಟೀಚಿಂಗ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸೊಸೈಟಿಯು ಸ್ವಾಯತ್ತ ಸಂಸ್ಥೆ ಆಗಿದೆ. ಇಲ್ಲಿ ಸರ್ಕಾರಿ ಹುದ್ದೆ ಪಡೆಯುವವರಿಗೆ ಇತರೆ ಸೌಲಭ್ಯಗಳು ಮತ್ತು ಕೇಂದ್ರ ಸರ್ಕಾರದ ವೇತನ ಸಿಗಲಿವೆ. ದೇಶದಾದ್ಯಂತ ಇರುವ ಸಚಿವಾಲಯದಡಿಯ ಶಾಲೆಗಳಲ್ಲಿ ನೇಮಕ ಮಾಡಲಾಗುತ್ತದೆ.

ವಯೋಮಿತಿ

ವರ್ಗಾವಾರು ವಯೋಮಿತಿ ಸಡಿಲಿಕೆ ಸರ್ಕಾರಿ ನಿಯಮದ ಪ್ರಕಾರ ಅನ್ವಯವಾಗಲಿದೆ. ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ ಹುದ್ದೆಗೆ ಗರಿಷ್ಠ 35 ವರ್ಷ ಮೀರಿರಬಾರದು.

ಹುದ್ದೆಗಳ ವಿವರ ಕೆಳಗಿನಂತಿದೆ.

ತರಬೇತಿ ಪಡೆದ ಪದವೀಧರ ಶಿಕ್ಷಕರು-TGT 5660
ವಸತಿ ನಿಲಯ ಮೇಲ್ವಿಚಾರಕರು (ಮಹಿಳೆಯರು) 334
ವಸತಿ ನಿಲಯ ಮೇಲ್ವಿಚಾರಕರು (ಪುರುಷ) 335
ಒಟ್ಟು ಹುದ್ದೆಗಳು 6329

ವಿದ್ಯಾರ್ಹತೆ
ವಸತಿ ನಿಲಯ ಮೇಲ್ವಿಚಾರಕರು: ಪದವಿ ಪಾಸ್ ಆಗಿರಬೇಕು
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ -TGT : ಪದವಿ, ಬಿ.ಇಡಿ ಶಿಕ್ಷಣ.

ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

ಹುದ್ದೆವಾರು ವೇತನ ಶ್ರೇಣಿ

ತರಬೇತಿ ಪಡೆದ ಪದವೀಧರ ಶಿಕ್ಷಕರು: Rs.44,900- 1,42,400.
ವಸತಿ ನಿಲಯ ಮೇಲ್ವಿಚಾರಕರು : Rs.29,200- 92,300.

ಟಿಜಿಟಿ ಶಿಕ್ಷಕರನ್ನು ಹಿಂದಿ, ಇಂಗ್ಲಿಷ್, ಗಣಿತ,ಗ್ರಂಥಾಲಯ, ವಿಜ್ಞಾನ, ಸಮಾಜ ಅಧ್ಯಯನ, , ಸಂಗೀತ, ಕಲೆ, ದೈಹಿಕ ಶಿಕ್ಷಣ ವಿಷಯಗಳಲ್ಲಿ ನೇಮಕ ಮಾಡಲಾಗುತ್ತದೆ.ಓಎಂಆರ್‌ ಆಧಾರಿತ (ಪೆನ್‌ -ಪೇಪರ್) ಮಾದರಿಯಲ್ಲಿ ಇಎಂಆರ್‌ಎಸ್‌ ಸ್ಟಾಫ್‌ ಸೆಲೆಕ್ಷನ್‌ ಎಕ್ಸಾಮ್‌ ಅನ್ನು ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಲು, ಶುಲ್ಕ ಪಾವತಿಸಲು ದಿನಾಂಕ:

ಮುಂದಿನ ದಿನಗಳಲ್ಲಿ NESTS ವೆಬ್‌ಸೈಟ್‌ನಲ್ಲಿ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುವುದು.
18-08-2023 ರ ಸಂಜೆ 23-50 ಗಂಟೆವರೆಗೆ.
ವಾರ್ಡನ್‌ ಹುದ್ದೆಗೆ 150 ನಿಮಿಷದ ಪರೀಕ್ಷೆ ನಡೆಸಲಾಗುತ್ತದೆ.
ಬೋಧಕ ಹುದ್ದೆಗಳಿಗೆ 180 ನಿಮಿಷದ ಪರೀಕ್ಷೆ ಅವಧಿ,

ಅಪ್ಲಿಕೇಶನ್ ಶುಲ್ಕ ವಿವರ

ವಸತಿ ನಿಲಯ ಮೇಲ್ವಿಚಾರಕರು ಹುದ್ದೆಗೆ ರೂ.1000.
ತರಬೇತಿ ಹೊಂದಿದ ಪದವೀಧರ ಶಿಕ್ಷಕ ಹುದ್ದೆಗಳಿಗೆ ರೂ.1000.
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

ರಶ್ಮಿತಾ ಅನೀಶ್

Exit mobile version